ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆ ಚುನಾವಣೆಯ ವಿಶೇಷತೆಗಳು

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 11: ರಾಜಕೀಯ ಪಕ್ಷಗಳು, ಜನರು ಕಾತರದಿಂದ ಕಾಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮುಗಿಸಿರುವ ಚುನಾವಣಾ ಆಯೋಗ ಮತದಾರರ ಅಂತಿಮ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ. ಜೊತೆಗೆ ಚುನಾವಣೆಯ ವಿಶೇಷತೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದೆ.

ಈ ಬಾರಿ ರಾಜ್ಯದಲ್ಲಿ ಒಟ್ಟು 5,06,90,538 (5.06 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,56,75,579 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,50,09,904. ಇನ್ನು 5,055 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.

ಈ ಬಾರಿ ಹೊಸದಾಗಿ 12,92,881 ಜನರು ಮತದಾರರ ಪಟ್ಟಿಗೆ ಹೆಸರು ನೋಂದಾವಣೆ ಮಾಡಿಕೊಂಡಿದ್ದಾರೆ. ಇವರೆಲ್ಲಾ ಮೊದಲ ಬಾರಿಗೆ ಮತಚಲಾವಣೆ ಮಾಡಲಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬರೋಬ್ಬರಿ 6,03,678 ಮತದಾರರಿದ್ದರೆ, ಚಿಕ್ಕಮಗಳೂರಿನ ಶೃಂಗೇರಿ ಕ್ಷೇತ್ರದಲ್ಲಿ ರಾಜ್ಯದಲ್ಲೇ ಕನಿಷ್ಠ 1,66,026 ಜನರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ರಾಜ್ಯದಲ್ಲಿ ಒಟ್ಟು 58,008 ಮತಗಟ್ಟೆಗಳಿವೆ. ಇವುಗಳಲ್ಲಿ ಶೇಕಡಾ 20 ಸೂಕ್ಷ್ಮ ಮತಗಟ್ಟೆಗಳಾಗಿವೆ. ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಈ ಬಾರಿ ಕರ್ನಾಟಕದಲ್ಲಿ ಮತದಾನ ನಡೆಯಲಿದೆ.

ಕರ್ನಾಟಕ ಮತದಾರರ ಪಟ್ಟಿ : ಅಂಕಿ-ಸಂಖ್ಯೆಗಳಲ್ಲಿಕರ್ನಾಟಕ ಮತದಾರರ ಪಟ್ಟಿ : ಅಂಕಿ-ಸಂಖ್ಯೆಗಳಲ್ಲಿ

224 ಕ್ಷೇತ್ರಗಳಲ್ಲಿ ಜಯನಗರದ ಬಿಜೆಪಿ ಅಭ್ಯರ್ಥಿ ಸಾವನ್ನಪ್ಪಿದ್ದರಿಂದ 223 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆಯುತ್ತಿದೆ.

ಇದೇ ಮೇ 15ರಂದು ಬಹು ನಿರೀಕ್ಷಿತ ಕರ್ನಾಟಕ ಚುನಾವಣಾ ಕದನದ ಫಲಿತಾಂಶ ಹೊರ ಬೀಳಲಿದೆ.

Highlights of Karnataka Assembly Elections 2018
English summary
There are only a few hours left for voting of Karnataka assembly elections 2018. The Election Commission, which has completed all the preparations for the election, has already released the final list of voters. Here is the highlights of the data released by EC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X