• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇರಳ: ಎಕ್ಸಿಟ್ ಪೋಲ್ Vs ಅಂತಿಮ ಫಲಿತಾಂಶ ಸಮಗ್ರ ವಿವರ

|
Google Oneindia Kannada News

ಕೇರಳದಲ್ಲಿ ಪಿಣರಾಯಿ ವಿಜಯನ್ ಅವರು ಮತ್ತೊಂದು ಅವಧಿಗೆ ಅಧಿಕಾರಕ್ಕೇರಲಿದ್ದಾರೆ ಎಂದು ಮಾರ್ಚ್ ತಿಂಗಳ ತನಕ ಯಾರಿಗೂ ಸ್ಪಷ್ಟವಾಗಿರಲಿಲ್ಲ. ಶಬರಿಮಲೆ, ಕೋವಿಡ್ 19 ನಿಯಂತ್ರಣ, ಲಂಚ ಪ್ರಕರಣ, ಚಿನ್ನದ ಕಳ್ಳಸಾಗಣೆ, ಸಂಪುಟ ದರ್ಜೆ ಸಚಿವರ ಪ್ರಕರಣಗಳು, ಕಾಂಗ್ರೆಸ್ ಹಾಗೂ ಮುಸ್ಲಿಂ ಲೀಗ್ ರಣತಂತ್ರ ಎಲ್ಲವೂ ಸಿಪಿಎಂ ಗೆಲುವಿಗೆ ಮುಳುವಾಗಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮಾರ್ಚ್ ಅಂತಕ್ಕೆ ಪಿಣರಾಯಿ ಕೈ ಸೇರಿದ ಗುಪ್ತಚರ ವರದಿ ಹಾಗೂ ಸ್ಥಳೀಯ ಮಾಧ್ಯಮಗಳ ಎಕ್ಸಿಟ್ ಪೋಲ್ ವರದಿಗಳು ಇಂದು ಅಂತಿಮ ಫಲಿತಾಂಶಕ್ಕೆ ಬಹುತೇಕ ಹತ್ತಿರವಾಗಿವೆ ಎನ್ನಬಹುದು.

ಆಡಳಿತಾರೂಢ ಲೆಫ್ಟ್ ಡೆಮೊಕ್ರಾಟಿಕ್ ಫ್ರಂಟ್ (LDF) ಮತ್ತೊಮ್ಮೆ ಅಧಿಕಾರಕ್ಕೇರಿದೆ. ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ ಸರಳ ಬಹುಮತ ಗಳಿಸಲಿದ್ದು 85 ಸ್ಥಾನ ಗಳಿಸಲಿದೆ. ಶೇ 42ರಷ್ಟು ಮತ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 46 ಸ್ಥಾನ ಗಳಿಸಬಹುದು, ಶೇ 34ರಷ್ಟು ಮತ ಗಳಿಕೆ ಇದೆ. ಹಾಗೂ ಬಿಜೆಪಿ 3-7 ಸ್ಥಾನ ಗೆಲ್ಲಬಹುದು ಮತ್ತು ಶೇ 18ರಷ್ಟು ಮತ ಗಳಿಕೆ ಹೊಂದಲಿದೆ ಎಂದು ಆಂತರಿಕ ಸಮೀಕ್ಷೆ ಹೇಳಿತ್ತು.

2021ರ ಅಂತಿಮ ಫಲಿತಾಂಶದಂತೆ ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನ, ಯುಡಿಎಫ್ 41 ಸ್ಥಾನ ಗಳಿಸಿವೆ. ಬಿಜೆಪಿ ನೇತೃತ್ವದ ಎನ್‌ಡಿಎ ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. 2016ರಲ್ಲಿಎಲ್‌ಡಿಎಫ್ 91 ಸ್ಥಾನ, ಯುಡಿಎಫ್ 47 ಸ್ಥಾನ, ಎನ್‌ಡಿಎ 1 ಹಾಗೂ ಇತರೆ 1 ಸ್ಥಾನ ಎಂದು ಫಲಿತಾಂಶ ಬಂದಿತ್ತು. ಎಕ್ಸಿಟ್ ಪೋಲ್ ಪೈಕಿ ಯಾವ ಸಂಸ್ಥೆಯೀ 99 ಹತ್ತಿರಕ್ಕೆ ಅಂಕಿ ನೀಡದಿದ್ದರೂ ಕೈರಳಿ ನ್ಯೂಸ್ ಹಾಗೂ ಸಿಇಸಿ ಸಮೀಕ್ಷೆ 90 ಸ್ಥಾನ ಬರಲಿದೆ ಎಂದು ಹೇಳಿತ್ತು.

