ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿತರು ಚೇತರಿಕೆ

|
Google Oneindia Kannada News

ನವದೆಹಲಿ, ಮೇ 18: ದೇಶದಲ್ಲಿ ಮೊದಲ ಬಾರಿಗೆ ಒಂದೇ ದಿನ 4 ಲಕ್ಷ ಮಂದಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ 4,22,436 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ, ಕಳೆದ 14 ದಿನಗಳಲ್ಲಿ 3,55,944ಕ್ಕೂ ಅಧಿಕ ಸರಾಸರಿ ದೈನಂದಿನ ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 2,63,533 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಇದುವರೆಗೂ ನೀಡಲಾದ ಒಟ್ಟಾರೆ ಡೋಸ್‌ಗಳಲ್ಲಿ 66.70%ರಷ್ಟನ್ನು ಹತ್ತು ರಾಜ್ಯಗಳಲ್ಲಿ ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ 18-44 ವರ್ಷ ವಯೋಮಾನದ 6,69,884 ಫಲಾನುಭವಿಗಳು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ ಮತ್ತು 3ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆಯ ಸಿಕ್ಕಾಗಿನಿಂದಲೂ ಇದುವರೆಗೂ 36 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವಯೋಮಾನದ ಒಟ್ಟು 59,39,290 ಫಲಾನುಭವಿಗಳು ಲಸಿಕೆಯ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಕೆಳಗಿನ ನಕ್ಷೆಯು ಕಳೆದ 14 ದಿನಗಳ ದೈನಂದಿನ ಚೇತರಿಕೆಯನ್ನು ವಿವರಿಸುತ್ತದೆ.

ಲಸಿಕೆ ಅಭಿಯಾನದ 122ನೇ ದಿನದಂದು (ಮೇ 17, 2021) 15,10,418 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. 14,447 ಸೆಷನ್‌ಗಳಲ್ಲಿ, 12,67,201 ಫಲಾನುಭವಿಗಳಿಗೆ 1ನೇ ಡೋಸ್ ಲಸಿಕೆ ನೀಡಲಾಯಿತು ಮತ್ತು 2,43,217 ಫಲಾನುಭವಿಗಳು ತಮ್ಮ 2ನೇ ಡೋಸ್ ಲಸಿಕೆಯನ್ನು ಪಡೆದುಕೊಂಡರು.

ಕಳೆದ 24 ಗಂಟೆಗಳಲ್ಲಿ ಹತ್ತು ರಾಜ್ಯಗಳಲ್ಲಿ 74.54% ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ ಅತ್ಯಧಿಕ ಅಂದರೆ, 38,603 ದೈನಂದಿನ ಹೊಸ ಪ್ರಕರಣಗಳು ದಾಖಲಾಗಿವೆ. 33,075 ಹೊಸ ಪ್ರಕರಣಗಳೊಂದಿಗೆ ತಮಿಳುನಾಡು ನಂತರದ ಸ್ಥಾನದಲ್ಲಿದೆ.

ಮೂರು ಲಕ್ಷಕ್ಕಿಂತ ಕಡಿಮೆ ಪ್ರಕರಣ

ಮೂರು ಲಕ್ಷಕ್ಕಿಂತ ಕಡಿಮೆ ಪ್ರಕರಣ

ಈಗ ಸತತ ಎರಡನೇ ದಿನ 3 ಲಕ್ಷಕ್ಕಿಂತಲೂ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಹೊರೆಯಲ್ಲಿ 1,63,232 ಪ್ರಕರಣಗಳ ನಿವ್ವಳ ಕುಸಿತ ದಾಖಲಾಗಿದೆ.
2021ರ ಮಾರ್ಚ್ 13 ರಿಂದ ಭಾರತದ ದೈನಂದಿನ ಹೊಸ ಪ್ರಕರಣಗಳ ಚಲನೆಯ ಪಥ ಮತ್ತು ಚೇತರಿಕೆ ಪ್ರಕರಣಗಳನ್ನು ಕೆಳಗೆ ಚಿತ್ರಿಸಲಾಗಿದೆ.

ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಕರಣಗಳು ಎಷ್ಟಿವೆ?

ದೇಶದಲ್ಲಿ ಒಟ್ಟಾರೆ ಚೇತರಿಕೆ ಪ್ರಕರಣಗಳು ಎಷ್ಟಿವೆ?

