ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ನ.24ರಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ?

|
Google Oneindia Kannada News

ನವದೆಹಲಿ, ನವೆಂಬರ್ 24: ದೇಶದ ಹಲವೆಡೆ ಕೋವಿಡ್ 19 ನಿರ್ಬಂಧ, ಕರ್ಫ್ಯೂ ಸಡಿಲಗೊಂಡಿದೆ. ದೀಪಾವಳಿ ಹಬ್ಬದ ಋತುವಿನಲ್ಲಿ ಚಿನಿವಾರ ಪೇಟೆಯಲ್ಲಿ ಉತ್ತಮ ವಹಿವಾಟು ಕಂಡರೂ ಹಳದಿ ಲೋಹ ನಿರೀಕ್ಷಿತ ಏರಿಕೆ ಕಂಡಿಲ್ಲ. ಜಾಗತಿಕವಾಗಿ ಇಂಧನ ದರ ಏರಿಳಿತ, ಕೋವಿಡ್ 19 ಮತ್ತೆ ಉಲ್ಬಣವಾಗುವ ಭೀತಿ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಏರಿಳಿತ ಕಾಣುತ್ತಿದೆ. ನವೆಂಬರ್ 24ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಚೇತರಿಕೆ ಕಂಡಿದೆ, ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್ ನಲ್ಲಿ ನವೆಂಬರ್ 24ರ ವಹಿವಾಟು ಫ್ಯೂಚರ್ ಗೋಲ್ಡ್ ಕೊಂಚ ಕುಗ್ಗಿ 47,368.0ರು ಹಾಗೂ ಬೆಳ್ಳಿ ಬೆಲೆ ಇಳಿಕೆ ಕಂಡು 62,439ರು ಗೆ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ)ಗೆ ಶೇ 0.28ರಷ್ಟು ಇಳಿಕೆಯಾಗಿ 1,785.39 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.94ಇಳಿಕೆಯಾಗಿ 23.43 ಯುಎಸ್ ಡಾಲರ್ ಆಗಿದೆ.

ಕಳೆದ 30 ದಿನಗಳಲ್ಲಿ ಸ್ಪಾಟ್ ಗೋಲ್ಡ್ ಗರಿಷ್ಠ 1866.59 ಡಾಲರ್ ಹಾಗೂ ಕನಿಷ್ಠ 1776.80 ಡಾಲರ್ ತಲುಪಿತ್ತು. ಇದೇ ಅವಧಿಯಲ್ಲಿ ಬೆಳ್ಳಿ ದರ ಗರಿಷ್ಠ 25.53 ಡಾಲರ್ ಹಾಗೂ ಕನಿಷ್ಠ 23.33 ಡಾಲರ್ ಮುಟ್ಟಿತ್ತು.

ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ನವೆಂಬರ್ 24ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ ಪ್ರಮುಖ ಕಾರಣ, ಕಳೆದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ 47,569ರು ನಂತೆ ವಹಿವಾಟು ಆರಂಭಿಸಿ ಹಳದಿ ಲೋಹ ದಿನದ ಅಂತ್ಯಕ್ಕೆ ಇಳಿಕೆ ಕಂಡಿದೆ. ಬೆಳ್ಳಿ ಆರಂಭದಲ್ಲಿ 62,877ರು ನಂತೆ ಆರಂಭವಾಗಿ ದಿನದ ಅಂತ್ಯಕ್ಕೆ ಇಳಿಕೆಯಾಗಿದೆ. ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರ ನೀರಿಕ್ಷಿತ ಮಟ್ಟ ಮುಟ್ಟಿಲ್ಲ.

ಚಿನ್ನದ ಏರಿಳಿತಕ್ಕೆ ಕಾರಣ

ಚಿನ್ನದ ಏರಿಳಿತಕ್ಕೆ ಕಾರಣ

ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್ ತೆರವು, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ, ಯುರೋಪಿಯನ್ ಯೂನಿಯನ್ ಕೊರೊನಾ ನಿರ್ಬಂಧ, ಚೀನಾ-ಭಾರತ ಗಡಿ ವಿವಾದ, ಕೊರೊನಾ ಲಸಿಕೆ ಅಭಿಯಾನ ಪ್ರಗತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ದರ

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ದರ

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 350 ರು ಕುಸಿದು 45,700ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 390 ರು ಕುಸಿದು 48,760ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 67,600ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 62,700ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಇಲ್ಲಿದೆ

Recommended Video

Shreyas Iyer ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ವಿಶೇಷ ಕ್ಷಣಗಳು | Oneindia Kannada
ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

English summary
Gold, silver rate slashed in India's major cities including Bengaluru, Chennai, Mumbai, Delhi on November 24, 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X