ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಕಿ ದುಷ್ಪರಿಣಾಮಗಳೇನು? ಆರೋಗ್ಯಕ್ಕೆ ಹೇಗೆ ಮಾರಕ?

By Mahesh
|
Google Oneindia Kannada News

ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೆಹಲಿ ಹಾಗೂ NCR ಪ್ರದೇಶದಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ, ಸುಪ್ರೀಂ ಆದೇಶ ಹೊರಡಿಸಿದ್ದು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ. ಈ ನಡುವೆ ಹಬ್ಬದ ಸಂದರ್ಭದಲ್ಲಷ್ಟೇ ಅಲ್ಲ, ಪಟಾಕಿ ಯಾವಾಗ ಹೊಡೆದರೂ ಅದರಿಂದ ಆರೋಗ್ಯ ಹಾನಿಯಲ್ಲದೆ ಮತ್ತೇನು ಆಗುವುದಿಲ್ಲ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಪರಿಸ್ಥಿತಿ ಹೀಗಾದ್ರೆ, ಹಬ್ಬ ಹರಿದಿನಗಳ ಆಚರಣೆ ಹೇಗೆ? ಇಷ್ಟು ದಿನ ಇಲ್ಲದ ಮಾಲಿನ್ಯ ಹಬ್ಬದ ಸಂದರ್ಭದಲ್ಲಿ ಪಟಾಕಿ ಹೊಡೆದ ಮಾತ್ರಕ್ಕೆ ಹೆಚ್ಚಾಗುವುದೆ ಎಂದು ಪ್ರಶ್ನಿಸುವವರು ಇದ್ದಾರೆ.

ಹಿಂದೂಗಳ ಹಬ್ಬದ ಮೇಲೆ ಏಕೆ ಉರಿ, ಮುಸ್ಲಿಮರು ಕುರಿ ಕಡಿಯುವುದು ತಪ್ಪಲ್ಲವೆ ಎಂದು ಆಚರಣೆಗಳ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಅದೆಲ್ಲ ಹಾಗಿರಲಿ, ಪಟಾಕಿ ಹೊಡೆಯುವುದರಿಂದ ಆರೋಗ್ಯದ ಮೇಲೆ ಏನೆಲ್ಲ ದುಷ್ಪರಿಣಾಮಗಳಾಗುತ್ತದೆ ಎಂಬುದರ ಬಗ್ಗೆ ಚಿತ್ರ ವರದಿ ಇಲ್ಲಿದೆ:

ಹೊಗೆಯಿಂದ ದುಷ್ಪರಿಣಾಮ

ಹೊಗೆಯಿಂದ ದುಷ್ಪರಿಣಾಮ

ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲರಿಗೂ ಪಟಾಕಿ ಹೊಗೆಯಿಂದ ಮೂಗು, ಗಂಟಲು ಉರಿಯಾಗುತ್ತದೆ. ಪಟಾಕಿಯಲ್ಲಿರುವ ವಿಷಕಾರಿ ಗಂಧಕ ಸೇವನೆಯಿಂದ ಶ್ವಾಸಕೋಶಕ್ಕೆ ಹಾನಿಯಾಗುತ್ತದೆ. ಕೆಮ್ಮು, ಎದೆ ಉರಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಕಾಣಿರಿ

ಶಬ್ದ ಮಾಲಿನ್ಯ

ಶಬ್ದ ಮಾಲಿನ್ಯ

20 ಡೆಸಿಬಲ್ ಗಿಂತ ಹೆಚ್ಚು ಪ್ರಮಾಣದ ಶಬ್ದವಿದ್ದರೆ ಕಿವಿಗಳಿಗೆ ಹಾನಿಕಾರಕ. ಇನ್ನೂ ಪಟಾಕಿಗಳ ಶಬ್ದ 100 ರಿಂದ 150 ಡಿಬಿಯಷ್ಟಿರುತ್ತದೆ. ಮಕ್ಕಳು, ಸಾಕು ಪ್ರಾಣಿಗಳಿಗೆ ಇದರಿಂದ ಕಿವುಡುತನ ಉಂಟಾಗಬಹುದು.

 ಬಿಪಿ ಹೆಚ್ಚಾಗುತ್ತದೆ

ಬಿಪಿ ಹೆಚ್ಚಾಗುತ್ತದೆ

ತಲೆ ಸುತ್ತು, ತಲೆ ನೋವು, ತಲೆ ತಿರುಗುವುದು ಹೆಚ್ಚಾಗುತ್ತದೆ.

ಗರ್ಭಿಣಿಯರಿಗೆ ತೊಂದರೆ

ಗರ್ಭಿಣಿಯರಿಗೆ ತೊಂದರೆ

ಗರ್ಭಿಣಿಯರಿಗೆ ಹಾನಿಕಾರಕ, ಮಾನಸಿಕ ಹಾಗೂ ದೈಹಿಕವಾಗಿ ತೊಂದರೆಯಾಗುತ್ತದೆ.

ಆಸ್ತಮಾ ರೋಗಿಗಳಿಗೆ ಮಾರಕ

ಆಸ್ತಮಾ ರೋಗಿಗಳಿಗೆ ಮಾರಕ

ಆಸ್ತಮಾ, ಶ್ವಾಸಕೋಶದ ತೊಂದರೆಯಿಂದ ಬಳಲುವ ರೋಗಿಗಳಿಗೆ ಪಟಾಕಿ ಹೊಗೆ ಮಾರಕ

English summary
Results of studies have shown that the levels of suspended particulate matters (SPM), CO, NOx, hydrocarbons, SO2, increase to an unprecedented levels in air during fireworks displays.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X