ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಅತ್ಯಂತ ಸಂತುಷ್ಟ ದೇಶದ ಪಟ್ಟಿಯಲ್ಲಿ ಫಿನ್ಲೆಂಡ್ ಮೊದಲು: ಭಾರತದ ಸ್ಥಾನವೇನು ಗೊತ್ತೇ?

|
Google Oneindia Kannada News

ಹೆಲ್ಸಿಂಕಿ, ಮಾರ್ಚ್ 20: ಕೋವಿಡ್-19 ಇಡೀ ಜಗತ್ತನ್ನು ಆತಂಕದಲ್ಲಿ ಮುಳುಗಿಸಿದೆ. ಅನೇಕ ದೇಶಗಳು ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಬಿಕ್ಕಟ್ಟಿಗೆ ಸಿಲುಕಿವೆ. ಇದು ಜನಜೀವನದ ಮೇಲೆ ಗಾಢ ಪರಿಣಾಮ ಬೀರಿದೆ. ಆದರೆ ಈ ಸಾಂಕ್ರಾಮಿಕದ ನಡುವೆಯೂ ಫಿನ್ಲೆಂಡ್ ಸತತ ನಾಲ್ಕನೇ ವರ್ಷ ಜಗತ್ತಿನ ಅತ್ಯಂತ ಸಂತುಷ್ಟ ದೇಶವಾಗಿ ಹೊರಹೊಮ್ಮಿದೆ.

ವಿಶ್ವಸಂಸ್ಥೆ ಪ್ರಾಯೋಜಕತ್ವದ ಒಂಬತ್ತನೇ ವರ್ಷದ ವಾರ್ಷಿಕ ವರದಿಯಲ್ಲಿ ಜಗತ್ತಿನ 149 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಫಿನ್ಲೆಂಡ್ ಪುನಃ ಮೊದಲ ಸ್ಥಾನ ಗಳಿಸಿದೆ. ಆದರೆ ಭಾರತ 139ನೇ ಸ್ಥಾನದಲ್ಲಿ, ತನ್ನ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾಗಳಿಗಿಂತಲೂ ಕಡೆಯ ಸ್ಥಾನ ಪಡೆದಿದೆ.

ಸಂತುಷ್ಟ ದೇಶಗಳ ಪಟ್ಟಿಯಲ್ಲಿ ಪಾಕ್, ಚೀನಾಗೂ ಹಿಂದಿದೆ ಭಾರತಸಂತುಷ್ಟ ದೇಶಗಳ ಪಟ್ಟಿಯಲ್ಲಿ ಪಾಕ್, ಚೀನಾಗೂ ಹಿಂದಿದೆ ಭಾರತ

149 ದೇಶಗಳಲ್ಲಿನ ಜನರ ಸಂತೋಷದ ಮಟ್ಟವನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ದೇಶದ ಜಿಡಿಪಿ, ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಭ್ರಷ್ಟಾಚಾರ ಮಟ್ಟ ಇದೆಲ್ಲವೂ ಆ ದೇಶದ ಜನರ ಸಂತೋಷದ ಪ್ರಮಾಣವನ್ನು ಕಳೆದ ಮೂರು ವರ್ಷಗಳ ಸರಾಸರಿಯೊಂದಿಗೆ ಅಳತೆ ಮಾಡಲಾಗುತ್ತದೆ.

 Finland Remains Worlds Happiest Country For The 4th Year In A Row, India In 139th Place

ಈ ಬಾರಿಯೂ ಯುರೋಪಿಯನ್ ದೇಶಗಳೇ ಮೊದಲ ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಡೆನ್ಮಾರ್ಕ್ ಎರಡನೆಯ ಸ್ಥಾನದಲ್ಲಿದ್ದರೆ, ಸ್ವಿಟ್ಜರ್ಲೆಂಡ್, ಐಸ್ಲ್ಯಾಂಡ್ ಮತ್ತು ನೆದರ್ಲ್ಯಾಂಡ್ಸ್ ನಂತರದ ಸ್ಥಾನಗಳಲ್ಲಿವೆ. ನ್ಯೂಜಿಲ್ಯಾಂಡ್ ಈ ವರ್ಷ ಒಂದು ಸ್ಥಾನ ಕಳೆದುಕೊಂಡು ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಟಾಪ್‌ 10 ಪಟ್ಟಿಯಲ್ಲಿ ಇರುವ ಯುರೋಪ್ ದೇಶಗಳ ಹೊರತಾದ ಏಕೈಕ ದೇಶ ನ್ಯೂಜಿಲ್ಯಾಂಡ್.

ಆಫ್ರಿಕಾದ ದೇಶಗಳಾದ ಲೆಸೊಥೊ, ಬೊಟ್ಸ್ವಾನಾ, ರ್ವಾಂಡಾ ಮತ್ತು ಜಿಂಬಾಬ್ವೆ ದೇಶಗಳು ಈ ಪಟ್ಟಿಯ ಕೊನೆಯಲ್ಲಿವೆ. ಆದರೆ ಅತ್ಯಂತ ಅಸಂತುಷ್ಟ ದೇಶದ ಸ್ಥಾನದಲ್ಲಿರುವುದು ಅಫ್ಘಾನಿಸ್ತಾನ.

ಜಗತ್ತಿನ ಪ್ರಬಲ ಪ್ರಜಾಪ್ರಭುತ್ವ ದೇಶಗಳಲ್ಲಿ ಒಂದೆನಿಸಿದರುವ ಭಾರತದಲ್ಲಿ ಜನರು ಖುಷಿಯಾಗಿಲ್ಲ ಎನ್ನುವುದನ್ನು ಈ ವರದಿ ಹೇಳುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಜನಸಂಖ್ಯೆ ಒತ್ತಡ, ಭ್ರಷ್ಟಾಚಾರ, ಸಾಮಾಜಿಕ ಸ್ಥಿತಿ ಮುಂತಾದವು ಭಾರತಕ್ಕೆ ಹಿನ್ನಡೆ ಉಂಟುಮಾಡಿವೆ. 2019ರ ವರದಿಯಲ್ಲಿ ಭಾರತ 140ನೇ ಸ್ಥಾನದಲ್ಲಿತ್ತು. 2020ರಲ್ಲಿ 144ನೇ ಸ್ಥಾನಕ್ಕೆ ಏರಿತ್ತು. ಈಗ 139ನೇ ಶ್ರೇಯಾಂಕ ಪಡೆದುಕೊಂಡಿರುವುದೇ ಗಮನಾರ್ಹ ಸಾಧನೆಯಾಗಿದೆ.

English summary
Finland remains World's Happiest Country for the 4th year in a row, India in 139th place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X