• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ 17ರಂದು ಚಿನ್ನ, ಬೆಳ್ಳಿ ಬೆಲೆ ಕುಸಿತ, ಪ್ರಮುಖ ನಗರಗಳ ದರ ಪಟ್ಟಿ?

|
Google Oneindia Kannada News

ಭಾರತೀಯ ಮಾರುಕಟ್ಟೆಯಲ್ಲಿ ಕೋವಿಡ್ ನಿರ್ಬಂಧದಿಂದ ಅಂಗಡಿ ಮಳಿಗೆಗಳು ಬಂದ್ ಆಗಿದ್ದು, ಖರೀದಿ ಇಲ್ಲದೆ ವಹಿವಾಟು ಕುಸಿತ ಕಾಣುತ್ತಿತ್ತು, ಈಗ ದೇಶದ ಹಲವೆಡೆ ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಜೂನ್ 17ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಇಳಿಕೆಯಾಗಿ 47,157ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ತಗ್ಗಿ 68,682.00 ರು ನಷ್ಟಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 1.70ರಷ್ಟು ಇಳಿಕೆಯಾಗಿ 1,787.38 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 3.04ರಷ್ಟು ಇಳಿಕೆಯಾಗಿ 26.36 ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 500 ರು ಇಳಿಕೆ ಕಂಡು 45,350ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 540 ರು ಇಳಿಕೆಯಾಗಿ 48, 930 ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ75,1000ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 70,300ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

      ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

      ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜೂನ್ 17ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್. ಸಿ.

      English summary
      Infographics: The price of Gold Rates on Major Cities in India on Thrusday (June 17).
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X