ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವಕಲ್ಯಾಣ ಉಪ ಚುನಾವಣೆ; ಅಭ್ಯರ್ಥಿಗಳ ಪಡೆದ ಮತಗಳು

|
Google Oneindia Kannada News

ಬೀದರ್, ಮೇ 03; ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭೆ ಉಪ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ. ಬಿಜೆಪಿಯ ಶರಣು ಸಲಗರ ಮೊದಲ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಪ್ರವೇಶಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರದಲ್ಲಿ 2021ರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಶರಣು ಸಲಗರ 71,012 ಮತಗಳನ್ನು ಪಡೆಯುವ ಮೂಲಕ ಬಿಜೆಪಿಯ ಮಾಲಾ ಬಿ. ನಾರಾಯಣರಾವ್ ಅವರನ್ನು ಸೋಲಿಸಿದ್ದಾರೆ. ಶರಣು ಸಲಗರ 456 ಅಂಚೆ ಮತಗಳು, 70,556 ಇವಿಎಂ ಮತಗಳನ್ನು ಪಡೆದಿದ್ದಾರೆ. ಶೇ 48.17ರಷ್ಟು ಮತಗಳನ್ನು ಪಡೆದಿದ್ದಾರೆ.

ಬಸವಕಲ್ಯಾಣ: ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗೆ ಭಾರೀ ಹಿನ್ನೆಡೆಬಸವಕಲ್ಯಾಣ: ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾಗೆ ಭಾರೀ ಹಿನ್ನೆಡೆ

ಕಾಂಗ್ರೆಸ್‌ನ ಮಾಲಾ ಬಿ. ನಾರಾಯಣರಾವ್ 50,108 ಇವಿಎಂ, 275 ಅಂಚೆ ಮತಗಳು ಸೇರಿ ಒಟ್ಟು 50,383 ಮತಗಳನ್ನು ಪಡೆದು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶೇ 34.17ರಷ್ಟು ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

 Infographics: ಪಶ್ಚಿಮ ಬಂಗಾಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ Infographics: ಪಶ್ಚಿಮ ಬಂಗಾಳ ಪಕ್ಷವಾರು ಫಲಿತಾಂಶ ಸಮಗ್ರ ಅಂಕಿ ಅಂಶ

Basavakalyan : Party-wise Assembly By Election Results 2021

ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ 11,390 ಇವಿಎಂ ಮತಗಳು, 12 ಅಂಚೆ ಮತಗಳು ಸೇರಿ 11,402 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದಾರೆ. ಜೆಡಿಎಸ್ ಪಕ್ಷದ ಮತಗಳಿಕೆ ಶೇ 7.73 ಆಗಿದೆ.

ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾ 9,475 ಮತಗಳನ್ನು ಪಡೆದಿದ್ದಾರೆ. ಉಪ ಚುನಾವಣೆಯಲ್ಲಿ 888 ನೋಟಾ ಮತಗಳು ಚಲಾವಣೆಯಾಗಿವೆ.

English summary
Basavakalyan : Party-wise Assembly by Election Results 2021. BJP candidate Sharanu Salagara won Basavakalyan by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X