• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣ ಟೈಮ್ ಲೈನ್

|
   Sardar Vallabhai Patel Birth Anniversary : ಸರ್ದಾರ್ ಪಟೇಲ್ ಸ್ಮರಣೆಯ ಏಕತಾ ಪ್ರತಿಮೆ ನಿರ್ಮಾಣದ ಬಗೆಗಿನ ಮಾಹಿತಿ

   ಬೆಂಗಳೂರು, ಅಕ್ಟೋಬರ್ 30: ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯ್ ಪಟೇಲ್‌ ಅವರ ಸ್ಮರಣೆಗಾಗಿ ನಿರ್ಮಿಸಲಾಗಿರುವ 'ಏಕತಾ ಪ್ರತಿಮೆ' ಅಕ್ಟೋಬರ್ 31ರಂದು ಲೋಕರ್ಪಣೆಯಾಗಲಿದೆ.

   'ಉಕ್ಕಿನ ಮನುಷ್ಯ' ಸರ್ದಾರ್ ಪಟೇಲ್ ಪ್ರತಿಮೆ ನಿರ್ಮಿಸಿದ ಶಿಲ್ಪಿ ಯಾರು?

   ಪಟೇಲ್ ಅವರಿಗೆ ಸೂಕ್ತ ಗೌರವ ನೀಡಲು ಅವರ ಜನ್ಮದಿನವನ್ನು "ರಾಷ್ಟ್ರೀಯ ಏಕತಾ ದಿನ"ವನ್ನಾಗಿ ಆಚರಿಸಲು ಪ್ರಧಾನಿ ನಿರ್ಧರಿಸಿದ್ದಾರೆ. ಈ ಬೃಹತ್ ಪ್ರತಿಮೆಯು 182 ಮೀಟರ್ (ಸುಮಾರು 597 ಅಡಿ) ಎತ್ತರವಿರುವುದು ಹಾಗೂ ಅದನ್ನು ದಕ್ಷಿಣ ಗುಜರಾತ್‌ನಲ್ಲಿ ನರ್ಮದಾ ನದಿಗೆ ಕಟ್ಟಲಾಗಿರುವ ಸರ್ದಾರ್ ಸರೋವರ್ ಅಣೆಕಟ್ಟಿನ ಎದುರಿನಲ್ಲಿ ನಿರ್ಮಿಸಲಾಗಿದೆ.

   ಗುಜರಾತಿನ ಕರಮ್ ಸಂದ್ ನಲ್ಲಿ 1875ರ ಅಕ್ಟೋಬರ್ 31ರಂದು ಜನಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಕಾನೂನು ಪದವಿ ಪಡೆದಿದ್ದರೂ ಗಾಂಧೀಜಿ ಅವರ ಕರೆಗೆ ಓಗೊಟ್ಟು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಧುಮುಕಿ ಸ್ವತಂತ್ರ ಭಾರತಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದರು.

   ಸರ್ದಾರ್ ಪ್ರತಿಮೆಗೆ 200 ಕೋಟಿ ಟ್ವೀಟ್ ಲೋಕದಲ್ಲಿ ಶಾಕ್

   ಸ್ವಾತಂತ್ಯ ಸಿಕ್ಕ ನಂತರ ರಾಜ್ಯಗಳ ಪುನರ್ ವಿಂಗಡನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಸುಮಾರು 500ಕ್ಕೂ ಅಧಿಕ ರಾಜಮನೆತನ ಅಡಿಯಲ್ಲಿದ್ದ ರಾಜ್ಯಗಳನ್ನು ನೆಹರೂ ಸರ್ಕಾರದ ಸುಪರ್ದಿಗೆ ತಂದರು. ಇದಲ್ಲದೆ ಗುಜರಾತಿನ ಖೇದ, ಬೊರ್ಸದ್, ಬಾರ್ಡೋಲಿಗಳಲ್ಲಿ ರೈತರ ಪರ ಹೋರಾಟದಲ್ಲೂ ಪಟೇಲ್ ಅವರು ಪಾಲ್ಗೊಂಡಿದ್ದರು.

   75 ಸಾವಿರ ಕ್ಯೂಬಿಕ್ ಮೀಟರ್ ಕಾಂಕ್ರಿಟ್, 5700 ಮೆಟ್ರಿಕ್ ಟನ್ ಕಬ್ಬಿಣ, 18,500 ಉಕ್ಕು, 22,500 ಕಂಚು ಸೇರಿದಂತೆ ಮತ್ತಿತರ ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. 3400 ನೌಕರರು, 250 ಇಂಜಿನಿಯರ್ ಗಳು ಸಾಧು ಬೇಟ್ ದ್ವೀಪದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ ಅಂಡ್ ಟಿ ನಿರ್ಮಾಣದ ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಿರುವ ಶಿಲ್ಪಿ ರಾಮ್ ವಾನ್ಜಿ ಸುತಾರ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   The stage is set to unveil Sardar Patel’s Statue of Unity (SoU) at Kevadiya in Narmada district. Prime Minister Narendra Modi will dedicate the statue to the nation. Here is the info graphics timeline construction of Statue of Unity.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more