ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಸೆ.01ರಿಂದ ತೆರಿಗೆ, ಟಿಕೆಟ್ ಬುಕ್ಕಿಂಗ್ ಸೇರಿ ಏನೆಲ್ಲ ಬದಲಾವಣೆ?

|
Google Oneindia Kannada News

ನವದೆಹಲಿ, ಸೆ. 01: ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ, ಸೆ.01ರಿಂದ ಸಂಚಾರಿ ನಿಯಮ ಉಲ್ಲಂಘಿಸುವವರು ಭಾರಿ ದಂಡ ತೆರಬೇಕಾಗುತ್ತದೆ. ಇನ್ನೊಂದೆಡೆ, ಸೆ.01ರಿಂದ ತೆರಿಗೆ ನಿಯಮಗಳು ಬದಲಾಗಿದ್ದು, ಗ್ರಾಹಕರಿಗೆ ಎರಡು ಕೂಡಾ ಹೊರೆ ಎನಿಸಬಹುದು.

ಇದಲ್ಲದೆ, ರೈಲ್ವೆ ಟಿಕೆಟ್ ಆನ್ ಲೈನ್ ಬುಕ್ಕಿಂಗ್ ದರ ಕೂಡಾ ಬದಲಾಗಲಿದೆ. ಎ.ಸಿ ಬೋಗಿಗಳಿಗೆ 30 ರೂ., ಎ.ಸಿಯೇತರ ಬೋಗಿಗಳಿಗೆ 15 ರೂ., ಜಿಎಸ್​ಟಿ ಅನ್ವಯಿಸಲಿದೆ.

ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಹೊಂದಿರುವ ಖಾತೆಯಿಂದ ವಾರ್ಷಿಕವಾಗಿ 1 ಕೋಟಿ ರೂ. ಗಿಂತ ಹೆಚ್ಚು ನಗದು ಹಣ ವಿತ್​ಡ್ರಾ ಮಾಡಿದರೆ ಶೇ.2 ಟಿಡಿಎಸ್ ಕಡಿತ ಸೇರಿದಂತೆ ಕಳೆದ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ತೆರಿಗೆ ಮಾರ್ಪಾಟುಗಳು ಸೆಪ್ಟೆಂಬರ್ 01, 2019ರಿಂದ ಜಾರಿಗೆ ಬರಲಿವೆ.

ಹೊಸ ಟ್ರಾಫಿಕ್ ನಿಯಮ ಮುಂದಿನ 3 ದಿನ ಬೆಂಗಳೂರಿಗೆ ಅನ್ವಯಿಸೋದಿಲ್ಲಹೊಸ ಟ್ರಾಫಿಕ್ ನಿಯಮ ಮುಂದಿನ 3 ದಿನ ಬೆಂಗಳೂರಿಗೆ ಅನ್ವಯಿಸೋದಿಲ್ಲ

ಇದರಲ್ಲಿ ಹೆಚ್ಚಾಗಿ ಟಿಡಿಎಸ್ ಕಡಿತಕ್ಕೆ ಸಂಬಂಧಿಸಿದ ಬದಲಾವಣೆಗಳೇ ಅಧಿಕವಾಗಿವೆ. ಜೀವ ವಿಮೆ ಮೆಚ್ಯುರಿಟಿಯಿಂದ ಸಿಗುವ ನಿವ್ವಳ ಆದಾಯದ ಮೇಲೆ ಶೇ.5 ಟಿಡಿಎಸ್ ಕಡಿತ ಮಾಡಬಹುದು. ವಿಮೆ ಮೆಚ್ಯುರಿಟಿಯಿಂದ ಸಿಕ್ಕ ಒಟ್ಟು ಮೊತ್ತದಿಂದ ವಿಮೆ ಪ್ರೀಮಿಯಂ ಒಟ್ಟು ಮೊತ್ತ ಕಳೆದು ಉಳಿದ ಮೊತ್ತದ ಮೇಲೆ ಟಿಡಿಎಸ್ ಕಡಿತ ಆಗುತ್ತದೆ. ಇನ್ನು ಪ್ಯಾನ್ ಕಾರ್ಡನ್ನು ಆಧಾರ್ ಜತೆ ಲಿಂಕ್ ಮಾಡದಿದ್ದರೆ, ಆದಾಯ ಇಲಾಖೆಯಿಂದ ಹೊಸ ಪ್ಯಾನ್ ಪಡೆದುಕೊಳ್ಳಬೇಕಾಗುತ್ತದೆ.

Infographics: Changes in TDS, Income Tax, Ticket booking Traffic rules fee from Sept 1

Infographics: Changes In Tds, Income Tax, Ticket Booking Traffic Rules Fee From Sept 1
English summary
Here are the list of 10 changes that will come in to effect from Sept 01, 2019. The List includes changes in TDS, Income Tax, Ticket booking, traffic rules violation fee and so on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X