ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಪುಣೆಯಿಂದ ಕೊರೊನಾ ಲಸಿಕೆ ಸಾಗಿ ಬಂದ ಹಾದಿ

|
Google Oneindia Kannada News

ಬೆಂಗಳೂರು, ಜನವರಿ.13: ದೇಶಾದ್ಯಂತ ಜನವರಿ.16ರಿಂದ ಕೊರೊನಾವೈರಸ್ ಲಸಿಕೆ ವಿತರಣೆ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೊದಲ ಹಂತದಲ್ಲಿ ವೈದ್ಯಕೀಯ ಸಿಬ್ಬಂದಿ, 50 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರಿಗೆ ಲಸಿಕೆ ನೀಡುವಲ್ಲಿ ಆದ್ಯತೆ ನೀಡುವುದಕ್ಕೆ ತೀರ್ಮಾನಿಸಲಾಗಿದೆ.

ಕೇಂದ್ರ ಸರ್ಕಾರವು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಿಂದ ಮೊದಲ ಹಂತದಲ್ಲಿ 1.1 ಕೋಟಿ ಡೋಸ್ ಕೊವಿಶೀಲ್ಡ್ ಲಸಿಕೆ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ತದನಂತರ ಏಪ್ರಿಲ್ ನಲ್ಲಿ ಹೆಚ್ಚುವರಿ ಆಗಿ 4.5 ಕೋಟಿ ಡೋಸ್ ಲಸಿಕೆ ಖರೀದಿಸಲಾಗುತ್ತದೆ. ಇದರ ಜೊತೆಗೆ ಭಾರತ್ ಬಯೋಟೆಕ್ ಸಂಸ್ಥೆಯಿಂದ 55 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಸಲಾಗುತ್ತಿದೆ.

ದೂರದ ಪುಣೆಯಿಂದ ನಿಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಲಸಿಕೆ ತಲುಪಿದ್ದು ಹೇಗೆ?ದೂರದ ಪುಣೆಯಿಂದ ನಿಮ್ಮೂರಿನ ಆರೋಗ್ಯ ಕೇಂದ್ರಕ್ಕೆ ಲಸಿಕೆ ತಲುಪಿದ್ದು ಹೇಗೆ?

ಡಿಸೆಂಬರ್.12ರಂದೇ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯಿಂದ ಮೊದಲ ಹಂತದಲ್ಲಿ ದೇಶದ 13 ಕಡೆಗಳಿಗೆ 54.72 ಲಕ್ಷ ಕೊವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಕಳುಹಿಸಿ ಕೊಟ್ಟಿದೆ.

ಮಹಾರಾಷ್ಟ್ರದ ಪುಣೆಯಿಂದ ಕರ್ನಾಟಕದಲ್ಲಿರುವ ನಿಮ್ಮ ಜಿಲ್ಲೆಯ ನಿಮ್ಮದೇ ತಾಲೂಕಿನ ನಿಮ್ಮ ಪಕ್ಕದ ಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರದವರೆಗೆ ಕೊವಿಶೀಲ್ಡ್ ಲಸಿಕೆ ತಲುಪಿದ್ದು ಹೇಗೆ ಎನ್ನುವ ಕುತೂಹಲಕ್ಕೆ ಈ ಚಿತ್ರದಲ್ಲಿ ಉತ್ತರ ಸಿಗಲಿದೆ. (ಚಿತ್ರ ವಿನ್ಯಾಸ: ಭರತ್ ಹೆಚ್.ಸಿ)

How Will Covid-19 Vaccine Reach You: A Step-By-Step Guide

English summary
Covid-19 Vaccination In India: How Will Covid-19 Vaccine Reach You. Here Is The Step By Step Guide. Take A Look.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X