ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಂಗಳಾಂತ್ಯ ದೇಶದಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ? ಇಲ್ಲಿದೆ ವಿವರ...

By ಒನ್‌ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ, ಜುಲೈ 31: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶನಿವಾರ, ಜುಲೈ 31ರಂದು ಕೊಂಚ ಇಳಿಕೆಯಾಗಿದೆ.

ಜೂನ್ ತಿಂಗಳಿನಲ್ಲಿ ಚಿನ್ನದ ವಹಿವಾಟು ದೇಶಾದ್ಯಂತ ಕುಸಿತವಾಗಿತ್ತು. ಹಲವು ರಾಜ್ಯಗಳಲ್ಲಿ ಕೊರೊನಾ ಲಾಕ್‌ಡೌನ್ ಹೇರಿದ್ದರಿಂದ ವಹಿವಾಟು ತಗ್ಗಿತ್ತು. ಅನ್‌ಲಾಕ್ ಜಾರಿಯಾದ ನಂತರ ಜುಲೈ ತಿಂಗಳಿನಲ್ಲಿ ವಹಿವಾಟು ಚೇತರಿಕೆ ಕಂಡಿದೆ. ಇದೀಗ ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.92% ರಷ್ಟು ಇಳಿಕೆಯಾಗಿ 1,813.62 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.11%ರಷ್ಟು ಇಳಿಕೆಯಾಗಿ 25.50 ಯುಎಸ್ ಡಾಲರ್ ಆಗಿದೆ.

Gold And Silver Rate In Indias Major Cities On July 31

ಶನಿವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಜುಲೈ 31ರಂದು ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 47,410 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 51,720 ರೂ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರೂ ಏರಿಕೆಯಾಗಿ 45,000 ರೂ ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 270 ರೂ ಏರಿಕೆಯಾಗಿ 49,100 ರೂನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಇಳಿಕೆಯಾಗಿ 1 ಕೆ.ಜಿಗೆ ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತಾದಲ್ಲಿ ಕೆ.ಜಿಗೆ 67,900 ರೂಪಾಯಿ ಇದ್ದರೆ, ಹೈದರಾಬಾದ್, ಚೆನ್ನೈನಲ್ಲಿ 73,000 ರೂಪಾಯಿ ಆಗಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಜುಲೈ 31ರ ದರ ನೋಡಿ...ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದಿದ್ದೀರಾ? ಹಾಗಿದ್ದರೆ ಜುಲೈ 31ರ ದರ ನೋಡಿ...

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಕಳೆದ ತ್ರೈಮಾಸಿಕದ ಬೇಡಿಕೆ ವಿವರ: ಏಪ್ರಿಲ್ ಮತ್ತು ಜೂನ್ ನಡುವೆ, ಗ್ರಾಹಕರ ಚಿನ್ನದ ಖರೀದಿ ನಿಟ್ಟಿನಲ್ಲಿ ಸಾಂಪ್ರದಾಯಿಕ ಸಂಕೇತಗಳು ಸಕಾರಾತ್ಮಕವಾಗಿವೆಚಿಲ್ಲರೆ ಹೂಡಿಕೆದಾರರು ಅತಿಯಾಗಿ ಖರೀದಿಸಿದ ಭೌತಿಕ ಚಿನ್ನದ ಉತ್ಪನ್ನಗಳಲ್ಲಿ ಚಿನ್ನದ ಬಾರ್‌ಗಳು ಮತ್ತು ನಾಣ್ಯಗಳು ಪ್ರಮುಖವಾದವು. ಮೂರು ತಿಂಗಳ ಅವಧಿಯಲ್ಲಿ 243.8 ಟನ್‌ ಚಿನ್ನ ಖರೀದಿಸಲಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಸತತ ನಾಲ್ಕನೇ ತ್ರೈಮಾಸಿಕ ಲಾಭ ಕಂಡಿದೆ. ಈ ನಡುವೆ ಗ್ರಾಹಕರು ಒಟ್ಟು 390.7ಟನ್‌ ತೂಕದ ಚಿನ್ನದ ಆಭರಣಗಳನ್ನು 390 ಖರೀದಿಸಿದ್ದಾರೆ . ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು ಹೆಚ್ಚಾಗಿದೆ.

ಗ್ರಾಹಕರು ಮತ್ತು ಚಿಲ್ಲರೆ ಹೂಡಿಕೆದಾರರು ಮರು ಖರೀದಿ ಮಾಡುತ್ತಿದ್ದರೆ, ಸಾಂಸ್ಥಿಕ ಹೂಡಿಕೆದಾರರು ಕಡಿಮೆ ಸ್ಥಿರತೆ ಪ್ರದರ್ಶಿಸಿದರು. ಎರಡನೇ ತ್ರೈಮಾಸಿಕದಲ್ಲಿ ಚಿನ್ನದ ವಿನಿಮಯ ವ್ಯಾಪಾರ ವಹಿವಾಟು ನಿಧಿಗಳು (ಇಟಿಎಫ್‌ಗಳು) ವಲಯದಲ್ಲಿ ಕೇವಲ 40.7 ಟನ್‌ನ ಸಾಧಾರಣ ನಿವ್ವಳ ಒಳಹರಿವು ಇತ್ತು . ಭೌತಿಕ ಚಿನ್ನದ ಬೆಂಬಲದ ಹಣಕಾಸು ವ್ಯವಹಾರಗಳತ್ತ ಸಾಮಾನ್ಯವಾಗಿ ಸಾಂಸ್ಥಿಕ ಖರೀದಿದಾರರು ಆಕರ್ಷಿತರಾಗುತ್ತಾರೆ. 2014 ರ ನಂತರ ಮೊದಲ ಬಾರಿಗೆ 2021ರ ಮೊದಲ ಆರು ತಿಂಗಳಲ್ಲಿ ಅತಿ ಹೆಚ್ಚಿನ ನಿವ್ವಳ ಹೊರಹರಿವು ದಾಖಲಾಗಿದೆ. ಆರ್‌ಬಿಐಗಳು ತ್ರೈಮಾಸಿಕದಲ್ಲಿ ನಿರಂತರವಾಗಿ ಚಿನ್ನ ಖರೀದಿ ನಡೆಸಿದ್ದವು. ಜಾಗತಿಕ ಚಿನ್ನದ ಮೀಸಲು ಎರಡನೇ ತ್ರೈಮಾಸಿಕದಲ್ಲಿ 199.9 ಟನ್‌ಗೆ ಏರಿಕೆಯಾಯಿತು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜುಲೈ 31ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ...

ಚಿತ್ರ ವಿನ್ಯಾಸ: ಭರತ್ ಎಚ್.ಸಿ.

English summary
Gold, silver rate in India's major cities including Bengaluru, Chennai, Mumbai, Delhi on July 31, 2021:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X