ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಹಿಳೆಯರಿಗೆ ಮಣೆ, ಆ 15 ಮಂದಿ ಯಾರು?

|
Google Oneindia Kannada News

ಸಾಮಾಜಿಕ ನ್ಯಾಯ, ಲಿಂಗ ಸಮಾನತೆಯಂಥ ವಿಚಾರವನ್ನು ಲೆಕ್ಕಕ್ಕೆ ತೆಗೆದುಕೊಂಡೇ ಅದು ಯಾವುದೇ ಚುನಾವಣೆ ಇದ್ದರೂ ಕಾಂಗ್ರೆಸ್ ನ ಟಿಕೆಟ್ ಗಳು ಹಂಚಿಕೆ ಆಗುತ್ತವೆ. ಈ ಸಲ ಕೂಡ, ಅಂದರೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಅದು ಪಾಲನೆ ಆಗಿದೆ. ಎಲ್ಲ ಜಾತಿ, ಧರ್ಮವನ್ನು ಒಳಗೊಂಡಂತೆ ಪಟ್ಟಿ ಸಿದ್ದಪಡಿಸಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಕುತೂಹಲ ಅಂಕಿ ಅಂಶಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿರುವ ಕುತೂಹಲ ಅಂಕಿ ಅಂಶ

ಆಸಕ್ತಿಕರ ವಿಷಯ ಏನೆಂದರೆ, ಹದಿನೈದು ಮಹಿಳೆಯರಿಗೆ ಈ ಸಲ ಪಕ್ಷದ ಟಿಕೆಟ್ ಘೋಷಣೆ ಆಗಿದೆ. ಯಾರು ಆ ಹದಿನೈದು ಮಹಿಳೆಯರು?

ಆ ಕ್ಷೇತ್ರಗಳು ಯಾವುದು ಎಂಬುದರ ವಿವರ ಇಲ್ಲಿದೆ.

ಬೆಳಗಾವಿ ಗ್ರಾಮೀಣ ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
ಖಾನಾಪುರ ಅಂಜಲಿ ನಿಂಬಾಳ್ಕರ್
ತೇರದಾಳ ಉಮಾಶ್ರೀ
ಕುಮಟಾ ಶಾರದಾ ಮೋಹನ್ ಶೆಟ್ಟಿ
ಜಗಳೂರು ಎ.ಎಲ್.ಪುಷ್ಪಾ
ರಾಜಾಜಿನಗರ ಜಿ.ಪದ್ಮಾವತಿ
ಜಯನಗರ ಆರ್.ಸೌಮ್ಯ
ಬೊಮ್ಮನಹಳ್ಳಿ ಸುಷ್ಮಾ ರಾಜ್ ಗೋಪಾಲ ರೆಡ್ಡಿ
ಬೇಲೂರು ಕೀರ್ತನಾ ರುದ್ರೇಶ್ ಗೌಡ
ಪುತ್ತೂರು ಶಕುಂತಲಾ ಶೆಟ್ಟಿ
ಕಲಬುರ್ಗಿ ಫಾತಿಮಾ ಖಮರುಲ್ ಇಸ್ಲಾಂ
ಗುಂಡ್ಲುಪೇಟೆ ಗೀತಾ ಮಹದೇವಪ್ರಸಾದ್
ಕೆಜಿಎಫ್ ರೂಪಾ ಶಶಿಧರ್
ಮೂಡಿಗೆರೆ ಮೋಟಮ್ಮ
ಚಿಂತಾಮಣಿ ವಾಣಿ ಕೃಷ್ಣಾರೆಡ್ಡಿ

ಅಂದಹಾಗೆ, ಕರ್ನಾಟಕ ವಿಧಾನಸಭೆ ಮೇ 12ರಂದು ಚುನಾವಣೆ ನಡೆಯಲಿದೆ. ಮೇ 15ನೇ ತಾರೀಕು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಂದು ಒಂದೇ ಹಂತದಲ್ಲಿ 218 ಕ್ಷೇತ್ರಗಳಿಗೆ ಕಾಂಗ್ರೆಸ್ ನಿಂದ ಟಿಕೆಟ್ ಘೋಷಣೆ ಮಾಡಲಾಗಿದೆ.

ಟಿಕೆಟ್ ಘೋಷಣೆ ಬೆನ್ನಿಗೆ ವಿವಿಧೆಡೆ ಪ್ರತಿಭಟನೆ ಹಾಗೂ ಆಕ್ರೋಶ ವ್ಯಕ್ತವಾಗಿದೆ.

Karnataka Elections: Congress ticket priority to woman candidates
English summary
Karnataka Assembly Elections 2018: Congress ticket priority to woman candidates. 15 candidates contesting from various constituencies here is the list of woman candidates, who got ticket from Congress. Umasri, Lakshmi Hebbalkar, R Sowmya, Motamma, Geetha Mahadevaprasad are major names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X