ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಕೋವಿಡ್ ಲಸಿಕೆ ಪಡೆಯಲು ಕೋವಿನ್ app ಮೂಲಕ ನೋಂದಣಿ ಹೇಗೆ?

|
Google Oneindia Kannada News

ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವ ವೇಳೆಯಲ್ಲೆ ಭಾರತದಲ್ಲಿ ಲಸಿಕೆ ಅಭಿಯಾನ ಜಾರಿಯಲ್ಲಿದೆ. ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQsಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQs

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ನಂತರ ರಷ್ಯಾದ ಸ್ಫುಟ್ನಿಕ್ ವಿ ಮೂರನೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಏಪ್ರಿಲ್ 28ರಂದು CoWin ವೆಬ್ ಸೈಟ್ ಹಾಗೂ ಆರೋಗ್ಯ ಸೇತು ಅಪ್ಲಿಕೇಷನ್ ಮೂಲಕ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆಗಾಗಿ ತಮ್ಮ ಹೆಸರು ನೋಂದಾಯಿಸಬಹುದು.

ಲಸಿಕೆ ಪಡೆಯಲು ಇಚ್ಛಿಸುವವರು CoWin ವೆಬ್ ಸೈಟ್ ಮೂಲಕ ಎಲ್ಲಿ ಯಾವಾಗ ಬೇಕಾದರೂ ಖುದ್ದು ನೋಂದಣಿ ಮಾಡಿಕೊಳ್ಳಬಹುದು. ನಿಮ್ಮ ಲಸಿಕೆ ಪಡೆಯುವ ಸಮಯವನ್ನು ನೋಂದಣಿ ಮಾಡಿಕೊಳ್ಳಬಹುದು.

ಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿಕೋವಿಡ್ ಲಸಿಕೆ ಪಡೆಯಲು ಕೋವಿನ್, ಆರೋಗ್ಯ ಸೇತು ಮೂಲಕ ನೋಂದಣಿ

ಕೊವಿಶೀಲ್ಡ್ ಲಸಿಕೆ ಪಡೆದ 4ರಿಂದ 6 ವಾರ ದಿಂದ 4 ರಿಂದ 8 ವಾರಗಳ ಒಳಗೆ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಇದೇ ರೀತಿ ಕೋವ್ಯಾಕ್ಸಿನ್ ಮೊದಲ ಲಸಿಕೆ ಪಡೆದ 4 ರಿಂದ 6 ವಾರಗಗೊಳಗೆ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳಬೇಕು.

ಕೊರೊನಾ ಲಸಿಕೆ ಪಡೆಯಲು ಕೋವಿನ್ ಆಪ್ / ವೆಬ್ ತಾಣದಲ್ಲಿ ನೋಂದಣಿ ಹೇಗೆ?
* ಗೂಗಲ್ ಪ್ಲೇಸ್ಟೋರ್‌ನಿಂದ Co-Win app ಡೌನ್ ಲೋಡ್ ಮಾಡಿಕೊಳ್ಳಿ.
* ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ
* ಒಟಿಪಿ ಹಾಕಿ, ದೃಢೀಕರಿಸಿ, ನಂತರ ನೋಂದಣಿ ಪುಟ ಪ್ರವೇಶಿಸಿ
* ಹೆಸರು, ವಯಸ್ಸು, ಇತ್ಯಾದಿ ಸ್ವವಿವರ ನೀಡಿ, ಅಗತ್ಯ ದಾಖಲೆ ಒದಗಿಸಿ, ನೋಂದಾಯಿಸಿ
* ಆರೋಗ್ಯ ಕೇಂದ್ರ ಆಯ್ಕೆ ಮಾಡಿಕೊಂಡು, ಸಂದರ್ಶನ ಸಮಯ ನಿಗದಿ ಪಡಿಸಿಕೊಳ್ಳಿ.

ವೆಬ್ ತಾಣದಲ್ಲಿ(http://www.cowin.gov.in/) ಇದೇ ರೀತಿ ವಿಧಾನದಲ್ಲಿ ಸುಲಭವಾಗಿ ನೋಂದಾಯಿಸಿಕೊಳ್ಳಬಹುದು.

How to register via CoWIN website to get coronavirus vaccine
English summary
How to register via CoWIN website to get coronavirus vaccine. Download and Install the Co-WIN app on your Android smartphone via the Google Play Store.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X