ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವೆಲ್ಲಾ ರಾಜ್ಯಗಳು ಲಾಕ್‌ಡೌನ್ ಮುಂದುವರಿಸಿದೆ? ಇಲ್ಲಿದೆ ಸಂಪೂರ್ಣ ವಿವರ

|
Google Oneindia Kannada News

ನವದೆಹಲಿ, ಮೇ 31: ಕೊರೊನಾ ವೈರಸ್‌ನ ಎರಡನೇ ಅಲೆಯಿಂದ ದೇಶ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ನಿರೀಕ್ಷೆಗೂ ಮೀರಿದ ವೇಗದಲ್ಲಿ ಅಪ್ಪಳಿಸಿದ ಎರಡನೇ ಅಲೆಗೆ ದೇಶಾದ್ಯಂತ ಲಕ್ಷಾಂತರ ಜನರು ಪ್ರಾಣವನ್ನು ಕಳೆದುಕೊಂಡಿದ್ದು ಕೋಟ್ಯಂತರ ಜನರು ವೈರಸ್‌ನ ಹೊಡೆತಕ್ಕೆ ನಲುಗಿದ್ದಾರೆ. ವೈರಸ್‌ ಈ ಅಬ್ಬರವನ್ನು ತಡೆಯಲು ಸರ್ಕಾರಗಳು ಲಾಕ್‌ಡೌನ್ ಅಸ್ತ್ರವನ್ನು ಪ್ರಯೋಗಿಸಿತು.

ಬಹುತೇಕ ರಾಜ್ಯಗಳಲ್ಲಿ ಕೊರೊನಾ ವೈರಸ್‌ನ ಪ್ರಮಾಣ ಇಳಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ರಾಜ್ಯಗಳು ಲಾಕ್‌ಡೌನ್ ಘೋಷಿಸಿ ಜನರ ಓಡಾಟವನ್ನು ನಿಯಂತ್ರಣ ಮಾಡಿರುವುದು ಈ ವೈರಸ್‌ ಹರಡುವಿಕೆಯ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂಬುದು ತಜ್ಞರ ಅಭಿಮತ.

ಈ ಮಧ್ಯೆ ನಿತ್ಯವೂ ದಾಖಲಾಗುತ್ತಿರುವ ಕೊರೊನಾ ವೈರಸ್‌ನ ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಬಹುತೇಕ ರಾಜ್ಯಗಳು ಲಾಕ್‌ಡೌನ್ ಮುಂದುವರಿಸಿದೆ. ಕರ್ನಾಟಕ ರಾಜ್ಯದಲ್ಲಿಯೂ ಜೂನ್ 7ರ ವರೆಗೆ ಲಾಕ್‌ಡೌನ್ ವಿಸ್ತರಿಸಲು ಈಗಾಗಲೇ ಘೋಷಿಸಿಯಾಗಿದೆ. ಬಹುತೇಕ ಎಲ್ಲಾ ರಾಜ್ಯಗಳು ಇದೇ ಹಾದಿಯಲ್ಲಿದೆ. ಕೆಲ ರಾಜ್ಯಗಳಲ್ಲಿ ಸಣ್ಣ ಪ್ರಮಾಣದ ಸಡಿಲಿಕೆಯನ್ನು ಮಾಡಲಾಗಿದೆ. ಹಾಗಾದರೆ ಯಾವೆಲ್ಲಾ ರಾಜ್ಯಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ? ಎಲ್ಲಿಯವರೆಗೆ ವಿಸ್ತರಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ

Covid 19 lockdown Extended states Full List with date

ಲಾಕ್‌ಡೌನ್ ವಿಸ್ತರಿಸಿದ ರಾಜ್ಯಗಳ ವಿವರ

*ಕರ್ನಾಟಕ: ಜೂನ್ 7ರವರೆಗೆ ಲಾಕ್‌ಡೌನ್ ಮುಂದುವರಿಸಿರುವ ಕರ್ನಾಟಕ ಸರ್ಕಾರ

*ದೆಹಲಿ: ಕೆಲ ಸಡಿಲಿಕೆಗಳೊಂದಿಗೆ ಲಾಕ್‌ಡೌನ್ ನಿರ್ಬಂಧಗಳನ್ನು ಜೂನ್ 7ರ ವರೆಗೆ ವಿಸ್ತರಿಸಿದ ದೆಹಲಿ ಸರ್ಕಾರ

*ಹರಿಯಾಣ: ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಜೂನ್ 7 ರವರೆಗೆ ಲಾಕ್‌ಡೌನ್ ಮುಂದುವರಿಕೆ

*ಪಂಜಾಬ್: ಜೂನ್ 10ರವರೆಗೆ ನಿರ್ಬಂಧಗಳನ್ನು ಮುಂದುವರಿಸಿದ ಪಂಜಾಬ್ ಸರ್ಕಾರ

*ಜಾರ್ಖಂಡ್: ಜೂನ್ 3 ರವರೆಗೆ ಕೋವಿಡ್ -19 ಲಾಕ್‌ಡೌನ್ ಮುಂದುವರಿಕೆ

*ಒಡಿಶಾ: ಜೂನ್ 17 ರವರೆಗೆ ಲಾಕ್‌ಡೌನ್ ಮುಂದುವರಿಸಿದ ಒಡಿಶಾ ಸರ್ಕಾರ

*ಪಶ್ಚಿಮ ಬಂಗಾಳ: ಜೂನ್ 15 ರವರೆಗೆ ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್ ಮುಂದುವರಿಕೆ

