ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ 4.0 ನಡುವೆ ಸಂಚಾರ, ಇಲ್ಲಿದೆ ಸಮಗ್ರ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 25: ಕೊರೊನಾವೈರಸ್ ನಿಯಂತ್ರಿಸಲು ನಿರ್ಣಾಯಕ ಹೋರಾಟ ನಡೆಸಿರುವ ಕೇಂದ್ರ ಸರ್ಕಾರ, ಹಂತ ಹಂತವಾಗಿ ಲಾಕ್ಡೌನ್ ವಿಧಿಸುತ್ತಿದೆ. ಆದರೆ, ಲಾಕ್ಡೌನ್ 4.0 ಅವಧಿಯಲ್ಲಿ ಸಾರಿಗೆ, ಸಂಚಾರಕ್ಕೆ ಅನುಮತಿ, ವಿನಾಯಿತಿ ನೀಡಲಾಗಿದೆ. ದೇಶಿ ವಿಮಾನಯಾನ, ರಾಜ್ಯಗಳ ನಡುವೆ ಬಸ್ ಸಂಚಾರ, ಪ್ಯಾಸೆಂಜರ್ ರೈಲು ಓಡಾಟಕ್ಕೂ ಗೃಹ ಸಚಿವಾಲಯ ಅನುಮತಿ ನೀಡಿದೆ. ಈ ಎಲ್ಲಾ ಸಾರಿಗೆ ಸಂಪರ್ಕ ಬಳಸಿ ಲಾಕ್ಡೌನ್ ನಡುವೆ ಸಂಚರಿಸಲು ಪ್ರಯಾಣಿಕರಿಗೆ ಅಗತ್ಯವಾದ ಮಾರ್ಗಸೂಚಿಗಳ ಸುದ್ದಿಚಿತ್ರ ಇಲ್ಲಿದೆ

Recommended Video

2ತಿಂಗಳುಗಳ ಬಳಿಕ ಹಾರಾಡುತ್ತಿವೆ ಪ್ರಾದೇಶಿಕ ವಿಮಾನಗಳು | Domestic Flight Resumed | Kalburgi

ಬಸ್, ರೈಲು, ವಿಮಾನ ಅಥವಾ ಖಾಸಗಿ ಕಾರು ವಾಹನ ಯಾವುದೇ ಇರಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೆಲ ನಿಯಮಗಳು ಕಡ್ಡಾಯವಾಗಿದೆ. ಇದು ಪ್ರಯಾಣಿಕರಿಗಲ್ಲದೆ, ಸಿಬ್ಬಂದಿಗೂ ಅನ್ವಯವಾಗತ್ತದೆ. ಜೊತೆಗೆ ಬಸ್, ರೈಲು, ವಿಮಾನ ನಿಲ್ದಾಣದ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ.

ದೇಶೀಯ ವಿಮಾನಯಾನ ಆರಂಭ: ಕರ್ನಾಟಕಕ್ಕೆ ಬರುವವರಿಗೆ 'ಈ' ನಿಯಮಗಳು ಕಡ್ಡಾಯ!ದೇಶೀಯ ವಿಮಾನಯಾನ ಆರಂಭ: ಕರ್ನಾಟಕಕ್ಕೆ ಬರುವವರಿಗೆ 'ಈ' ನಿಯಮಗಳು ಕಡ್ಡಾಯ!

ಸೇವಾ ಸಿಂಧು ಪೋರ್ಟಲ್ ನಿಂದ ಅನುಮತಿ ಪಡೆಯುವುದು ಕಡ್ಡಾಯವೇ.? ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಪಾಸ್ ಕಡ್ಡಾಯವೇ? ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋದರೆ ಕ್ವಾರಂಟೈನ್ ನಲ್ಲಿರಬೇಕೆ? ಎಂಬ ಹಲವು ಪ್ರಶ್ನೆಗಳು ಮತ್ತೆ ಮತ್ತೆ ಕೇಳಿ ಬರುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಪಡೆದುಕೊಳ್ಳಬಹುದು.

