ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 03: ಕೊವಿಡ್19 ರಿಂದ ಚೇತರಿಕೆ ಟಾಪ್ 10 ದೇಶಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಆಗಸ್ಟ್ 03: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 199,802,563ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು180,244,543ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 184,497,533 ಪ್ರಕರಣಗಳು ಮುಕ್ತಾಯಗೊಂಡಿವೆ.

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ದೈನಂದಿನ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ ಇಳಿಮುಖದ ಹಾದಿ ಹಿಡಿದಿದೆ.

ಕೋವಿಡ್-19 ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ದೇಶಾದ್ಯಂತ ಆರಂಭವಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯತೆ ಖಾತ್ರಿಪಡಿಸುವ ಮೂಲಕ, ಅವುಗಳು ಆಂದೋಲನವನ್ನು ಸಮರ್ಪಕವಾಗಿ ಆಯೋಜಿಸಲು ಪೂರಕವಾಗಿ ಲಸಿಕೆ ಲಭ್ಯತೆಯ ಮುಂಗಡ ಗೋಚರತೆ ಖಚಿತಪಡಿಸುವ ಮೂಲಕ ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಅಭಿಯಾನಕ್ಕೆ ವೇಗ ನೀಡಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.43%ಗೆ ಮತ್ತು ದೈನಂದಿನ ಪಾಸಿಟಿವಿಟಿ ದರ 2.44%ಗೆ ಇಳಿದಿದೆ. ದೈನಂದಿನ ಪಾಸಿಟಿವಿಟಿ ದರ ಸತತ 53 ದಿನಗಳಿಂದ 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಅಂಗವಾಗಿ, ಭಾರತ ಸರಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ಒದಗಿಸಿ ಬೆಂಬಲವನ್ನು ನೀಡುತ್ತಿದೆ. ಸಾರ್ವತ್ರಿಕ ಕೋವಿಡ್ -19 ಲಸಿಕಾಕರಣ ಆಂದೋಲನದ ಹೊಸ ಹಂತದಲ್ಲಿ ಕೇಂದ್ರ ಸರಕಾರವು ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಗಳಲ್ಲಿ 75% ನಷ್ಟನ್ನು ಖರೀದಿಸಿ ಬಳಿಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತವಾಗಿ) ಪೂರೈಸುತ್ತದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್10 ದೇಶಗಳ ವಿವರ (ಆಗಸ್ಟ್ 03ರಂತೆ) ಇಲ್ಲಿದೆ.

ಭಾರತದಲ್ಲಿ 24 ಗಂಟೆಗಳಲ್ಲಿ 39,021 ರೋಗಿಗಳು ಚೇತರಿಕೆ

ಭಾರತದಲ್ಲಿ 24 ಗಂಟೆಗಳಲ್ಲಿ 39,021 ರೋಗಿಗಳು ಚೇತರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,031ಜನರಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ. ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಒಟ್ಟಾರೆ ಸಂಖ್ಯೆಯು 31,726,507ಕ್ಕೇರಿದೆ. ದೇಶದಲ್ಲಿ ಮಹಾಮಾರಿಯಿಂದ ಪ್ರಾಣ ಬಿಟ್ಟವರ ಸಂಖ್ಯೆಯು 425,228ಕ್ಕೆ ಏರಿಕೆಯಾಗಿದೆ, 30,896,354ಮಂದಿ ಚೇತರಿಕೆ ಹೊಂದಿದ್ದಾರೆ, ಕಳೆದ 24 ತಾಸುಗಳಲ್ಲೇ 39,021 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರ ಒಟ್ಟಾರೆ 98.64%ಗೆ ಸುಧಾರಣೆ ಕಂಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ ತಿಳಿಸಿದೆ.

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್19 ಪ್ರಕರಣಗಳು

ಆಗಸ್ಟ್ 03ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 199,802,563ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 4,252,990ಕ್ಕೇರಿದೆ. ಒಟ್ಟಾರೆ, 180,244,543ಮಂದಿ ಗುಣಮುಖರಾಗಿದ್ದಾರೆ. ಒಟ್ಟು 15,305,030ಸಕ್ರಿಯ ಪಾಸಿಟಿವ್ 91,771 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 184,497,533ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಯುಎಸ್ಎ: 35,897,581ಪ್ರಕರಣಗಳು
ಭಾರತ: 31,726,507
ಬ್ರೆಜಿಲ್: 19,953,501
ರಷ್ಯಾ: 6,334,195
ಫ್ರಾನ್ಸ್: 6,151,803
ಯುಕೆ: 5,902,354
ಟರ್ಕಿ: 5,770,833
ಅರ್ಜೆಂಟೀನಾ: 4,947,030
ಕೊಲಂಬಿಯಾ: 4,801,050
ಸ್ಪೇನ್ : 4,502,983

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 629,868
ಬ್ರೆಜಿಲ್: 557,359
ಭಾರತ: 425,228
ಮೆಕ್ಸಿಕೋ: 241,279
ರಷ್ಯಾ: 160,925
ಯುಕೆ: 129,743
ಇಟಲಿ: 128,088
ಕೊಲಂಬಿಯಾ: 121,216
ಫ್ರಾನ್ಸ್: 111,936
ಅರ್ಜೆಂಟೀನಾ: 106,045

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಭಾರತ: ಗುಣಮುಖರಾದವರ ಸಂಖ್ಯೆ: 30,896,354
ಯುಎಸ್ಎ: 29,717,546
ಬ್ರೆಜಿಲ್: 18,687,203
ಫ್ರಾನ್ಸ್: 5,708,913
ರಷ್ಯಾ: 5,659,746
ಟರ್ಕಿ: 5,465,846
ಕೊಲಂಬಿಯಾ: 4,598,176
ಅರ್ಜೆಂಟೀನಾ: 4,594,873
ಯುಕೆ: 4,536,152
ಇಟಲಿ: 4,137,428
(ಮಾಹಿತಿ ಕೃಪೆ: ವರ್ಲ್ಡ್‌ಮೀಟರ್)

English summary
The world is seeing a surge in the number of coronavirus cases. As on August 03 the total cases are at 196,171,514 with death is 4,196,774. The total number of recoveries is 177,816,183.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X