ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ರಾಜ್ಯಗಳ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಾರುಪತ್ಯ Infographics

|
Google Oneindia Kannada News

ನವದೆಹಲಿ, ನವೆಂಬರ್ 8: ರಾಜಸ್ಥಾನದಲ್ಲಿ ಬಿಜೆಯ ಪಾರುಪತ್ಯವನ್ನು ಕಾಂಗ್ರೆಸ್ ಅಂತ್ಯಗೊಳಿಸಲಿದೆ ಎಂದು ಎಬಿಪಿ ನ್ಯೂಸ್ ಮತ್ತು ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ (ಸಿಎಸ್‌ಡಿಎಸ್) ಜಂಟಿಯಾಗಿ ನಡೆಸಿರುವ ಸಮೀಕ್ಷೆ ತಿಳಿಸಿದೆ.

ಎಬಿಪಿ-ಸಿಎಸ್‌ಡಿಎಸ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯು ಗುರುವಾರ (ನ.8) ಪ್ರಕಟಿಸಲಾಗಿದೆ. ಇದರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದ ಸಮೀಕ್ಷೆಯನ್ನು ಪ್ರಕಟಿಸಲಾಗಿದೆ.

ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ: ರಾಜಸ್ಥಾನದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ

ರಾಜಸ್ಥಾನದಲ್ಲಿ ವಸುಂಧರಾ ರಾಜೆ ಸರ್ಕಾರವನ್ನು ಕಾಂಗ್ರೆಸ್ ಸೋಲಿಸಿ ಅಧಿಕಾರಕ್ಕೆ ಬರಲಿದೆ. ಆದರೆ, ಛತ್ತೀಸ್ ಗಢದಲ್ಲಿ ಬಿಜೆಪಿ ಸತತ ನಾಲ್ಕನೆಯ ಬಾರಿಗೆ ಗೆಲುವು ಕಾಣಲಿದೆ. ಮಧ್ಯ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಮೇಲುಗೈ ಸಾಧಿಸಲಿದೆ.

ಉಭಯ ಸಂಸ್ಥೆಗಳು ಅಕ್ಟೋಬರ್ ಅಂತ್ಯದವರೆಗೂ ಈ ಸಮೀಕ್ಷೆ ನಡೆದಿದ್ದು, 14 ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.

ಛತ್ತೀಸ್‌ ಗಢ

ಛತ್ತೀಸ್‌ ಗಢ

ಛತ್ತೀಸ್ ಗಢದಲ್ಲಿ 90 ಸೀಟುಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ನಿಚ್ಚಳ ಬಹುಮತ ಪಡೆದುಕೊಳ್ಳಲಿದೆ. ಆಡಳಿತಾರೂಢ ಬಿಜೆಪಿ 56 ಸೀಟುಗಳೊಂದಿಗೆ ಮತ್ತೆ ಸರ್ಕಾರ ರಚಿಸಲಿದೆ. ಕಾಂಗ್ರೆಸ್ 25 ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಲಿದೆ. ಇತರೆ ಪಕ್ಷಗಳು ಕೇವಲ ನಾಲ್ಕು ಸೀಟುಗಳನ್ನು ಪಡೆದುಕೊಳ್ಳಲಿವೆ.

ರಾಜಸ್ಥಾನ

ರಾಜಸ್ಥಾನ

200 ಸೀಟುಗಳಿರುವ ರಾಜಸ್ಥಾನದಲ್ಲಿ ಈ ಬಾರಿ ವಸುಂಧರಾ ರಾಜೇ ಅವರ ಸರ್ಕಾರ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ 110 ಸೀಟುಗಳೊಂದಿಗೆ ಸರ್ಕಾರ ರಚನೆಗೆ ಮುಂದಾಗಲಿದೆ. ಬಿಜೆಪಿ 84 ಸ್ಥಾನಗಳನ್ನು ಮಾತ್ರ ಪಡೆದುಕೊಳ್ಳಲಿದೆ.

ರಿಪಬ್ಲಿಕ್ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸೀಟು?ರಿಪಬ್ಲಿಕ್ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾರಿಗೆಷ್ಟು ಸೀಟು?

ಮಧ್ಯಪ್ರದೇಶ

ಮಧ್ಯಪ್ರದೇಶ

230 ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ನಿಕಟ ಪೈಪೋಟಿ ನಡೆಯಲಿದೆ. ಬಿಜೆಪಿ 116 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಕಾಂಗ್ರೆಸ್ 105 ಸ್ಥಾನಗಳನ್ನು ಪಡೆದುಕೊಳ್ಳಲಿದ್ದು, ಉಳಿದ 9 ಸ್ಥಾನಗಳು ಇತರೆ ಪಕ್ಷಗಳ ಪಾಲಾಗಲಿವೆ ಎಂದು ಸಮೀಕ್ಷೆ ವಿವರಿಸಿದೆ.

ಮೋದಿಯೇ ಜನಪ್ರಿಯತೆ ಹೆಚ್ಚು

ಮೋದಿಯೇ ಜನಪ್ರಿಯತೆ ಹೆಚ್ಚು

ಜನಪ್ರಿಯತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರೂ ರಾಜ್ಯಗಳಲ್ಲಿ ಮುಂದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಜನಪ್ರಿಯತೆ ವಿಚಾರದಲ್ಲಿ ಮೋದಿ ಅವರಿಗಿಂತ ಹಿಂದಿದ್ದಾರೆ.

English summary
ABP-CSDS conducted opinion poll survey on assembly elections at Madhya Pradesh, Chhattisgarh and Rajastha. Here is the infographic details of the survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X