ಅಂತಾರಾಷ್ಟ್ರೀಯ, ದೇಶೀಯ ಪ್ರಯಾಣಿಕರಿಗೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿಅಂತಾರಾಷ್ಟ್ರೀಯ, ದೇಶೀಯ ಪ್ರಯಾಣಿಕರಿಗೆ ಆರೋಗ್ಯ ಸಚಿವಾಲಯದ ಮಾರ್ಗಸೂಚಿ

ಸುಮಾರು ಎರಡು ತಿಂಗಳ ಬಳಿಕ ಆರಂಭವಾದ ಬಸ್ ಸಂಚಾರ, ಶ್ರಮಿಕ ರೈಲು ನಂತರ ಪ್ಯಾಸೆಂಜರ್ ರೈಲು ಸಂಚಾರ, ವಂದೇ ಭಾರತ್ ಮಿಷನ್ ವಿಶೇಷ ವಿಮಾನ ನಂತರ ದೇಶಿ ವಿಮಾನಯಾನ ಸಂಪರ್ಕ ಎಲ್ಲದರಲ್ಲೂ ಪಾಲಿಸಬೇಕಾದ ನಿಗದಿತ ಕಾರ್ಯಾಚರಣೆ ವಿಧಾನಗಳನ್ನು (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಹಾಗೂ ಮಾರ್ಗಸೂಚಿಯನ್ನು ಇಲ್ಲಿ ಇನ್ಫೋಗ್ರಾಫಿಕ್ಸ್ ರೂಪದಲ್ಲಿ ನೀಡಲಾಗಿದೆ.
ವಿನ್ಯಾಸ: ಭರತ್ ಎಚ್. ಸಿ

1. ವಲಸೆ ಕಾರ್ಮಿಕರ ರೈಲು ಸಂಚಾರಕ್ಕೆ ಮಾರ್ಗಸೂಚಿ

Infographics: Guidelines, SOPs for the passengers travelling in and out of Karnataka

2. ಪ್ಯಾಸೆಂಜರ್ ರೈಲು ಪ್ರಯಾಣಿಕರಿಗೆ ಮಾರ್ಗಸೂಚಿ

Infographics: Guidelines, SOPs for the passengers travelling in and out of Karnataka

3. ರೈಲು ಟಿಕೆಟ್ ಬುಕ್ ಮಾಡುವುದು ಹೇಗೆ?

Infographics: Guidelines, SOPs for the passengers travelling in and out of Karnataka

4. ದೇಶಿ ವಿಮಾನ ಸಂಚಾರದ ವೇಳೆ ಪಾಲಿಸಬೇಕಾದ ನಿಯಮಗಳು

Infographics: Guidelines, SOPs for the passengers travelling in and out of Karnataka

5. ಕೆಎಸ್ಸಾರ್ಟಿಸಿ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ನಿಯಮಗಳು

Infographics: Guidelines, SOPs for the passengers travelling in and out of Karnataka

6. ಕೆಎಸ್ಸಾರ್ಟಿಸಿ, ಬಿಎಂಟಿಸಿ ಪ್ರಯಾಣಿಕರಿಗೆ ನಿಯಮಗಳು

Infographics: Guidelines, SOPs for the passengers travelling in and out of Karnataka

ಇದು ಅಂತಾರಾಷ್ಟ್ರೀಯ ಹಾಗೂ ದೇಶೀಯ ಪ್ರಯಾಣಿಕರಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗಸೂಚಿಯಾಗಿದೆ.ವಿದೇಶದಿಂದ ಬರುವ ಎಲ್ಲಾ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ. ಏಳು ದಿನಗಳ ಕಾಲ ಇನ್‌ಸ್ಟಿಟ್ಯೂಷನಲ್ ಕ್ವಾರಂಟೈನ್ ಇರಲಿದ್ದು, ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕು.

English summary
Amid of Coronavirus Lockdown 4.0 Government has annouced guidelines, Standard Operating Procedure(SOPs) for the passengers travelling in and out of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X