ಭಾರತದ ಒಟ್ಟಾರೆ ಚೇತರಿಕೆ ಪ್ರಕರಣಗಳ ಸಂಖ್ಯೆ ಇಂದು 2,15,96,512 ಕ್ಕೆ ತಲುಪಿದೆ. ರಾಷ್ಟ್ರೀಯ ಚೇತರಿಕೆ ದರವು ಮತ್ತಷ್ಟು ಸುಧಾರಿಸಿ ಶೇ. 85. 60ಕ್ಕೆ ತಲುಪಿದೆ.
ಹೊಸ ಚೇತರಿಕೆ ಪ್ರಕರಣಗಳಲ್ಲಿ ಹತ್ತು ರಾಜ್ಯಗಳು 75.77% ರಷ್ಟು ಪಾಲು ಹೊಂದಿವೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆ

ಮತ್ತೊಂದೆಡೆ, ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ ಇಂದು 33,53,765ಕ್ಕೆ ಇಳಿಕೆಯಾಗಿದೆ. ಇದು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳ ಶೇ. 13.29ರಷ್ಟಿದೆ. ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ 8 ರಾಜ್ಯಗಳ ಒಟ್ಟು ಪಾಲು ಶೇ. 69.01% ರಷ್ಟಿದೆ.

ಲಸಿಕೆ ಅಭಿಯಾನ

ಲಸಿಕೆ ಅಭಿಯಾನ

ರಾಷ್ಟ್ರವ್ಯಾಪಿ 3ನೇ ಹಂತದ ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ನೀಡಲಾದ ಕೋವಿಡ್‌-19 ಲಸಿಕೆ ಡೋಸ್‌ಗಳ ಸಂಖ್ಯೆ ಇಂದು ಸುಮಾರು 18.44 ಕೋಟಿಗೆ ತಲುಪಿದೆ.
ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 26,87,638 ಸೆಷನ್‌ಗಳ ಮೂಲಕ ಒಟ್ಟು 18,44,53,149 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ 1ನೇ ಡೋಸ್ ತೆಗೆದುಕೊಂಡ 96,59,441 ಆರೋಗ್ಯ ಕಾರ್ಯಕರ್ತರು ಮತ್ತು 2ನೇ ಡೋಸ್‌ ತೆಗೆದುಕೊಂಡ 66,52,389 ಆರೋಗ್ಯ ಕಾರ್ಯರ್ತರು; 1ನೇ ಡೋಸ್‌ ಪಡೆದ 1,45,00,303 ಮುಂಚೂಣಿ ಕಾರ್ಯಕರ್ತರು; 2ನೇ ಡೋಸ್‌ ಪಡೆದ 82,17,075 ಮುಂಚೂಣಿ ಕಾರ್ಯಕರ್ತರು; ಮೊದಲ ಡೋಸ್‌ ಪಡೆದ 18-44 ವರ್ಷದೊಳಗಿನ 59,39,290 ಫಲಾನುಭವಿಗಳು, 1ನೇ ಡೋಸ್‌ ಪಡೆದ 5,76,64,616 45-60 ವಯೋಮಾನದ ಫಲಾನುಭವಿಗಳು ಹಾಗೂ ಎರಡನೇ ಡೋಸ್‌ ಪಡೆದ 92,43,104 ಮಂದಿ 45 ರಿಂದ 60 ವರ್ಷ ವಯಸ್ಸಿನವರು; ಮೊದಲ ಡೋಸ್‌ ಪಡೆದ 5,46,64,577 ಮಂದಿ 60 ವರ್ಷ ಮೀರಿದ ಫಲಾನುಭವಿಗಳು ಹಾಗೂ 2ನೇ ಡೋಸ್‌ ಪಡೆದ 1,79,12,354 ಮಂದಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಫಲಾನುಭವಿಗಳು ಸೇರಿದ್ದಾರೆ.

English summary
The country on Tuesday recorded daily recoveries of more than 4 lakh COVID patients in a single day for the first time. With 4,22,436 recoveries reported in the last 24 hours, India recorded its highest-ever single-day COVID-19 recoveries on Tuesday, informed Lav Aggarwal, Joint Secretary in the Union Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X