ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಸಂಬಂಧಿಸಿದ ಹೊಸ ಸಹಾಯವಾಣಿ ಪ್ರಕಟ

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೊರೊನಾ ವೈರಸ್ ಸಂಬಂಧಿಸಿದಂತೆ ನೂತನ ಸಹಾಯವಾಣಿಯನ್ನು ಆರಂಭಿಸಿದ್ದು, ಈ ಕುರಿತಂತೆ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.

ಬೆಂಗಳೂರಿನ ನಾಗರಿಕರು ಕೋವಿಡ್ 19ಕ್ಕೆ ಸಂಬಂಧಿಸೈದ ನೆರವಿಗಾಗಿ ಹೊಸ ಸಹಾಯವಾಣಿ 1912 ಸಂಖ್ಯೆ ಮೂಲಕ ಬಿಬಿಎಂಪಿ ಕೇಂದ್ರವನ್ನು ಸಂಪರ್ಕಿಸಬಹುದು.

ಯಾವ ಯಾವ ನೆರವು ಪಡೆಯಬಹುದು:
* ಆಸ್ಪತ್ರೆಯಲ್ಲಿ ಹಾಸಿಗೆ ಕಾದಿರಿಸುವುದು ಮತ್ತು ಪ್ರವೇಶ ಪಡೆಯುವುದು
* ಕೋವಿಡ್ ಆರೈಕೆ ಕೇಂದ್ರದಲ್ಲಿ ಹಾಸಿಗೆ ಕಾಯ್ದಿರಿಸುವುದು.
* ಬಿಬಿಎಂಪಿ ಆಂಬ್ಯುಲೆನ್ಸ್ ಸೌಲಭ್ಯ
* ಮನೆಯಲ್ಲೇ ಪ್ರತ್ಯೇಕವಾಗಿರಿಸಲು ನೆರವು.

ಇದಲ್ಲದೆ, ಕೋವಿಡ್ ಸಂಬಂಧಿಸಿದ ವಿಚಾರಣೆ, ಪರೀಕ್ಷಾ ಕೇಂದ್ರ, ಕೊರೊನಾ ಲಸಿಕೆ ನೀಡಿಕೆ, ಕೋವಿಡ್ 19 ಲಕ್ಷಣಗಳ ಬಗ್ಗೆ ವೈದ್ಯಕೀಯ ಸಲಹೆಗಾಗಿ ಆಪ್ತಮಿತ್ರ ಸಹಾಯವಾಣಿ 14419ಕ್ಕೆ ಕರೆ ಮಾಡಬಹುದು.

ತುರ್ತು ಪ್ರಕರಣಗಳಿಗಾಗಿ ಆಂಬ್ಯುಲೆನ್ಸ್ ಸೌಲಭ್ಯ ಹಾಗೂ ಕೋವಿಡ್ 19 ರೋಗಿಗಳನ್ನು ಅಂತರ್ ಆಸ್ಪತ್ರೆಗೆ ಸ್ಥಳಾಂತರಿಸಲು 108ಗೆ ಕರೆ ಮಾಡಬಹುದು.

ಬಿಬಿಎಂಪಿ ವಲಯವಾರು ಸಹಾಯವಾಣಿ ಕೂಡಾ ಚಾಲನೆಯಲ್ಲಿದೆ
ಪೂರ್ವ ವಲಯ: 7411038024/ 9886496295

ಪಶ್ಚಿಮ ವಲಯ: 080-68248454

ದಕ್ಷಿಣ ವಲಯ: 8431816718

ಮಹದೇವಪುರ ವಲಯ: 080-23010101/23010102

ಬೊಮ್ಮನಹಳ್ಳಿ ವಲಯ: 8884666670

ಯಲಹಂಕ ವಲಯ: 9480685964

ರಾಜರಾಜೇಶ್ವರಿ ನಗರ ವಲಯ: 080-28601050

ದಾಸರಹಳ್ಳಿ ವಲಯ: 080-29590057/29635904/5906

ಈ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ಕುರಿತಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆ ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ಲಾಕ್ ಡೌನ್, ಇನ್ನಷ್ಟು ಕಠಿಣ ಕ್ರಮ ಬಗ್ಗೆ ಪ್ರಧಾನಿ ಮೋದಿ ಹಾಗೂ ಆರೋಗ್ಯ ಸಚಿವಾಲಯದ ಸೂಚನೆಯಂತೆ ಕ್ರಮ ಜರುಗಿಸಲಾಗುವುದು. ಏಪ್ರಿಲ್ 20ರ ನಂತರ ಸಭೆ ಸೇರಿ ನೈಟ್ ಕರ್ಫ್ಯೂ ಮುಂದುವರೆಸುವ ಹಾಗೂ ಇತರೆ ಜಿಲ್ಲೆಗಳಿಗೆ ವಿಸ್ತರಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದರು.

BBMP issues new COVID-19 helpline numbers
English summary
The Bruhat Bengaluru Mahanagara Palike (BBMP) has issued a public notification with new COVID-19 helpline numbers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X