ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕೃತ ದರ

|
Google Oneindia Kannada News

ಬೆಂಗಳೂರು, ಸೆ.23: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ವಿಧಿಸುವ ದಂಡದ ಮೊತ್ತ ಹೆಚ್ಚಿಸಿ ಸೆ.01ರಿಂದ ಹೊಸ ನಿಯಮ ಜಾರಿಗೆ ತರಲಾಗಿತ್ತು. ಆದರೆ ದುಬಾರಿ ದಂಡದ ಪ್ರಮಾಣಕ್ಕೆ ದೇಶದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಸರ್ಕಾರ ಕೊನೆಗೂ ದುಬಾರಿ ದಂಡವನ್ನು ತಗ್ಗಿಸಿ ಅಧಿಕೃತ ಆದೇಶ ಹೊರಡಿಸಿದೆ.

ಟ್ರಾಫಿಕ್ ದಂಡ ಇಳಿಕೆ ಅಧಿಕೃತ: ಯಾವ ಉಲ್ಲಂಘನೆಗೆ ಎಷ್ಟು ದಂಡ?ಟ್ರಾಫಿಕ್ ದಂಡ ಇಳಿಕೆ ಅಧಿಕೃತ: ಯಾವ ಉಲ್ಲಂಘನೆಗೆ ಎಷ್ಟು ದಂಡ?

ಹೆಲ್ಮೆಟ್ ಧರಿಸದೆ ಇದ್ದರೆ ವಿಧಿಸಲಾಗುತ್ತಿದ್ದ 1,000 ರೂ. ಇದ್ದ ದಂಡ ಮೊತ್ತವನ್ನು 500 ರೂ.ಗೆ ಇಳಿಸಲಾಗಿದೆ. ಪರವಾನಗಿ ರಹಿತ ವಾಹನ ಚಾಲನೆಗೆ ಇದ್ದ ದಂಡ ಪ್ರಮಾಣವನ್ನು 10,000 ದಿಂದ 5,000ಕ್ಕೆ ಇಳಿಸಲಾಗಿದೆ.

ಟಿಕೆಟ್ ಇಲ್ಲದೆ ಪ್ರಯಾಣಕ್ಕೆ 500 ರೂ. ವಿಧಿಸಲಾಗುತ್ತದೆ. ವಾಹನಗಳ ಮಾಹಿತಿ ನೀಡದೆ ಇದ್ದರೆ ವಿಧಿಸಲಾಗುವ ದಂಡವನ್ನು 1,000ಕ್ಕೆ ಇಳಿಸಲಾಗಿದೆ.

ಆದರೆ ಕುಡಿದು ವಾಹನ ಚಾಲನೆ ಮಾಡುವುದರ ಮೇಲೆ ವಿಧಿಸಲಾಗುವ ದಂಡದ ಪ್ರಮಾಣವನ್ನು ಇಳಿಕೆ ಮಾಡಿಲ್ಲ. ಕುಡಿದು ಚಾಲನೆ ಮಾಡಿದರೆ 10,000 ರೂ. ದಂಡ ತೆರವುದು ಅನಿವಾರ್ಯ ಎಂದು ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕಾಣಬಹುದು.

ಸಂಚಾರಿ ನಿಯಮ ಉಲ್ಲಂಘನೆ ದಂಡ(ಪರಿಷ್ಕೃತ)ಯಾವ ತಪ್ಪಿಗೆ ಎಷ್ಟು ದರ? ಚಿತ್ರದಲ್ಲಿ ನೋಡಿ:

Infographics: Karnataka Govt reduces Traffic violation fine
English summary
Infographics lists out revised rates for Traffic violation fines. Karnataka government has officially declared the reduction in traffic violation fine amounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X