ಎಬಿಪಿಯ ಎರಡು ಸಮೀಕ್ಷೆ, ಟೈಮ್ಸ್ ನೌ- ಸಿ -ವೋಟರ್ ಸಂಸ್ಥೆ ನಡೆಸಿದ ಸಮೀಕ್ಷೆ ಹಾಗೂ ಮನೋರಮಾ ವಿಎಂಆರ್ ನಡೆಸಿದ್ದ ಎರಡು ಸಮೀಕ್ಷೆಗಳು ಕೂಡಾ ಪಿಣರಾಯಿ ವಿಜಯನ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವರದಿ ಬಂದಿತ್ತು. ಚುನಾವಣೋತ್ತರ ಸಮೀಕ್ಷೆಗಳಲ್ಲೂ ಪಿಣರಾಯಿ ವಿಜಯನ್ ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದೇ ವರದಿ ಬಂದಿತ್ತು.

ಸ್ಥಳೀಯ ಮಾಧ್ಯಮಗಳ ಪೈಕಿ ಕೈರಳಿ ಅಲ್ಲದೆ ಮಾತೃಭೂಮಿ 112 ಸ್ಥಾನ, ಟುಡೇಸ್ ಚಾಣಕ್ಕ್ಯ 102, ಇಂಡಿಯಾ ಟುಡೇ 112 ಸ್ಥಾನಗಳು ಎಲ್ ಡಿ ಎಫ್ ಪಾಲಾಗಲಿವೆ ಎಂದು ಹೇಳಿದ್ದವು. ಒಟ್ಟಾರೆ, 40 ವರ್ಷಗಳ ಬಳಿಕ ಸತತ ಎರಡನೇ ಅವಧಿಗೆ ಅಧಿಕಾರಕ್ಕೇರುವ ಮೂಲಕ ಪಿಣರಾಯಿ ವಿಜಯನ್ ಇತಿಹಾಸ ನಿರ್ಮಿಸಿದ್ದಾರೆ.

ಪಿಣರಾಯಿ ವಿಜಯನ್
Know all about
ಪಿಣರಾಯಿ ವಿಜಯನ್
ಕೇರಳ ಚುನಾವಣೋತ್ತರ ಸಮೀಕ್ಷೆಗಳು ಹೀಗಿದ್ದವು:
Times Now -C-voter:
-ಎಲ್‌ಡಿಎಫ್: 74; ಯುಡಿಎಫ್ : 65; ಎನ್‌ಡಿಎ+: 1; ಇತರೆ: 00
* Republic-CNX Exit Polls:
-ಎಲ್‌ಡಿಎಫ್: 76; ಯುಡಿಎಫ್ : 62; ಎನ್‌ಡಿಎ+: 2; ಇತರೆ: 00
* ABP C-Voter Exit Poll:
- ಎಲ್‌ಡಿಎಫ್: 71-77; ಯುಡಿಎಫ್ : 62-68; ಎನ್‌ಡಿಎ+: 0-2; ಇತರೆ: 00
Today's Chanakya:
- ಯುಡಿಎಫ್ : 102; ಎಲ್‌ಡಿಎಫ್: 71-77; ಎನ್‌ಡಿಎ+: 0-2; ಇತರೆ: 00
P-Marq:
- ಯುಡಿಎಫ್ :76; ಎಲ್‌ಡಿಎಫ್: 63; ಎನ್‌ಡಿಎ+:1; ಇತರೆ: 00
ಮೈ ಆಕ್ಸಿಸ್:
- ಯುಡಿಎಫ್ :111; ಎಲ್‌ಡಿಎಫ್: 28; ಎನ್‌ಡಿಎ+:1; ಇತರೆ: 00

ಸಮೀಕ್ಷೆಗಳ ಸಮೀಕ್ಷೆ: ಯುಡಿಎಫ್ : 88; ಎಲ್‌ಡಿಎಫ್: 51; ಎನ್‌ಡಿಎ+:2;

English summary
Kerala Election results 2021: Analysis on Exit Poll vs Actual final result as on May 2 by EC is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X