• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿಯ ದೇಣಿಗೆ ಸಂಗ್ರಹದಲ್ಲಿ ಬರೋಬ್ಬರಿ ಶೇ 539 ರಷ್ಟು ಏರಿಕೆ!

|

ನವದೆಹಲಿ, ಮೇ 31: ಕಳೆದ ವರ್ಷದಲ್ಲಿ ಬಿಜೆಪಿಯ ಘೋಷಿತ ದೇಣಿಗೆಯ ಪ್ರಮಾಣದಲ್ಲಿ ಶೇ 593ರಷ್ಟು ಹೆಚ್ಚಳವಾಗಿದೆ.

2016-17ರ ನಡುವೆ 20,000 ರೂ.ಗಿಂತ ಅಧಿಕ ಮೊತ್ತದ ದೇಣಿಗೆ ಸಂಗ್ರಹದ ಮೊತ್ತವನ್ನು ಮಾತ್ರ ಪರಿಗಣಿಸಲಾಗಿದ್ದು, ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್‌ಇಡಬ್ಲ್ಯೂ) ನಡೆಸಿದ ಪಕ್ಷಗಳ ಆದಾಯದ ಮೌಲ್ಯಮಾಪನದಲ್ಲಿ ಈ ಮಾಹಿತಿ ದೊರೆತಿದೆ.

2015-16ರಲ್ಲಿ ಆಡಳಿತಾರೂಢ ಬಿಜೆಪಿಯು ಈ ರೀತಿ 76.85 ಕೋಟಿ ವಂತಿಗೆ ಪಡೆದುಕೊಂಡಿದ್ದರೆ, ಅದರ ಮೊತ್ತ 2016-17ರ ಅವಧಿಯಲ್ಲಿ 532.27 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಇದು ಕಾಂಗ್ರೆಸ್ ಘೋಷಿಸಿಕೊಂಡಿರುವ ತನ್ನ ದೇಣಿಗೆಯ ಮೊತ್ತಕ್ಕಿಂತ ಹತ್ತು ಪಟ್ಟು ಹೆಚ್ಚಿನದ್ದಾಗಿದೆ. ಇದೇ ಅವಧಿಯಲ್ಲಿ ದೇಣಿಗೆ ಪಡೆದುಕೊಂಡ ಪಕ್ಷಗಳ ಪಟ್ಟಿಯಲ್ಲಿ ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿದೆ.

ಡಿ.ಕೆ ಶಿವಕುಮಾರ್‌ಗೆ ಆಮಿಷವೊಡ್ಡಿದ್ದ ಅಮಿತ್ ಶಾ: ಸ್ಫೋಟಕ ಮಾಹಿತಿ

ಕಾಂಗ್ರೆಸ್ 2016-17ರ ಅವಧಿಯಲ್ಲಿ ತನ್ನ ಬಳಿ 41.90 ಕೋಟಿ ವಂತಿಗೆ ಸಂಗ್ರಹವಾಗಿದೆ ಎಂದು ಘೋಷಿಸಿಕೊಂಡಿದೆ. ಆದರೆ, ಕಾಂಗ್ರೆಸ್‌ನ ಒಟ್ಟಾರೆ ವಂತಿಗೆ ಸಂಗ್ರಹದಲ್ಲಿಯೂ ಶೇ 105ರಷ್ಟು ಹೆಚ್ಚಳವಾಗಿದೆ. 2015-16ರಲ್ಲಿ ಕಾಂಗ್ರೆಸ್‌ 20.42 ಕೋಟಿ ರೂ. ದೇಣಿಗೆ ಪಡೆದುಕೊಂಡಿತ್ತು.

ಪ್ರಮುಖ ರಾಷ್ಟ್ರೀಯ ಪಕ್ಷಗಳು ತಾವು ಪಡೆದುಕೊಂಡ ದೇಣಿಗೆಯ ಮೊತ್ತವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿದ್ದು, ಅದರ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.

ಎನ್‌ಸಿಪಿ ದೇಣಿಗೆಯಲ್ಲೂ ಏರಿಕೆ

ಎನ್‌ಸಿಪಿ ದೇಣಿಗೆಯಲ್ಲೂ ಏರಿಕೆ

ಆದರೆ, ಒಟ್ಟಾರೆ ದೇಣಿಗೆ ಸಂಗ್ರಹದಲ್ಲಿ ಅತಿ ಹೆಚ್ಚಿನ ಏರಿಕೆ ಕಂಡಿರುವುದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ). ಘೋಷಿತ ದೇಣಿಗೆಗಳಲ್ಲಿ ಎನ್‌ಸಿಪಿ ಶೇ 793ರಷ್ಟು ಹೆಚ್ಚಳವಾಗಿದೆ. 2015-16ರಲ್ಲಿ 71 ಲಕ್ಷ ರೂ ವಂತಿಗೆ ಹೊಂದಿದ್ದ ಎನ್‌ಸಿಪಿ, 2016-17ರಲ್ಲಿ ಮೊತ್ತವನ್ನು 6.34 ಕೋಟಿಗೆ ಹೆಚ್ಚಿಸಿಕೊಂಡಿದೆ.

