• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದ ಪ್ರಮುಖ ನಗರಗಳಲ್ಲಿ ಜುಲೈ 28ರ ಚಿನ್ನ, ಬೆಳ್ಳಿ ದರ ಹೀಗಿದೆ

|
Google Oneindia Kannada News

ನವದೆಹಲಿ, ಜುಲೈ 28: ದೇಶದ ಹಲವೆಡೆ ಅನ್ ಲಾಕ್ ಜಾರಿಯಲ್ಲಿದ್ದು, ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಜುಲೈ 28ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಇಳಿಕೆಯಾಗಿದ್ದು, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.

ಎಂಸಿಎಕ್ಸ್‌ನಲ್ಲಿ ಚಿನ್ನದ ದರ ಪ್ರತಿ 10 ಗ್ರಾಂಗೆ ಏರಿಕೆಯಾಗಿ 47,582ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 66,643ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌ (1 ounce=28.3495 ಗ್ರಾಂ) ಗೆ ಶೇ 0.07ರಷ್ಟು ಏರಿಕೆಯಾಗಿ 1,801.16ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.60ರಷ್ಟು ಏರಿಕೆಯಾಗಿ 24.89ಯುಎಸ್ ಡಾಲರ್ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 200 ರು ಏರಿಕೆಯಾಗಿ 44,800 ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 220 ರು ಇಳಿಕೆಯಾಗಿ 48,880ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 71,400ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 66,400ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್ ಮುಂತಾದ ನಗರಗಳಲ್ಲಿ ಜುಲೈ 28ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ.. ಚಿತ್ರ ವಿನ್ಯಾಸ: ಭರತ್ ಎಚ್.ಸಿ.

English summary
Gold, silver rate in India's major cities including Bengaluru, Chennai, Mumbai, Delhi on July 28, 2021:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X