ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸ್ಕವರಿ ಕನ್ನಡ ವಾಹಿನಿ ನೋಡಲು ಡಿಟಿಎಚ್ ಸೆಟಪ್ ಹೇಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಡಿಸ್ಕವರಿ ವಾಹಿನಿ ಕನ್ನಡ ಆಡಿಯೋ ಫೀಡ್ ಲಭ್ಯವಿದ್ದು, ನಿಮ್ಮ ಕೇಬಲ್ ಆಪರೇಟರ್ ಕೇಳಿ ಕೂಡಲೇ ಪಡೆದುಕೊಳ್ಳಬಹುದು. ಇಂದು ಪ್ರಸಾರವಾಗುವ ಮೋದಿ ಜತೆಗಿನ Man vs Wild ಕನ್ನಡದಲ್ಲೇ ನೋಡಬಹುದು.

ಕಳೆದ ಹತ್ತು ವರುಷಗಳಿಂದ ಬನವಾಸಿ ಬಳಗ, ಕನ್ನಡ ಗ್ರಾಹಕ ಕೂಟ ಹಾಗೂ ಇನ್ನಿತರ ಕನ್ನಡಪರ ಮನಸ್ಸುಗಳ ಅವಿರತವಾದ ಕಾನೂನು ಹೋರಾಟ, ಚಿತ್ರರಂಗದ ಮೇಲೆ ಒತ್ತಡ, ಸಮೂಹ ಮಾಧ್ಯಮಗಳ ಮುಖೇನ ಜನರಿಗೆ ಅರಿವು ಮೂಡಿಸುವ ಕೆಲಸಕ್ಕೆ ಫಲ ಸಿಕ್ಕಿದೆ. ಡಿಸ್ಕವರಿಯ ದಕ್ಷಿಣ ಏಶಿಯಾದ ಡೈರೆಕ್ಟರ್ ಮೇಘಾ ಟಾಟಾ ಅವರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಡಿಸ್ಕವರಿ ಚಾನೆಲ್ ಕನ್ನಡದಲ್ಲಿ ಲಭ್ಯ, Man vs Wild ಕನ್ನಡದಲ್ಲೇ ನೋಡಿಡಿಸ್ಕವರಿ ಚಾನೆಲ್ ಕನ್ನಡದಲ್ಲಿ ಲಭ್ಯ, Man vs Wild ಕನ್ನಡದಲ್ಲೇ ನೋಡಿ

ಎಲ್ಲಾ ಡಿಟಿಎಚ್ ನಲ್ಲೂ ಡಿಸ್ಕವರಿ ಕನ್ನಡ ಲಭ್ಯವಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ನಿಮ್ಮ ಕೇಬಲ್ ಅಥವಾ ಡಿಟಿಎಚ್ ಆಪರೇಟರ್ ಗೆ ಕರೆ ಮಾಡಿ, ಇದಾದ ಬಳಿಕ ಎಲ್ಲರೂ ಕನ್ನಡ ಭಾಷೆಗೆ ಫೀಡ್ ಬದಲಾಯಿಸಿಕೊಂಡರೆ ಸಾಕು.

ಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆಕನ್ನಡದಲ್ಲಿ ಬರಲು ಶುರುವಾಯ್ತು ಜಗತ್ತಿನ ಸಕಲ ಜ್ಞಾನ-ಮನರಂಜನೆ

ಡಿಟಿಎಚ್ ಅಥವಾ ಸೆಟ್ ಅಪ್ ನಲ್ಲಿ ಸೆಟ್ಟಿಂಗ್ ಮೂಲಕ ಕನ್ನಡ ಭಾಷೆಯಲ್ಲಿ ಡಿಸ್ಕವರಿ ವಾಹಿನಿ ನೋಡುವ ವಿಧಾನ ಹಾಗೂ ಯಾವ ಡಿಟಿಎಸ್ ಸಂಸ್ಥೆಯಲ್ಲಿ ಯಾವ ಸಂಖ್ಯೆಯಲ್ಲಿ ಚಾನೆಲ್ ಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರಧಾನಿ ಮೋದಿ ಜೊತೆ ಪ್ರಧಾನಿ ಮೋದಿ ಜೊತೆ "Man vs Wild" ಎಲ್ಲಿ ಪ್ರಸಾರವಾಗುತ್ತೆ?

