ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಂಟ್ರಲ್ ವಿಸ್ಟಾ ಯೋಜನೆ: ಕಾನೂನು ಪ್ರಕರಣದ ಕಾಲಾನುಕ್ರಮ

|
Google Oneindia Kannada News

ನವದೆಹಲಿ, ಜನವರಿ 6: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ಟಾ ಯೋಜನೆಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಇದರಲ್ಲಿ 971 ಕೋಟಿ ರೂ ವೆಚ್ಚದಲ್ಲಿ ನೂತನ ಹಾಗೂ ಭವ್ಯ ಸಂಸತ್ ಭವನ ನಿರ್ಮಿಸುವ ಯೋಜನೆಯೂ ಸೇರಿದೆ. ದೆಹಲಿಯ ರಾಷ್ಟ್ರಪತಿ ಭವನದಿಂದ ಲ್ಯೂಟ್ಯೆನ್ಸ್‌ನ ಇಂಡಿಯಾ ಗೇಟ್ ವರೆಗೂ ಸುಮಾರು 3 ಕಿಮೀ ದೂರದವರೆಗೆ ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಕಾಮಗಾರಿಗಳು ನಡೆಯಲಿವೆ.

2022ರ ಆಗಸ್ಟ್ 15ರಂದು ಭಾರತವು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ಸರಿಯಾಗಿ ಈ ಸಂಸತ್ ಭವನ ಉದ್ಘಾಟಿಸುವುದು ಸರ್ಕಾರದ ಉದ್ದೇಶ. ತ್ರಿಕೋನಾಕೃತಿಯ ಈ ಹೊಸ ಸಂಸತ್‌ನಲ್ಲಿ 900 ರಿಂದ 1,200ರಷ್ಟು ಸಂಸದರು ಕೂರುವ ಸಾಮರ್ಥ್ಯ ಇರಲಿದೆ. ಸಂಸದರು ಹಾಗೂ ಅಧಿಕಾರಿಗಳ ವಸತಿ ಗೃಹಗಳು, ವಿವಿಧ ಸಚಿವಾಲಯಗಳ ಕಚೇರಿಗಳು ಸೇರಿದಂತೆ ಅನೇಕ ಕಟ್ಟಡಗಳು ಈ ಮಾರ್ಗದಲ್ಲಿ ನಿರ್ಮಾಣವಾಗಲಿದೆ.

ಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿಹೊಸ ಸಂಸತ್ ಕಟ್ಟಡ ಯೋಜನೆ: ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ

ಸೆಂಟ್ರಲ್ ವಿಸ್ಟಾ ಯೋಜನೆ ಕಾನೂನು ಪ್ರಕರಣ ಸಾಗಿದ ಕಾಲಾನುಕ್ರಮ ಹೀಗಿದೆ.

ಸೆಪ್ಟೆಂಬರ್, 2019: ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್ ಪ್ರಕಟ. ತ್ರಿಕೋನಾಕೃತಿ ಸಂಸತ್ತು ಮತ್ತು ಇತರೆ ಕಟ್ಟಡಗಳ ನಿರ್ಮಾಣದ ರೂಪುರೇಷೆ ಬಹಿರಂಗ.

ಫೆ. 11, 2020: ಈ ಯೋಜನೆಯನ್ನು ಮುಂದುವರಿಸುವ ಮುನ್ನ ಮಾಸ್ಟರ್ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆಗೆ ಸೂಚನೆ ಹೊರಡಿಸುವ ಮುನ್ನ ನ್ಯಾಯಾಲಯವನ್ನು ಡಿಡಿಎ ಸಂಪರ್ಕಿಸಬೇಕು ಎಂದು ದೆಹಲಿ ಹೈಕೋರ್ಟ್ ಸೂಚನೆ.

Central Vista Project: Chronology Of Court Case

ಫೆ. 28: ಡಿಡಿಎ ಮತ್ತು ಕೇಂದ್ರ ಸರ್ಕಾರದ ಮನವಿಯ ಕುರಿತಾದ ಏಕ ಸದಸ್ಯ ನ್ಯಾಯಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆ ನೀಡಿತು.

ಜುಲೈ 17: ಪರಿಸರ ಅನುಮತಿ, ಭೂಮಿ ಬಳಕೆ ಸೇರಿದಂತೆ ಯೋಜನೆಗೆ ಸಂಬಂಧಿಸಿದ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆರಂಭಿಸಿತು.

Central Vista Project: Chronology Of Court Case

ನವೆಂಬರ್ 5: ಯೋಜನೆಗೆ ಸಂಬಂಧಿಸಿದ ವಿವಿಧ ಅರ್ಜಿಗಳ ಕುರಿತಾದ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತು.

75ನೇ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಸಂಸತ್ ಕಟ್ಟಡವು ಸಿದ್ಧವಾಗಲಿದೆ: ಹರ್ದೀಪ್ ಸಿಂಗ್ ಪುರಿ75ನೇ ಸ್ವಾತಂತ್ರ್ಯ ದಿನಾಚರಣೆಗೆ ಹೊಸ ಸಂಸತ್ ಕಟ್ಟಡವು ಸಿದ್ಧವಾಗಲಿದೆ: ಹರ್ದೀಪ್ ಸಿಂಗ್ ಪುರಿ

ಡಿ. 7: ಸೆಂಟ್ರಲ್ ವಿಸ್ಟಾ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತು. ಆದರೆ ಕಾಮಗಾರಿ ಆರಂಭಕ್ಕೆ ಅನುಮತಿ ನೀಡಲಿಲ್ಲ.

ಡಿ. 10: ಸೆಂಟ್ರಲ್ ವಿಸ್ಟಾ ಪ್ರಾಜೆಕ್ಟ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಜ. 5, 2021: ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿತು.

English summary
Supreme Court cleared the decks for Central Vista project of the central government. Here is the chronology of the case in court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X