ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿತ್ರ ವರದಿ : ಪಂಚ ರಾಜ್ಯಗಳ ಚುನಾವಣೆ ದಿನಾಂಕ, ಮತ ಎಣಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ, ತೆಲಂಗಾಣ ಮತ್ತು ಛತ್ತೀಸ್‌ಗಢ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರು ಪ್ರಕಟಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ಎರಡು ಹಂತದಲ್ಲಿ ಮತದಾನ ಹಾಗೂ ಉಳಿದೆಡೆಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಇಂದಿನಿಂದಲೇ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದೆ ಎಂದು ಚುನಾವಣೆ ಆಯೋಗದ ಮುಖ್ಯ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್‌ 28ರಂದು ಮತದಾನ ನಡೆಯಲಿದ್ದು, ಛತ್ತೀಸ್‌ಗಢದ 18 ವಿಧಾನಸಭಾ ಕ್ಷೇತ್ರಗಳಿಗೆ ಮೊದಲನೇ ಹಂತವಾಗಿ ನವೆಂಬರ್‌ 12ರಂದು ಮತ್ತು ಎರಡನೇ ಹಂತವಾಗಿ 72 ಕ್ಷೇತ್ರಗಳಿಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ.

ಸಚಿತ್ರ : 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆಸಚಿತ್ರ : 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ

ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ನವೆಂಬರ್‌ 28ರಂದು ಮತದಾನ ನಡೆಯಲಿದ್ದು, ಛತ್ತೀಸ್‌ಗಢದ 18 ವಿಧಾನಸಭಾ ಕ್ಷೇತ್ರಗಳಿಗೆ ಮೊದಲನೇ ಹಂತವಾಗಿ ನವೆಂಬರ್‌ 12ರಂದು ಮತ್ತು ಎರಡನೇ ಹಂತವಾಗಿ 72 ಕ್ಷೇತ್ರಗಳಿಗೆ ನವೆಂಬರ್‌ 20ರಂದು ಮತದಾನ ನಡೆಯಲಿದೆ ಎಂದರು. ಡಿಸೆಂಬರ್‌ 11ಕ್ಕೆ ತೆಲಂಗಾಣ ಸೇರಿ ಐದು ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

ಛತ್ತೀಸ್‌ಗಢ ರಾಜ್ಯದ ಮೊದಲ ಹಂತದ ಚುನಾವಣೆ

ಛತ್ತೀಸ್‌ಗಢ ರಾಜ್ಯದ ಮೊದಲ ಹಂತದ ಚುನಾವಣೆ

* 90 ಕ್ಷೇತ್ರಗಳ ಪೈಕಿ 18 ವಿಧಾನಸಭಾ ಕ್ಷೇತ್ರಗಳಿಗೆ ಮೊದಲನೇ ಹಂತದಲ್ಲಿ ಚುನಾವಣೆ
* ಅಧಿಸೂಚನೆ ಪ್ರಕಟ : ಅಕ್ಟೋಬರ್ 16,2018.
* ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ : ಅಕ್ಟೋಬರ್ 23
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ಅಕ್ಟೋಬರ್ 26
* ಮತದಾನ ದಿನಾಂಕ : ನವೆಂಬರ್ 12, 2018
* ಮತ ಎಣಿಕೆ, ಫಲಿತಾಂಶ: ಡಿಸೆಂಬರ್ 11, 2018

ಛತ್ತೀಸ್‌ಗಢ ರಾಜ್ಯದ 2ನೇ ಹಂತದ ಚುನಾವಣೆ

ಛತ್ತೀಸ್‌ಗಢ ರಾಜ್ಯದ 2ನೇ ಹಂತದ ಚುನಾವಣೆ

* 90 ಕ್ಷೇತ್ರಗಳ ಪೈಕಿ 72 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ
* ಅಧಿಸೂಚನೆ ಪ್ರಕಟ : ಅಕ್ಟೋಬರ್ 16,2018.
* ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ : ನವೆಂಬರ್ 02
* ನಾಮಪತ್ರ ಪರಿಶೀಲನೆ : ನವೆಂಬರ್ 03
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ಅಕ್ಟೋಬರ್ 26
* ಮತದಾನ ದಿನಾಂಕ : ನವೆಂಬರ್ 20, 2018
* ಮತ ಎಣಿಕೆ, ಫಲಿತಾಂಶ: ಡಿಸೆಂಬರ್ 11, 2018

ಮಧ್ಯಪ್ರದೇಶ, ಮಿಜೋರಂ ಚುನಾವಣೆ ದಿನಾಂಕಗಳು

ಮಧ್ಯಪ್ರದೇಶ, ಮಿಜೋರಂ ಚುನಾವಣೆ ದಿನಾಂಕಗಳು

* ಮಧ್ಯಪ್ರದೇಶದಲ್ಲಿ 230 ಮತ್ತು ಮಿಜೋರಾಂನಲ್ಲಿ 40 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

* ಅಧಿಸೂಚನೆ ಪ್ರಕಟ : ನವೆಂಬರ್ 02
* ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ : ನವೆಂಬರ್ 09
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ನವೆಂಬರ್ 14
* ಮತದಾನ ದಿನಾಂಕ : ನವೆಂಬರ್ 28, 2018
* ಮತ ಎಣಿಕೆ, ಫಲಿತಾಂಶ: ಡಿಸೆಂಬರ್ 11, 2018

ರಾಜಸ್ಥಾನ ಹಾಗೂ ತೆಲಂಗಾಣದ ಚುನಾವಣೆ ದಿನಾಂಕ

ರಾಜಸ್ಥಾನ ಹಾಗೂ ತೆಲಂಗಾಣದ ಚುನಾವಣೆ ದಿನಾಂಕ

* ರಾಜಸ್ಥಾನದಲ್ಲಿ 200 ಹಾಗೂ ತೆಲಂಗಾಣದಲ್ಲಿ 119 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
* ಅಧಿಸೂಚನೆ ಪ್ರಕಟ : ನವೆಂಬರ್ 12.
* ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ : ನವೆಂಬರ್ 22
* ಮತದಾನ ದಿನಾಂಕ : ಡಿಸೆಂಬರ್ 07
* ಮತ ಎಣಿಕೆ, ಫಲಿತಾಂಶ: ಡಿಸೆಂಬರ್ 11, 2018

English summary
Infographics : Chief Election Commissioner OP Rawat in Delhi on Saturday(October 06) has announced Election dates for Madhya Pradesh, Rajasthan, Chhattisgarh and Mizoram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X