ಸಂಸ್ಥೆ ಹಾಗೂ ಚಾನೆಲ್ ಗಳು ಲಭ್ಯವಿರುವ ಸಂಖ್ಯೆ: HD ಚಾನೆಲ್ ಗಳಾದರೆ ಸಂಖ್ಯೆ ಬದಲಾಗಲಿದೆ.

ಸಂಸ್ಥೆ ಹಾಗೂ ಚಾನೆಲ್ ಗಳು ಲಭ್ಯವಿರುವ ಸಂಖ್ಯೆ

ಸಂಸ್ಥೆ ಹಾಗೂ ಚಾನೆಲ್ ಗಳು ಲಭ್ಯವಿರುವ ಸಂಖ್ಯೆ

ಡಿಟಿಎಚ್ ಅಥವಾ ಸೆಟ್ ಅಪ್ ನಲ್ಲಿ ಸೆಟ್ಟಿಂಗ್ ಮೂಲಕ ಕನ್ನಡ ಭಾಷೆಯಲ್ಲಿ ಡಿಸ್ಕವರಿ ವಾಹಿನಿ ನೋಡುವ ವಿಧಾನ ಹಾಗೂ ಯಾವ ಡಿಟಿಎಸ್ ಸಂಸ್ಥೆಯಲ್ಲಿ ಯಾವ ಸಂಖ್ಯೆಯಲ್ಲಿ ಚಾನೆಲ್ ಲಭ್ಯವಿದೆ ಎಂಬ ಮಾಹಿತಿ ಇಲ್ಲಿದೆ.
ಸಂಸ್ಥೆ ಹಾಗೂ ಚಾನೆಲ್ ಗಳು ಲಭ್ಯವಿರುವ ಸಂಖ್ಯೆ: HD ಚಾನೆಲ್ ಗಳಾದರೆ ಸಂಖ್ಯೆ ಬದಲಾಗಲಿದೆ.
ಟಾಟಾ ಸ್ಕೈ: 713,714
ಏರ್ ಟೆಲ್ ಡಿಜಿಟಲ್: 421
ಡಿಶ್ ಟಿವಿ: 802
ವಿಡಿಯೋಕಾನ್: 952/441
ಸನ್ ಡೈರೆಕ್ಟ್: 951/540
ಹಾಥ್ವೇ:1305/1304(HD)

ಭಾರತೀಯ ಭಾಷೆಗಳಲ್ಲಿ ಡಿಸ್ಕವರಿ ಚಾನೆಲ್ ಫೀಡ್

ಭಾರತೀಯ ಭಾಷೆಗಳಲ್ಲಿ ಡಿಸ್ಕವರಿ ಚಾನೆಲ್ ಫೀಡ್

* ಮೊದಲಿಗೆ ಹಾಥ್ವೇ, ಇನ್ ಕೇಬಲ್, ಟಾಟಾ ಸ್ಕೈ, ವಿಡಿಯೋಕಾನ್, ಡಿಶ್ ಟಿವಿ, ಏರ್ ಟೆಲ್, ಸನ್ ಡೈರೆಕ್ಟ್ ಮುಂತಾದ ಸೇವಾ ಸಂಸ್ಥೆಗಳ ಪೈಕಿ ಯಾವುದಾದರೂ ಒಂದಕ್ಕೆ ನೀವು ಚಂದಾದಾರರಾಗಿರಬೇಕು.
* ಸೆಟ್ ಅಪ್ ಬಾಕ್ಸ್ ನಲ್ಲಿ ಬದಲಾವಣೆ ಮೂಲಕ ನಿಮಗೆ ಬೇಕಾದ ಭಾಷೆಯಲ್ಲಿ ಕಾರ್ಯಕ್ರಮ ನೋಡಬಹುದಾಗಿದೆ. ಇಂಗ್ಲೀಷ್ ಅಲ್ಲದೆ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಈಗಾಗಲೇ ಸಂಪೂರ್ಣ ಚಾನೆಲ್ ಫೀಡ್ ಲಭ್ಯವಿದೆ.

