ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

infographics: ಬಿಬಿಎಂಪಿ ವಿವಿಧ ವಾರ್ಡುಗಳಲ್ಲಿ ಬಿದ್ದ ಮಳೆ ಪ್ರಮಾಣವೆಷ್ಟು?

|
Google Oneindia Kannada News

ಬೆಂಗಳೂರು, ಅ. 21: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ ಎರಡು ದಿನಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಭಾರಿ ಮಳೆ ಸುರಿದಿದೆ. 20 ಮಿ.ಮೀ ಮಳೆಗೆ ನಡುಗಿ ಹೋಗುವ ಜನತೆ ನಿನ್ನೆ ಕೆಲ ಗಂಟೆಗಳಲ್ಲೇ 60 ಮಿ.ಮೀ ಮಳೆ ಎದುರಿಸಿ ತತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ಜಿಟಿಜಿಟಿ ಮಳೆ ಆರಂಭವಾಗಿದ್ದು, ಬಿಟ್ಟು ಬಿಟ್ಟು ಸುರಿಯಲಾರಂಭಿಸಿತ್ತು. ರಾತ್ರಿ ಮಳೆ ಜೋರಾಗಿತ್ತು. ಬುಧವಾರದಂದು ಆಫೀಸು, ಅಂಗಡಿಗಳಿಗೆ ಹೊರಟ ವಾಹನ ಸವಾರರು ಪರದಾಡುತ್ತಿದ್ದ ದೃಶ್ಯ ಹಲವೆಡೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 25 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ನಾಳೆ ಕೂಡಾ ಇದೇ ಪ್ರಮಾಣದ ಹವಾಮಾನ ಇರಲಿದೆ

ಉತ್ತರದಲ್ಲಿ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ ವಿವರ ಉತ್ತರದಲ್ಲಿ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ ವಿವರ

ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು ರಸ್ತೆ, ಚಾಮರಾಜಪೇಟೆ, ಹೊಸಕೆರೆಹಳ್ಳಿ, ವಿಜಯನಗರ, ನಾಯಂಡಹಳ್ಳಿ, ಶ್ರೀನಗರ, ಚಂದ್ರಾ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇಔಟ್, ಜಯನಗರ, ಕೆಆರ್​ ಮಾರ್ಕೆಟ್ ಸೇರಿ ಹಲವೆಡೆ ಜೋರು ಮಳೆಯಾಗಿದೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಕಳೆದ 24ಗಂಟೆಗಳಲ್ಲಿ ಸುರಿದ ಮಳೆ ಪ್ರಮಾಣದ ಇನ್ಫೋಗ್ರಾಫಿಕ್ಸ್ ಇಲ್ಲಿದೆ (ಚಿತ್ರ ವಿನ್ಯಾಸ: ಭರತ್ ಎಚ್. ಸಿ)

Bengaluru: Heavy rainfall recorded in BBMP as on Oct 21

Bengaluru: Heavy rainfall recorded in BBMP as on Oct 21

Bengaluru: Heavy rainfall recorded in BBMP as on Oct 21

English summary
Heavy rainfall recorded in many wards of BBMP, Here is rainfall detail as on October 21 across Bengalruu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X