ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು

By Sachhidananda Acharya
|
Google Oneindia Kannada News

ಬೆಂಗಳೂರು, ಮಾರ್ಚ್ 13: ಮೈಸೂರಿಗೆ ಸಮೀಪದಲ್ಲಿರುವ ತಮಿಳುನಾಡು ಮತ್ತು ಕೇರಳದ ಜತೆ ಗಡಿಯನ್ನು ಹಂಚಿಕೊಂಡ ಜಿಲ್ಲೆ ಚಾಮರಾಜನಗರ. ಮೈಸೂರು ಅರಸು ಮನೆತನದ 9ನೇ ಚಾಮರಾಜ ಒಡೆಯರ್ ಇಲ್ಲಿ ಜನಿಸಿದ್ದರಿಂದ ಅವರ ನೆನಪಿಗಾಗಿ ಚಾಮರಾಜನಗರ ಎಂದು ಇಲ್ಲಿನ ನಗರಕ್ಕೆ ನಾಮಕರಣ ಮಾಡಲಾಯಿತು. ಮುಂದೆ ಇದೇ ಜಿಲ್ಲೆಯಾಯಿತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇದೇ ಚಾಮರಾಜನಗರ ಪಟ್ಟಣದಲ್ಲಿ 1838ರಲ್ಲಿ ಚಾಮರಾಜೇಶ್ವರ ದೇವಾಲಯವನ್ನು ನಿರ್ಮಿಸಲಾಯಿತು. ಈ ದೇವಾಲಯದ ಜತೆಗೆ ಸುವರ್ಣಾವತಿ ಜಲಾಶಯ, ದಿವ್ಯಲಿಂಗೇಶ್ವರ ದೇಗುಲ, ಕ್ಯಾತೇದೇವರ ಗುಡಿ ಪ್ರಕೃತಿ ಧಾಮ, ಬೆಲ್ಲತ್ತ ಜಲಾಶಯ ಮತ್ತು ಜಲಾಶಯ ಸುತ್ತಲಿನ ಪಕ್ಷಿರಾಶಿಯಿಂದ ಒಟ್ಟಾರೆ ಚಾಮರಾಜನಗರ ನಿಸರ್ಗ ಪ್ರಿಯರಿಗೆ ಉತ್ತಮ ತಾಣವೆನಿಸಿದೆ.

ಕೊಡಗು: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರುಕೊಡಗು: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು

ಬಿಳಿರಂಗನ ಬೆಟ್ಟ, ಮಲೈ ಮಹದೇಶ್ವರ ಬೆಟ್ಟ ಹಾಗೂ ದೇವಸ್ಥಾನ, ಹೊಗೆನಕಲ್ ಜಲಪಾತ, ಶಿವನ ಸಮುದ್ರ, ಗಗನಚುಕ್ಕಿ, ಭರಚುಕ್ಕಿ ಜಲಪಾತ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಅಭಯಾರಣ್ಯ, ಮುತ್ತತ್ತಿ, ಹಲವು ಅಣೆಕಟ್ಟುಗಳು ಇಲ್ಲಿದ್ದು ಚಾಮರಾಜನಗರ ಪ್ರವಾಸಿಗರ ಸ್ವರ್ಗವೇ ಸರಿ.

ವರನಟ ರಾಜಕುಮಾರ್ ಇದೇ ಚಾಮರಾಜನಗರ ಜಿಲ್ಲೆಗೆ ಸೇರಿದವರು. ಇದು ಕನ್ನಡ ಚಳವಳಿಯ ವಾಟಾಳ್ ಪಕ್ಷದ ತವರೂ ಹೌದು. ಇಲ್ಲಿನ ಚಾಮರಾಜನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ವಾಟಾಳ್ ನಾಗರಾಜ್ ವಿಧಾನಸಭೆ ಪ್ರವೇಶಿಸಿದ್ದರು. ದಂತಚೋರ ವೀರಪ್ಪನ್ ಇದೇ ಪ್ರದೇಶದ ಸುತ್ತ ಮುತ್ತ ವಾಸವಾಗಿದ್ದ.

ರಾಮನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರುರಾಮನಗರ: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು

5,676 ಚದರ ಕಿಲೋಮೀಟರ್ ಹರಡಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ 5 ತಾಲೂಕುಗಳು ಮತ್ತು 4 ವಿಧಾನಸಭಾ ಕ್ಷೇತ್ರಗಳಿವೆ. ಕೊಳ್ಳೇಗಾಲ, ಹನೂರು, ಗುಂಡ್ಲುಪೇಟೆ, ಯಳಂದೂರು, ಚಾಮರಾಜನಗರ ಇಲ್ಲಿನ ತಾಲೂಕುಗಳಾಗಿವೆ. ಯಳಂದೂರು ಬಿಟ್ಟು ಉಳಿದಿದ್ದೆಲ್ಲಾ ವಿಧಾನಸಭಾ ಕ್ಷೇತ್ರಗಳಾಗಿವೆ.

2013ರಲ್ಲಿ ಇಲ್ಲಿ ಚುನಾವಣೆ ನಡೆದಾಗ 4 ಕ್ಷೇತ್ರಗಳಲ್ಲಿ ನಾಲ್ಕನ್ನೂ ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. 2013ರಲ್ಲಿ ಚಾಮರಾಜನಗರದಲ್ಲಿ ಗೆದ್ದವರು ಯಾರು? ಪ್ರಬಲ ಸ್ಪರ್ಧೆ ನೀಡಿಯೂ ಎಡವಿ ಬಿದ್ದ ಅಭ್ಯಯರ್ಥಿಗಳು ಯಾರು? ಯಾರಿಗೆ ಎಷ್ಟು ಮತ? ಗೆಲುವಿನ ಅಂತರ ಎಷ್ಟು? ಮುಂತಾದ ವಿವರಗಳು ಇಲ್ಲಿವೆ...

Chamarajanagar district 2013 assembly election results
English summary
Chamarajanagar is the district of Karnataka nearer to Mysuru. Countdown begins for Karnataka assembly elections 2018. Here are the infographics of Chamarajanagar district 2013 assembly election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X