ಕಮ್ಯುನಿಸ್ಟ್ ಪಕ್ಷದಲ್ಲಿ ಇಳಿಕೆ

ಕಮ್ಯುನಿಸ್ಟ್ ಪಕ್ಷದಲ್ಲಿ ಇಳಿಕೆ

ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ನಡುವೆ ದೇಣಿಗೆ ಸಂಗ್ರಹದಲ್ಲಿ ಇಳಿಕೆ ಕಂಡಿರುವುದು ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ಮಾತ್ರ. ಸಿಪಿಐನ ದೇಣಿಗೆ ಮೊತ್ತದಲ್ಲಿ ಶೇ 9ರಷ್ಟು ಕುಸಿತವಾಗಿದೆ. 2015-16ರಲ್ಲಿ 1.58 ಕೋಟಿ ದೇಣಿಗೆ ಪಡೆದುಕೊಂಡಿದ್ದ ಸಿಪಿಐ, 2016-17ರಲ್ಲಿ 1.44 ಕೋಟಿ ದೇಣಿಗೆ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ಒಟ್ಟಾರೆ ದೇಣಿಗೆ ಶೇ 478ರಷ್ಟು ಏರಿಕೆ

ಒಟ್ಟಾರೆ ದೇಣಿಗೆ ಶೇ 478ರಷ್ಟು ಏರಿಕೆ

ಪ್ರಮುಖ ಏಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್‌ನ ಒಟ್ಟಾರೆ ವಂತಿಗೆ ಸಂಗ್ರಹದ ಮೊತ್ತದಲ್ಲಿ ಶೇ 478ರಷ್ಟು ಏರಿಕೆಯಾಗಿದೆ. 2015-16ರಲ್ಲಿ ಒಟ್ಟು 102.02 ಕೋಟಿ ರೂ. ದೇಣಿಗೆ ಸಂಗ್ರಹವಾಗಿದ್ದರೆ, 2016-17ರಲ್ಲಿ 589.38 ಕೋಟಿ ದೇಣಿಗೆ ಸಂಗ್ರಹವಾಗಿದೆ.

2016-17ರಲ್ಲಿ ಸಂಗ್ರಹವಾದ 589.38 ಕೋಟಿ ದೇಣಿಗೆ ಮೊತ್ತದಲ್ಲಿ ಬಿಜೆಪಿಯದೇ ಪಾಲು 532.27 ಕೋಟಿ ರೂ.ನಷ್ಟಿದೆ.

ಅಪರಿಚಿತ ಮೂಲಗಳಿಂದ ದೇಣಿಗೆ

ಅಪರಿಚಿತ ಮೂಲಗಳಿಂದ ದೇಣಿಗೆ

ಈ ವಂತಿಗೆಯ ಮೂಲಗಳನ್ನು ಅಪರಿಚಿತ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡಿವೆ. ತಮ್ಮ ದೇಣಿಗೆದಾರ ಮಾಹಿತಿಯ ಪಟ್ಟಿಯನ್ನು ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗಿತ್ತು.

ಎಲ್ಲ ಪಕ್ಷಗಳ ವಂತಿಗೆ ಹಣವು ಒಟ್ಟು 589.38 ಕೋಟಿಯಷ್ಟಿದ್ದರೆ, ಇದೇ ಅವಧಿಯಲ್ಲಿ ಒಟ್ಟಾರೆ ಆದಾಯವು 1559.17 ಕೋಟಿಯಷ್ಟಿದೆ. ಇದರಲ್ಲಿಯೂ ಶೇ 45.59ರಷ್ಟು ಆದಾಯ ಅಜ್ಞಾತ ಮೂಲದಿಂದ ಬಂದಿದೆ.

ಬಿಜೆಪಿಯು ಸ್ವಯಂ ಇಚ್ಛೆಯಿಂದ ಜನರು ನೀಡಿರುವ ಕೊಡುಗೆಗಳು ಎಂದು ತನ್ನ ಶೇ 99.98ರಷ್ಟು ಆದಾಯವನ್ನು ತೋರಿಸಿಕೊಂಡಿದೆ. 2016-17ರಲ್ಲಿ ಬಿಜೆಪಿಯ ಆದಾಯ 464.94 ಕೋಟಿ ರೂ.ನಷ್ಟಿದೆ.

ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳು ದಾನಿಗಳಿಂದ ದೇಣಿಗೆ ಸಂಗ್ರಹಿಸಲು 'ಕೂಪನ್ ಸೇಲ್' ಪದ್ಧತಿಯನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಂಡಿವೆ. ಈ ಪಕ್ಷಗಳು ಅಜ್ಞಾತ ಮೂಲದಿಂದ ಶೇ 91.69ರಷ್ಟು ಆದಾಯ ಕಂಡಿವೆ. ಇದರ ಒಟ್ಟು ಮೊತ್ತ 2016-17ರಲ್ಲಿ 126.12 ಕೋಟಿ ರೂ.

ಆರ್‌ಟಿಐ ವ್ಯಾಪ್ತಿಯಲ್ಲಿ ಇಲ್ಲ

ಆರ್‌ಟಿಐ ವ್ಯಾಪ್ತಿಯಲ್ಲಿ ಇಲ್ಲ

ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳೂ ಮಾಹಿತಿ ಹಕ್ಕು ನಿಯಮದಡಿ ತಮ್ಮ ಹಣಕಾಸಿನ ಎಲ್ಲ ವ್ಯವಹಾರಗಳನ್ನೂ ಒದಗಿಸಬೇಕು. ರಾಜಕೀಯ ಪಕ್ಷಗಳು, ಚುನಾವಣೆ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ನೆರವಾಗಲಿದೆ ಎಂದು ವರದಿ ಹೇಳಿದೆ.

ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿತ್ತು. ಕೇಂದ್ರ ಮಾಹಿತಿ ಆಯೋಗವು ಆರು ರಾಷ್ಟ್ರೀಯ ಪಕ್ಷಗಳು ಸಾರ್ವಜನಿಕ ಅಥಾರಿಟಿಗಳಾಗಿವೆ ಎಂದು ಹೇಳಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ADR and New Election Watch reports said that the donation of BJP has increased to 593% in the 2016-17 financial year. BJP received the amount of 532.27 crores. Its donation was 76.85 crores in 2015-16.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more