*ರಾಜಸ್ಥಾನ: ಕೋವಿಡ್ -19 ಲಾಕ್‌ಡೌನ್ ರಾಜಸ್ಥಾನದಲ್ಲಿ ಜೂನ್ 8 ರವರೆಗೆ ವಿಸ್ತರಣೆ

Covid 19 lockdown Extended states Full List with date

*ಕೇರಳ: ಜೂನ್ 9 ರವರೆಗೆ ಕೇರಳದಲ್ಲಿ ಲಾಕ್‌ಡೌನ್ ಮುಂದುವರಿಕೆ

*ತಮಿಳುನಾಡು: ತಮಿಳುನಾಡಿನಲ್ಲಿ ಜೂನ್ 7ರವರೆಗೆ ಲಾಕ್‌ಡೌನ್ ವಿಸ್ತರಣೆ

*ತೆಲಂಗಾಣ: ಮೇ 31 ರಿಂದ 10 ದಿನಗಳವರೆಗೆ ಮುಂದುವರಿಯಲಿದೆ ಲಾಕ್‌ಡೌನ್

*ಗೋವಾ: ಜೂನ್ 7 ರವರೆಗೆ ಕೊರೊನಾ ಕರ್ಫ್ಯೂ ಮುಂದುವರಿಸಿದ ಗೋವಾ ಸರ್ಕಾರ

*ನಾಗಾಲ್ಯಾಂಡ್: ಜೂನ್ 11ರವರೆಗೆ ಲಾಕ್‌ಡೌನ್ ವಿಸ್ತರಿಸಿದ ನಾಗಾಲ್ಯಾಂಡ್ ಸರ್ಕಾರ

*ಉತ್ತರಾಖಂಡ: ಜೂನ್ 1 ರವರೆಗೆ ಕಟ್ಟುನಿಟ್ಟಿನ ಕೋವಿಡ್ 19 ಕರ್ಫ್ಯೂ

*ಮಿಜೋರಾಂ: ಜಿಲ್ಲಾ ಕೇಂದ್ರಗಳಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಜೂನ್ 6 ರವರೆಗೆ ಮುಂದುವರಿಕೆ

*ಹಿಮಾಚಲ ಪ್ರದೇಶ: ಕೆಲ ಸಡಿಲಿಕೆಯೊಂದಿಗೆ ಜೂನ್ 7 ರವರೆಗೆ ನಿರ್ಬಂಧಗಳು ಮುಂದುವರಿಕೆ

*ಮೇಘಾಲಯ: ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಜೂನ್ 7ರವರೆಗೆ ಲಾಕ್‌ಡೌನ್

*ತ್ರಿಪುರ: ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜೂನ್ 5 ರವರೆಗೆ ಕೊರೋನಾ ಕರ್ಫ್ಯೂ ವಿಸ್ತರಣೆ

*ಮಣಿಪುರ: ಜೂನ್ 11 ರವರೆಗೆ ಏಳು ಜಿಲ್ಲೆಗಳಲ್ಲಿ ಲಾಕ್‌ಡೌನ್ ವಿಸ್ತರಣೆ

*ಅರುಣಾಚಲ ಪ್ರದೇಶ: ರಾಜಧಾನಿ ಇಟಾನಗರ ಹಾಗೂ ಆರು ಜಿಲ್ಲೆಗಳಲ್ಲಿ ಜೂನ್ 7 ರವರೆಗೆ ಸಂಪೂರ್ಣ ಲಾಕ್ ಡೌನ್

Covid 19 lockdown Extended states Full List with date

*ಗುಜರಾತ್: 36 ನಗರಗಳಲ್ಲಿ ಜೂನ್ 4 ರವರೆಗೆ ರಾತ್ರಿ ಕರ್ಫ್ಯೂ ವಿಸ್ತರಣೆ

*ಆಂಧ್ರಪ್ರದೇಶ: ಜೂನ್ 10ರವರೆಗೆ ಲಾಕ್‌ಡೌನ್ ವಿಸ್ತರಣೆ

*ಸಿಕ್ಕಿಂ: ಜೂನ್ 7 ರವರೆಗೆ ಸಿಕ್ಕಿಂ ರಾಜ್ಯಾದ್ಯಂತ ಲಾಕ್‌ಡೌನ್ ವಿಸ್ತರಿಸಿದ ಸರ್ಕಾರ

*ಬಿಹಾರ: ಕೋವಿಡ್ 19 ಲಾಕ್‌ಡೌನ್‌ಅನ್ನು ಜೂನ್ 8 ರವರೆಗೆ ವಿಸ್ತರಿಸಿದ ಬಿಹಾರ ಸರ್ಕಾರ

English summary
here is the full list of States which Extended Covid-19 Lockdown and Restrictions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X