ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಖಾಸಗಿ ಪಾಲಾಗಲಿವೆ ನಾಲ್ಕು ವಿಮಾನ ನಿಲ್ದಾಣಗಳು

|
Google Oneindia Kannada News

ನವದೆಹಲಿ, ಮಾರ್ಚ್ 15: ಕೇಂದ್ರ ಸರ್ಕಾರ ದೇಶದ ಆರು ವಿಮಾನ ನಿಲ್ದಾಣಗಳಲ್ಲಿನ ತನ್ನ ಬಂಡವಾಳಗಳನ್ನು ವಾಪಸ್ ಪಡೆದುಕೊಳ್ಳುವ ಮೂಲಕ ಅವುಗಳ ನಿರ್ವಹಣೆಯನ್ನು ಈಗಾಗಲೇ ಖಾಸಗಿ ವಲಯಕ್ಕೆ ಒಪ್ಪಿಸಿದೆ. ಈ ಆರೂ ವಿಮಾನ ನಿಲ್ದಾಣಗಳ ನಿರ್ವಹಣೆ ಬಿಡ್ಡಿಂಗ್‌ಅನ್ನು ಅದಾನಿ ಸಮೂಹ ಪಡೆದುಕೊಂಡಿದ್ದು ವಿವಾದ ಸೃಷ್ಟಿಸಿತ್ತು.

ಆದರೆ ಕೆಲವು ಪ್ರಮುಖ ಕ್ಷೇತ್ರಗಳಿಂದ ತನ್ನ ಷೇರುಗಳನ್ನು ಹಿಂದಕ್ಕೆ ಪಡೆದು, ಅವುಗಳನ್ನು ಸಂಪೂರ್ಣವಾಗಿ ಖಾಸಗಿಗೆ ಒಪ್ಪಿಸುವ ಮೂಲಕ ತನ್ನ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಲು 2.5 ಲಕ್ಷ ಕೋಟಿ ಸಂಗ್ರಹದ ಗುರಿ ಹೊಂದಿರುವ ಸರ್ಕಾರ ಈಗ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ತನ್ನ ಷೇರುಗಳನ್ನು ಕೂಡ ಮಾರಾಟ ಮಾಡಿ, ಅವುಗಳನ್ನು ಸಹ ಸಂಪೂರ್ಣವಾಗಿ ಖಾಸಗಿ ತೆಕ್ಕೆಗೆ ಒಪ್ಪಿಸಲು ನಿರ್ಧರಿಸಿದೆ.

ಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರಸಂಪೂರ್ಣ ಖಾಸಗೀಕರಣದತ್ತ ಬೆಂಗಳೂರು ವಿಮಾನ ನಿಲ್ದಾಣ: ಷೇರು ಮಾರಾಟಕ್ಕೆ ಮುಂದಾದ ಕೇಂದ್ರ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸರ್ಕಾರದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ರಾಜ್ಯ ಸರ್ಕಾರಗಳು ಶೇ 26ರಷ್ಟು ಷೇರುಗಳನ್ನು ಹೊಂದಿವೆ. ಹೈದರಾಬಾದ್‌ನಲ್ಲಿ ಸಹ ಎಎಐ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಸಹ ಶೇ 26ರಷ್ಟು ಷೇರುಗಳನ್ನು ಹೊಂದಿವೆ.

ಬೆಂಗಳೂರು, ದೆಹಲಿ, ಮುಂಬೈ ಮತ್ತು ಹೈದರಾಬಾದ್‌ ವಿಮಾನ ನಿಲ್ದಾಣಗಳಲ್ಲಿ ಜಂಟಿ ನಿರ್ವಹಣೆಯಲ್ಲಿನ ತನ್ನ ಷೇರು ಮೊತ್ತವನ್ನು ಹಿಂದಕ್ಕೆ ತೆಗೆದುಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ಪಡೆದುಕೊಳ್ಳಲಿದೆ. ಇದಕ್ಕೆ ಶೀಘ್ರದಲ್ಲಿಯೇ ಸಚಿವ ಸಂಪುಟ ಅನುಮೋದನೆ ದೊರಕುವ ಸಾಧ್ಯತೆ ಇದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಸಮೂಹ ಶೇ 74ರಷ್ಟು ಷೇರುಗಳನ್ನು ಹೊಂದಿದ್ದರೆ, ಎಎಐ ಶೇ 26ರಷ್ಟು ಷೇರುಗಳನ್ನು ಹೊಂದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಜಿಎಂಆರ್ ಸಮೂಹ ಶೇ 54ರಷ್ಟು, ಎಎಐ ಶೇ 26 ಹಾಗೂ ಫ್ರಾಪೋರ್ಟ್ ಎಜಿ ಮತ್ತು ಎರಾಮನ್ ಮಲೇಷ್ಯಾ ತಲಾ ಶೇ 10ರಷ್ಟು ಷೇರುಗಳನ್ನು ಹೊಂದಿದೆ.

Recommended Video

ಕೊರೊನಾ ಇಫೆಕ್ಟ್‌, ಖಾಲಿ ಮೈದಾನದಲ್ಲಿ ನಡೆಯಲಿದೆ ಭಾರತ ಇಂಗ್ಲೆಂಡ್‌ ಪಂದ್ಯಾವಳಿ | Oneindia Kannada
 Airport Privatisation: Govt To Sell Stake In Four Airports
English summary
Centre has decided to sell its remaining stake in Bengaluru, Mumbai, Hyderabad and Delhi airports on its airport privatisation target.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X