ಡಿಸ್ಕವರಿ ಯಾವ ಚಾನೆಲ್ ಸಂಖ್ಯೆ ಗುರುತಿಸಿ

ಡಿಸ್ಕವರಿ ಯಾವ ಚಾನೆಲ್ ಸಂಖ್ಯೆ ಗುರುತಿಸಿ

* ನಿಮ್ಮ ಸೇವಾ ಸಂಸ್ಥೆ ಯಾವುದು ಎಂಬುದು ತಿಳಿದ ಬಳಿಕ, ಯಾವ ಚಾನೆಲ್ ಸಂಖ್ಯೆ(ಉದಾ: ಏರ್ ಟೆಲ್: 421) ಎಂಬುದನ್ನು ಪರೀಕ್ಷಿಸಿ.
* ನಿಮ್ಮ ಟಿವಿ/ಸೆಟ್ ಅಪ್ ಬಾಕ್ಸ್ ರಿಮೋಟ್ ನಿಂದ ಆ ಸಂಖ್ಯೆ(ಉದಾ: ಏರ್ ಟೆಲ್: 421)ಒತ್ತಿರಿ. ಇದು SD ಹಾಗೂ HD ಚಾನೆಲ್ ಗಳಿಗೆ ಬದಲಾಗಲಿದೆ. ಈ ಬಗ್ಗೆ ಆಯಾ ಸೇವಾ ಸಂಸ್ಥೆ ವೆಬ್ ತಾಣದಲ್ಲಿ ವಿವರ ಲಭ್ಯ.

ಕನ್ನಡದಲ್ಲಿ ಡಿಸ್ಕವರಿ ಚಾನೆಲ್ ಪಡೆಯುವುದು ಹೇಗೆ?

ಕನ್ನಡದಲ್ಲಿ ಡಿಸ್ಕವರಿ ಚಾನೆಲ್ ಪಡೆಯುವುದು ಹೇಗೆ?

* ಚಾನೆಲ್ ನಲ್ಲಿರುವ ಆಡಿಯೋ ಫೀಡ್ ಕೇಳಿಸಿಕೊಳ್ಳಿ, ಆಡಿಯೋ ಫೀಡ್ ಬದಲಾಯಿಸಲು Audio/Lang/Blue ಬಟನ್ ಒತ್ತಿ.
ಗಮನಿಸಿ: ಈ ಸೆಟ್ಟಿಂಗ್ ಯೂನಿವರ್ಸಲ್ ರಿಮೋಟ್ ಗಾಗಿ ಕೊಡಲಾಗಿದ್ದು, ಬೇರೆ ರಿಮೋಟ್ ಗಳಲ್ಲಿ ಭಾಷೆ ಬದಲಾಯಿಸಲು ಇರುವ ಸಾಧ್ಯತೆಯನ್ನು ಪರೀಕ್ಷಿಸಿ, ಅದರಂತೆ ಕ್ರಮ ಅನುಸರಿಸಿ. ಇದೆಲ್ಲವೂ ಕಷ್ಟವೆನಿಸಿದರ, ನಿಮ್ಮ ಸೇವಾ ಸಂಸ್ಥೆಯ ಸಹಾಯವಾಣಿಗೆ ಕರೆ ಮಾಡಿ, ಭಾಷೆ ಬದಲಾವಣೆಗಾಗಿ ಮನವಿ ಸಲ್ಲಿಸಿ, ಸೇವೆ ಪಡೆದುಕೊಳ್ಳಿ

English summary
How to switch to and set up your DTH/set up box to watch Discovery Kannada Channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X