• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರು ಮೆಟ್ರೋ 2ನೇ ಹಂತದ ಅಂಕಿ- ಅಂಶ ಪೂರ್ಣ ವಿವರ

|

ಬೆಂಗಳೂರಿನ ನಮ್ಮ ಮೆಟ್ರೋದ ಎರಡನೇ ಹಂತದಲ್ಲಿ ಯಲಚೇನಹಳ್ಳಿಯಿಂದ ಸಿಲ್ಕ್ ಇನ್ ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣದವರೆಗಿನ 6 ಕಿಮೀ ಉದ್ದದ ವಿಸ್ತರಿತ ಮಾರ್ಗದ ರೈಲು ಸಂಚಾರ ಇಂದಿನಿಂದ ಆರಂಭಗೊಂಡಿದೆ.

ಸಂಕ್ರಾಂತಿ ದಿನದಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ (ಸ್ವತಂತ್ರ ನಿರ್ವಹಣೆ) ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರು ಚಾಲನೆ ನೀಡಿದರು.

ಬೆಂಗಳೂರು ಮೆಟ್ರೋ ರೈಲು ಯೋಜನೆ ಎರಡನೇ ಹಂತದಲ್ಲಿ 74 ಕಿ.ಮೀ. ಉದ್ದದ ಮಾರ್ಗದಲ್ಲಿ 62 ನಿಲ್ದಾಣಗಳಿದ್ದು, 1ನೇ ಹಂತದ ನೆರಳೆ ಮತ್ತು ಹಸಿರು ಮಾರ್ಗಗಳೆಡರಲ್ಲೂ ನಾಲ್ಕೂ ದಿಕ್ಕಿನಲ್ಲಿ ಒಟ್ಟಾರೆ 34 ಕಿ.ಮೀ.ಗೆ ವಿಸ್ತರಣೆ ಮತ್ತು ಎರಡು ಹೊಸ ಮಾರ್ಗ ಅಂದರೆ, ಗೊಟ್ಟಿಗೆರೆ - ನಾಗವಾರದ ನಡುವೆ21 ಕಿ.ಮೀ. ಉದ್ದದ ಮಾರ್ಗ ಮತ್ತು ಆರ್.ವಿ. ರಸ್ತೆ - ಬೊಮ್ಮಸಂದ್ರ ನಡುವೆ 19 ಕಿ.ಮೀ. ಉದ್ದದ ಮಾರ್ಗ ಒಳಗೊಂಡಿದೆ. ಈ ಯೋಜನೆಯನ್ನು 30,695 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ.

ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್ ಸ್ಟಿಟ್ಯೂಟ್ ಐದು ನಿಲ್ದಾಣಗಳನ್ನು ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ, ಪ್ರತಿ ನಿಲ್ದಾಣವೂ 8 ಎಸ್ಕಲೇಟರ್ ಗಳು ಮತ್ತು 4 ಎಲಿವೇಟರ್ ಗಳಿಂದ ಸಜ್ಜಾಗಿದ್ದು, ಒಟ್ಟಾರೆ ಅನುಕ್ರಮವಾಗಿ 40 ಎಸ್ಕಲೇಟರ್ ಗಳು ಮತ್ತು 20 ಎಲಿವೇಟರ್ ಗಳಿವೆ.

ಈ ವಿಸ್ತರಣಾ ಮಾರ್ಗದ ಎಲ್ಲ 5 ನಿಲ್ದಾಣಗಳೂ ಛಾವಣಿಯ ಮೇಲಿನ 1.2 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಒಳಗೊಂಡಿವೆ. ಸೌರ ಘಟಕಗಳ ಸ್ಥಾಪನೆಯನ್ನು 2021ರ ಮಾರ್ಚ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಇದೇ ಮೊದಲ ಬಾರಿಗೆ ಮೆಟ್ರೋ ಸೌರ ವಿದ್ಯುತ್ ಸಾಮರ್ಥ್ಯವನ್ನು ಸ್ಥಾಪಿಸುತ್ತಿದೆ. ಇಂಧನ ದಕ್ಷತೆಯ ಎಲ್.ಇ.ಡಿ. ದೀಪಗಳನ್ನು ಎಲ್ಲ 5 ನಿಲ್ದಾಣಗಳಲ್ಲಿ ಒದಗಿಸಲಾಗಿದೆ.

ದೈಹಿಕ ಮತ್ತು ದೃಷ್ಟಿ ವಿಶೇಷ ಚೇತನ ವ್ಯಕ್ತಿಗಳಿಗಾಗಿ, ಎಲ್ಲ ಸೌಲಭ್ಯಗಳು ಅಂದರೆ ರ‍್ಯಾಪ್ ಗಳು, ಲಿಫ್ಟ್, ಪ್ರತ್ಯೇಕ ಶೌಚಾಲಯಗಳು, ಸ್ಪರ್ಶ ಮಾರ್ಗ, ಮತ್ತು ರೈಲುಗಳಲ್ಲಿ ಮೀಸಲಿಟ್ಟ ಸ್ಥಳವನ್ನು ಒದಗಿಸಲಾಗಿದೆ. ಬಸ್ ಮಾರ್ಗಗಳು, ಟ್ಯಾಕ್ಸಿ ಮತ್ತು ಆಟೋಗಳಿಗೆ ಪಿಕಪ್ ಮತ್ತು ಡ್ರಾಪ್ ಪ್ರದೇಶವನ್ನು ಸರ್ವೀಸ್ ರಸ್ತೆಯಲ್ಲಿ ಗುರುತಿಸಲಾಗಿದೆ. ಇನ್ನಷ್ಟು ವಿವರ ಚಿತ್ರ ವರದಿಯಲ್ಲಿ (ಚಿತ್ರವಿನ್ಯಾಸ: ಭರತ್ ಎಚ್ .ಸಿ)

   Yediyurappa ಮತ್ತು Vijayendra ನ ಮಾಯ ಜಾಲ!!| Oneindia Kannada

   English summary
   BMRCL Namma Metro phase 2 from Yelachenahalli to Silk Institured inaugurated The project is being implemented at a cost of ₹30,695 crores.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X