ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಬೆಂಗಳೂರು ಮಳೆ ಆರ್ಭಟ, ಯಾವ ಏರಿಯಾದಲ್ಲಿ ಎಷ್ಟು ಮಳೆ?

|
Google Oneindia Kannada News

ಬೆಂಗಳೂರು ಜೂ.18: ಕೆಲ ಕಾಲ ಬ್ರೇಕ್ ತೆಗೆದುಕೊಂಡಿದ್ದ ಮುಂಗಾರು ಮಾರುತಗಳು ಈ ವಾರಾಂತ್ಯದಲ್ಲಿ ಬೆಂಗಳೂರಿನ ಆಗಸದಲ್ಲಿ ಜಂಗೀಕುಸ್ತಿ ಇಳಿದಂತೆ ಕಾಣುತ್ತಿದೆ. ಒಂದು ರಾತ್ರಿ ಮಳೆಗೆ ಎರಡು ಜೀವಗಳು ಅಸುನೀಗಿವೆ. ಹಲವೆಡೆ ಆಸ್ತಿ ಪಾಸ್ತಿ ನಾಶಗೊಂಡಿವೆ. ಮುಂಗಾರು ಮಳೆ ಸ್ವಾಗತಿಸಲು ಸಜ್ಜಾಗದ ಬಿಬಿಎಂಪಿ ನಮಗೆ ಮಳೆ ಸಂಬಂಧಿಸಿದಂತೆ ದೂರುಗಳು ಹೆಚ್ಚಾಗಿ ಬಂದಿಲ್ಲ ಎಂದು ಸುಮ್ಮನಾಗಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾದೇವಪುರ ವಲಯ ವ್ಯಾಪ್ತಿಯೊಂದರಲ್ಲೇ ಅತ್ಯಧಿಕ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದ್ದಲ್ಲದೆ, ಕೆ.ಆರ್ ಪುರದಲ್ಲಿನ ಕೃಷ್ಣ ಥಿಯೇಟರ್‌ನ ಗೋಡೆ ಕುಸಿದಿದೆ. ಮಹಾದೇವಪುರದಲ್ಲಿ ವಾಸವಿದ್ದ ಶಿವಮೊಗ್ಗ ಮೂಲದ ಮಿಥುನ್ ಎಂಬಾತ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ.

ಬೆಂಗಳೂರಲ್ಲಿ ವೈರಲ್ ಸೋಂಕುಗಳಲ್ಲಿ ಶೇ 10 ರಿಂದ 15 ರಷ್ಟು ಏರಿಕೆಬೆಂಗಳೂರಲ್ಲಿ ವೈರಲ್ ಸೋಂಕುಗಳಲ್ಲಿ ಶೇ 10 ರಿಂದ 15 ರಷ್ಟು ಏರಿಕೆ

ರಾಮಮೂರ್ತಿ ನಗರದ ಚರ್ಚ್ ರಸ್ತೆಯ ಅಂಬೇಡ್ಕರ್ ನಗರದಲ್ಲಿ ರಾಜಕಾಲುವೆ ತ್ಯಾಜ್ಯದಿಂದ ಕಟ್ಟಿಕೊಂಡು ಮಳೆ ನೀರು ರಸ್ತೆಗೆ ಮತ್ತು ಸುಮಾರು ಹತ್ತು ಮನೆಗಳಿಗೆ ನುಗ್ಗಿದೆ. ಶಿವಾನಂದ ವೃತ್ತ, ಓಕಳಿಪುರಂ, ಯಲಹಂಕದಲ್ಲಿ ರಸ್ತೆ ಅಂಡರ್ ಪಾಸ್‌ಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ನಿಂತಿತ್ತು. ವಾಹನ ಸವಾರರು ಸಂಚರಿಸಲು ಪರದಾಡಿದರು. ತ್ಯಾಜ್ಯದಿಂದ ಬ್ಲಾಕ್ ಆದ ಪರಿಣಾಮ ಒಳಚರಂಡಿ ನೀರು ರಸ್ತೆ ಮೇಲೆ ಉಕ್ಕಿ ಹರಿಯಿತು.

Infographics: Bengaluru registers heavy Rain, Know which area received more rain

ಯಲಹಂಕ, ಮಹಾದೇವಪುರ, ಕೆ.ಆರ್ ಪುರಂ, ಮೆಜೆಸ್ಟಿಕ್ ಸುತ್ತಮುತ್ತ, ಕಾಟನ್ ಪೇಟೆ, ವಿದ್ಯಾರಣ್ಯಪುರ, ಕೆ.ಆರ್ ಮಾರುಕಟ್ಟೆ, ಟೌನ್ ಹಾಲ್, ರಾಜಾಜಿನಗರ, ನಾಯಂಡಹಳ್ಳಿ ಸೇರಿದಂತೆ ವಿವಿಧೆಡೆ ಮುಖ್ಯರಸ್ತೆಗಳಲ್ಲೇ ಮಳೆ ನೀರು ತುಂಬಿ ಹರಿದಿದೆ. ಅದರಲ್ಲೇ ವಾಹನ ಸವಾರರು ಸಂಚರಿಸಿದ್ದಾರೆ.

ಮಹಾದೇವಪುರ ವ್ಯಾಪ್ತಿಯ ಹೊರಮಾವು ವೊಂದರಲ್ಲೇ ಅತ್ಯಧಿಕ 146 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ದೊಡ್ಡಾನೆಕ್ಕುಂದಿ 106 ಮಿ.ಮೀ, ಎಚ್ ಎ ಎಲ್ ವಿಮಾನ ನಿಲ್ದಾಣ 103 ಮಿ.ಮೀ., ಯಲಹಂಕ ಮತ್ತು ಜಕ್ಕೂರು ತಲಾ 88 ಮಿ.ಮೀ., ಅಟ್ಟೂರ 86ಮಿ.ಮೀ., ಕೊಡಿಗೇಹಳ್ಳಿ 73ಮಿ.ಮೀ., ರಾಜ್ ಮಹಲ್ ಗುಟ್ಟಹಳ್ಳಿ 68 ಮಿ.ಮೀ., ಕೆ.ಆರ್ ಪುರಂ 77ಮಿ.ಮೀ., ಹೂಡಿ 72ಮಿ.ಮೀ., ಕುಶಾಲನಗರ 33ಮಿ.ಮೀ., ವಿಶ್ವನಾಥ ನಾಗೇನಹಳ್ಳಿ 32ಮಿ.ಮೀ, ನಾಗಪುರ 29ಮಿ. ಮೀ. ಮಳೆ ದಾಖಲಾಗಿದೆ.

Infographics: Bengaluru registers heavy Rain, Know which area received more rain

ಹೊಸಕೆರೆಹಳ್ಳಿ, ಬನಶಂಕರಿ, ವಿದ್ಯಾಪೀಠ, ಬಸವನಗುಡಿ, ನಾಯಂಡನಹಳ್ಳಿ, ವಿಜಯನಗರ, ಕೆಂಗೇರಿ, ಬಸವೇಶ್ವರ ನಗರ ಸೇರಿದಂತೆ ಹಲವೆಡೆ ಶನಿವಾರ ಸಂಜೆ ಕೂಡಾ ಮಳೆ ಸುರಿಯುತ್ತಿದೆ. ಭಾನುವಾರವೂ ಮಳೆ ಬೆಂಗಳೂರಿನ ಹಲವೆಡೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವರದಿ ತಿಳಿಸಿದೆ.

English summary
Infographics: Bengaluru registers heavy Rain, Mahadevapur zone received 146mm rain, Know how much other areas received more rain
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X