• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊವಿಡ್ 19: ಈ ದಿನದ ಅತಿ ಹೆಚ್ಚು ಕೇಸ್, ಯುಎಸ್ ಹಿಂದಿಕ್ಕಿದ ಭಾರತ

|

ಬೆಂಗಳೂರು, ಜುಲೈ 13: ಜಾಗತಿಕ ಮಹಾಮಾರಿ ಕೊವಿಡ್19 ಸೋಂಕಿನಿಂದ ಸಾವು ನೋವಿನ ಇಂದಿನ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ವಿವರ ಪಡೆಯಬಹುದು. ಈ ದಿನಕ್ಕೆ ದಾಖಲಾದ ಸೋಂಕಿತ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ಅಮೆರಿಕವನ್ನೇ ಭಾರತ ಮೀರಿಸಿದೆ.

ಎಂಟೂವರೆ ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ಭಾರತ 382 ಪ್ಲಸ್ ಸಾವು ಕಂಡಿದ್ದು, ಬೇರೆ ಯಾವ ದೇಶವೂ ಈ ಸಮಯಕ್ಕೆ 300 ಪ್ಲಸ್ ಸಾವು ಕಂಡಿಲ್ಲ. ಇದೇ ರೀತಿ ದಿನವೊಂದಕ್ಕೆ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪೈಕಿ ಅಮೆರಿಕವನ್ನು ಭಾರತ ಹಿಂದಿಕ್ಕಿದೆ. ಭಾರತದಲ್ಲಿ ಈ ಸಮಯಕ್ಕೆ 19,214 ಕೇಸ್ ದಾಖಲಾಗಿದ್ದರೆ, ಅಮೆರಿಕದಲ್ಲಿ 18,591 ಕೇಸ್ ದಾಖಲಾಗಿವೆ.

ಇನ್ನೊಂದೆಡೆ ರಷ್ಯಾದಲ್ಲಿ ಸತತವಾಗಿ ಸರಾಸರಿ 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಮರಣ ಪ್ರಮಾಣವೂ ಏರಿಕೆಯಾಗಿದೆ.

ಜುಲೈ 12ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 13,113,308 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 572,893ಕ್ಕೇರಿದೆ. ಒಟ್ಟಾರೆ, 7,635,546ಮಂದಿ ಗುಣಮುಖರಾಗಿದ್ದಾರೆ. ಒಟ್ಟು 4,904,869 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 58,713 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

ಮೆಕ್ಸಿಕೋದಲ್ಲಿ ಒಂದೇ ದಿನ 4,482 ಪ್ರಕರಣ ಕಾಣಿಸಿಕೊಂಡು ಟಾಪ್ 10 ಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಉಳಿದಿದೆ, ಟಾಪ್ 10 ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಸೇರಿಕೊಂಡಿದೆ. ಟಾಪ್ 11ಕ್ಕೆ ಇರಾನ್ ಕ್ಕೇರಿದೆ. ನಂತರ ಸ್ಥಾನದಲ್ಲಿ ಪಾಕಿಸ್ತಾನ, ಇಟಲಿ, ಸೌದಿ ಅರೇಬಿಯಾ, ಟರ್ಕಿ ಜೊತೆಗೆ ಜರ್ಮನಿ ಕೂಡಾ 2 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ.

ಮೃತರ ಸಂಖ್ಯೆಯಲ್ಲಿ ಟಾಪ್ 10 ರಾಷ್ಟ್ರಗಳಲ್ಲದೆ 5 ಸಾವಿರಕ್ಕೂ ಅಧಿಕ ಸಾವು ಕಂಡಿರುವ ದೇಶಗಳ ಪೈಕಿ ರಷ್ಯಾ (11,439), ಬೆಲ್ಜಿಯಂ (9,782), ಜರ್ಮನಿ (9,137), ಕೆನಡಾ (8,783), ಚಿಲಿ (7,024), ನೆದರ್ಲೆಂಡ್ಸ್(6,137), ಸ್ವೀಡನ್ (5,526), ಟರ್ಕಿ(5,363) ಕಾಣಿಸಿಕೊಂಡಿವೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:

ಯುಎಸ್ಎ: 3,432,586 ಪ್ರಕರಣಗಳು

ಬ್ರೆಜಿಲ್: 1,866,176

ಭಾರತ: 898,680

ರಷ್ಯಾ: 733,699

ಪೆರು: 326,326

ಚಿಲಿ: 317,657

ಸ್ಪೇನ್: 300,988

ಮೆಕ್ಸಿಕೋ: 299,750

ಯುಕೆ: 299,750

ದಕ್ಷಿಣ ಆಫ್ರಿಕಾ: 276,242

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:

ಯುಎಸ್ಎ: ಮೃತರ ಸಂಖ್ಯೆ 137,842

ಬ್ರೆಜಿಲ್: 72,151

ಯುಕೆ: 44,830

ಮೆಕ್ಸಿಕೋ: 35,006

ಇಟಲಿ: 34,954

ಫ್ರಾನ್ಸ್: 30,004

ಸ್ಪೇನ್: 28,403

ಭಾರತ: 23,569

ಇರಾನ್: 13,032

ಪೆರು: 11,870

English summary
The world is seeing a surge in the number of coronavirus cases. As on July 13 the total cases are at 13,113,308 and the death toll world wide is 572,893. The total number of recoveries is 7,635,546.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more