ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಗೋ ಹತ್ಯೆ ನಿಷೇಧ ವಿಧೇಯಕದ ಪ್ರಮುಖ ಅಂಶಗಳೇನು

|
Google Oneindia Kannada News

ಭಾರತದಲ್ಲಿ 1964ರಿಂದಲೇ ಗೋ ಹತ್ಯೆ ನಿಷೇಧ ಕಾನೂನು ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. 2010ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಈ ಕಾಯ್ದೆಗೆ ತಿದ್ದುಪಡಿ ತಂದು ಗೋ ಹತ್ಯೆ ವಿಧೇಯಕ ಮಂಡನೆ ಮಾಡಿ ಕಾನೂನು ತರಲು ಯತ್ನಿಸಿತ್ತು. ಆದರೆ, ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ವಿಧೇಯಕಕ್ಕೆ ಅಂಕಿತ ಹಾಕಿರಲಿಲ್ಲ.

ನಂತರ ಪ್ರಸ್ತಾವಿತ ವಿಧೇಯಕವನ್ನು ಕಾಂಗ್ರೆಸ್ ಸರ್ಕಾರ ಪಕ್ಕಕ್ಕೆ ತಳ್ಳಿತ್ತು. ಈಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಬಿಜೆಪಿ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ವಿಧಾನ ಪರಿಷತ್‌ನಲ್ಲಿ ಅಂಗೀಕಾರ ಪಡೆದ ಬಳಿಕ ರಾಜ್ಯಪಾಲರ ಅಂಕಿತದೊಂದಿಗೆ ವಿಧೇಯಕ ಕಾನೂನಾಗಲಿದೆ.

ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ?ಗೋ ಹತ್ಯೆ ನಿಷೇಧ: ಪ್ರಸ್ತಾವಿತ ಕಾಯ್ದೆಯಲ್ಲಿ ಏನೇನಿದೆ?

ಪ್ರಸ್ತಾವಿತ ವಿಧೇಯಕದಲ್ಲಿ ಗೋ ಹತ್ಯೆ ಮಾಡಿದರೆ ಈಗಿರುವ 3 ವರ್ಷದ ಜೈಲು ಶಿಕ್ಷೆ ಏಳು ವರ್ಷಕ್ಕೆ ಏರಿಕೆ ಆಗಲಿದೆ. ಮೊದಲ ಬಾರಿ ಅಪರಾಧ ಮಾಡಿದಲ್ಲಿ 50 ಸಾವಿರ ರೂ. ಇದ್ದ ದಂಡ ಇದೀಗ 5 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಇನ್ನು ಅದೇ ಅಪರಾಧವನ್ನು ಮತ್ತೆ ಮಾಡಿದಲ್ಲಿ ಪ್ರತಿ ಹಸುವಿನ ಹತ್ಯೆಗೆ 1 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ದಂಡ ಮತ್ತು ಏಳು ವರ್ಷಗಳ ಕಾಲ ಶಿಕ್ಷೆ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದ ಪ್ರಮುಖ ಅಂಶಗಳು ಸಚಿತ್ರ ವರದಿಯಲ್ಲಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಎಸ್.

Infographics: The Karnataka Prevention Of Slaughter And Preservation Of Cattle Bill 2020
Infographics: The Karnataka Prevention Of Slaughter And Preservation Of Cattle Bill 2020

English summary
Infographics: The Karnataka Prevention Of Slaughter And Preservation Of Cattle Bill 2020 tabled by BJP government and here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X