• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಪಿಎಂಗಳು

|

ಭಾರತದ ಸ್ವಾತಂತ್ರ್ಯ ದಿನದಂದು ಪ್ರತಿವರ್ಷ ಆಗಸ್ಟ್ 15 ರಂದು ಪ್ರಧಾನ ಮಂತ್ರಿಗಳು ಭಾರತದ "ತ್ರಿವರ್ಣ ಧ್ವಜ" ವನ್ನು ಹಾರಿಸುತ್ತಾರೆ. ನಂತರ ದೇಶದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೆಂಪುಕೋಟೆ ವೇದಿಕೆ ಒದಗಿಸುತ್ತದೆ. ನೆಹರೂ ಅವರಿಂದ ಮೋದಿ ತನಕ ಭಾರತ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳ ಪಟ್ಟಿ ಇಲ್ಲಿದೆ..

ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಒಂದು ಕಾಲದ ಮೊಘಲರ ಅರಮನೆಯಾದ ಕೆಂಪು ಕೋಟೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅಂದರೆ 1947 ಆಗಸ್ಟ್ 15 ರಂದು ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಧ್ವಜವನ್ನು ಹಾರಿಸಿದರು. ಇದೇ ದಿನ ಭಾರತೀಯ ಸೈನ್ಯದ ಅನೇಕ ತುಕಡಿಗಳು ಇಲ್ಲಿ ಪ್ರಭಾತಭೇರಿ (ಪೆರೇಡ್) ನಡೆಸುತ್ತವೆ. ಹಾಗೆಯೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬರುವ ಸಾಂಸ್ಕೃತಿಕ ಪ್ರದರ್ಶನಗಳ ಮೆರವಣಿಗೆ ನಡೆಯುತ್ತದೆ. ಇದೇ ಸಂದರ್ಭದಲ್ಲಿಯೇ ಭಾರತದ ರಕ್ಷಣೆಗೆ ಅತ್ಯುನ್ನತ ಸೇವೆ ನೀಡಿದ ಸೈನಿಕರಿಗೆ ಪರಮ್ ವೀರ್ ಚಕ್ರ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತದೆ.

ಇಲ್ಲಿ ಮುಮ್ತಾಜ್ ಮಹಲ್ ಮ್ಯೂಸಿಯಂ, ಮೋತಿ ಮಸೀದಿ, ರಂಗ್ ಮಹಲ್, ವಸ್ತು ಸಂಗ್ರಹಾಲಯ, ಬ್ಲಡ್ ಪೇಂಟಿಂಗ್ ಮ್ಯೂಸಿಯಂ, ಯುದ್ಧ ಪ್ರದರ್ಶನ ಕೊಠಡಿಗಳು ಕೂಡ ಈ ಕೋಟೆಯಲ್ಲಿ ಕಾಣಬಹುದಾಗಿದೆ.

ಈ ಸುಂದರವಾದ ಕೋಟೆಯ ಪ್ರವೇಶವನ್ನು ಪಡೆಯಲು ಬೆಳಗ್ಗೆ 9:30 ರಿಂದ ಸಂಜೆ 4:30 ರವರೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಈ ಕೋಟೆಯ ದರ್ಶನವನ್ನು ಪಡೆಯಲು ಬರುತ್ತಾರೆ. ಈ ಐತಿಹಾಸಿಕ ಕೋಟೆಯನ್ನು ಕಾಣಲು ಪ್ರವೇಶ ಶುಲ್ಕವನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಾರತೀಯರಿಗೆ ರೂ 10 ಹಾಗೂ ವಿದೇಶಿಯರಿಗೆ ರೂ 150.

ಭಾರತ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿಗಳ ಪಟ್ಟಿ

ನೆಹರೂ ಅವರು ಅತಿ ಹೆಚ್ಚು 17 ಬಾರಿ, ಇಂದಿರಾಗಾಂಧಿ ಅವರು 16 ಬಾರಿ, ಮನಮೋಹನ್ ಸಿಂಗ್ 10 ಬಾರಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು 7 ಬಾರಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಗುಲ್ಜಾರಿಲಾಲ್ ನಂದಾ ಹಾಗೂ ಚಂದ್ರಶೇಖರ್ ಅವರು ತಮ್ಮ ಅವಧಿಯಲ್ಲಿ ಧ್ವಜ ಹಾರಿಸುವ ಅವಕಾಶದಿಂದ ವಂಚಿತರಾಗಿದ್ದರು. ಒಟ್ಟಾರೆ, 74 ವರ್ಷಗಳಲ್ಲಿ 14 ಮಂದಿ ಪ್ರಧಾನಿಗಳು ತ್ರಿವರ್ಣ ಧ್ವಜ ಹಾರಿಸಿ, ವಂದಿಸಿದ್ದಾರೆ.

English summary
Independence Day 2020: Prime Ministers who unfurled the national flag at the Red Fort in the last 74 years. 14 PMs unfurled the flag and 2 didn't get chance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X