ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವ: ಇಲ್ಲಿದೆ ಪ್ರಮುಖ ಮೈಲಿಗಲ್ಲು

|
Google Oneindia Kannada News

ಬೀಜಿಂಗ್‌, ಜು.01: ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾ ಸ್ಥಾಪನೆಯಾಗಿ ಇಂದಿಗೆ 100 ವರ್ಷಗಳು ಸಂದಿದ್ದು, ಇದರ ಭಾಗವಾಗಿ ಜುಲೈ 1, 2021 ರಂದು ಶಾಂಘೈನಲ್ಲಿ ಕಾರ್ಯಕ್ರಮವನ್ನು ನಡೆಸಲಾಗಿದೆ.

ಕಮ್ಯೂನಿಸ್ಟ್ ಪಾರ್ಟಿ ಆಫ್​ ಚೀನಾದ ಈ ಶತಮಾನೋತ್ಸವದ ಸಂಭ್ರಮದಲ್ಲಿ ಟಿಯನನ್ಮೆನ್ ಸ್ಕ್ವೇರ್‌ನಲ್ಲಿ ಗುರುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸುಮಾರು ಒಂದು ಗಂಟೆ ಅವಧಿಯ ಭಾಷಣವನ್ನು ಮಾಡಿಸದ್ದಾರೆ.

ಭಾರತದ ಗಡಿ ಸಮೀಪವಿರುವ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ ಭಾರತದ ಗಡಿ ಸಮೀಪವಿರುವ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ

''ಚೀನಾ ಯಾರ ಬೆದರಿಕೆಗೂ ಭಯಪಡದು. ನಮಗೆ ಹೆಮ್ಮೆ ಹಾಗೂ ಆತ್ಮವಿಶ್ವಾಸವಿದೆ. ಚೀನಾ ದೇಶದ ವೈರಿಗಳು ಉಕ್ಕಿನ ಮಹಾ ಗೋಡೆಯ ಜತೆಗೆ ಹೋರಾಡಬೇಕಾದೀತು. 1.4 ಬಿಲಿಯ ಚೀನೀ ಜನರಿಂದ ಬಲಯುತವಾಗಿರುವ ಉಕ್ಕಿನ ಮಹಾಗೋಡೆ ನಮ್ಮದು,'' ಎಂದು ಹೇಳಿದ್ದಾರೆ. ಈ ಸಮಾರಂಭದಲ್ಲಿ ಕಮ್ಯುನಿಸ್ಟ್ ಪಕ್ಷದ ಈಗಿನ ಹಾಗೂ ಮಾಜಿ ನಾಯಕರೂ ಉಪಸ್ಥಿತರಿದ್ದರು.

100 years of the Chinese communist party: Milestone

ಚೈನೀಸ್‌ ಕಮ್ಯೂನಿಸ್ಟ್‌ ಪಕ್ಷ (ಸಿಸಿಪಿ) ಸ್ಥಾಪನೆ

ಚೈನೀಸ್‌ ಕಮ್ಯೂನಿಸ್ಟ್‌ ಪಕ್ಷ (ಸಿಸಿಪಿ) ಸ್ಥಾಪನೆ ಹಾಗೂ ಪ್ರಮುಖ ಮೈಲಿಗಲ್ಲುಗಳು

1921: ಸೋವಿಯತ್ ಒಕ್ಕೂಟದಲ್ಲಿ ಲೆನಿನ್​ನ ಸಮಾಜಕ್ರಾಂತಿಯ ಬಳಿಕ 1917 ರಲ್ಲಿ ಮಾರ್ಕ್ಸ್​ವಾದ ಚೀನಾದಲ್ಲಿ ಅಭೂತಪೂರ್ವ ಪ್ರಭಾವ ಬೀರಿತು. ಆ ಸಂದರ್ಭದಲ್ಲಿ ಚೀನಾದ ಕಾರ್ಮಿಕ ವರ್ಗ ಸ್ವತಂತ್ರವಾಯಿತು. ಮಾರ್ಕ್ಸ್​ವಾದವನ್ನು ನಂಬಿದ್ದ ಚೆನ್​ ಡುಕ್ಸಿ, ಲಿ ಡಿಜಾವೊ ಕಾರ್ಲ್​ಮಾರ್ಕ್ಸ್ ಚಿಂತನೆಗಳನ್ನು ಪ್ರಚಾರ ಮಾಡಲು ಕಾರ್ಮಿಕ ಚಳುವಳಿ ಆರಂಭಿಸಿದರು. ಬಳಿಕ ಜುಲೈ ತಿಂಗಳಲ್ಲಿ ಚೈನೀಸ್‌ ಕಮ್ಯೂನಿಸ್ಟ್‌ ಪಾರ್ಟಿ ಸ್ಥಾಪನೆಯಾಯಿತು. ಶಾಂಘೈನಲ್ಲಿ ಮಾರ್ಕ್ಸ್​ವಾದದ ಅನುಯಾಯಿಗಳಾದ ಹದಿಮೂರು ಜನರು ಈ ಪಕ್ಷವನ್ನು ಸ್ಥಾಪಿಸಿದರು. ಚೆನ್​ ಡುಕ್ಸಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1934: ಆಗಾಗಲೇ ಕೆಂಪು ಸೇನೆ ಮತ್ತು ರಾಷ್ಟ್ರೀಯವಾದಿ ಪಕ್ಷದ ನಡುವಿನ ಹೋರಾಟವು 18 ವರ್ಷಗಳ ಸುದೀರ್ಘ ಹೋರಾಟವಾಗಿ ಬದಲಾಗಿತ್ತು. ಕೆಎಂಟಿ ಪಡೆಗಳ ಮೆರವಣಿಗೆ (ಲಾಂಗ್‌ ಮಾರ್ಚ್) ನಡೆಯಿತು. ಮಾವೋ ತನ್ನ 86,000 ಅನುಯಾಯಿಗಳನ್ನು ವಾಯವ್ಯ ಚೀನಾಕ್ಕೆ ಪ್ರಯಾಣ ಬೆಳೆಸಿದರು. ಮಹತ್ವದ 10 ಸಾವಿರ ಕಿ.ಮೀ. ರ್‍ಯಾಲಿಯಲ್ಲಿ 1 ಲಕ್ಷ ಮಂದಿ ಭಾಗಿ

3ನೇ ಮಹಾಯುದ್ಧಕ್ಕೆ ಸಿದ್ಧವಾಯ್ತಾ ಅಮೆರಿಕ? ಸಮುದ್ರದಲ್ಲಿ ಭೀಕರ ಬಾಂಬ್ ಪರೀಕ್ಷೆ!3ನೇ ಮಹಾಯುದ್ಧಕ್ಕೆ ಸಿದ್ಧವಾಯ್ತಾ ಅಮೆರಿಕ? ಸಮುದ್ರದಲ್ಲಿ ಭೀಕರ ಬಾಂಬ್ ಪರೀಕ್ಷೆ!

1949: 1931 ರಲ್ಲಿ ಕೆಂಪು ಸೇನೆ ಮತ್ತು ರಾಷ್ಟ್ರೀಯವಾದಿ ಪಕ್ಷದ ನಡುವೆ ನಡೆದ ಅಂತರ್​ಯುದ್ಧ ಹಿಂಸಾತ್ಮಕ ಅಂತ್ಯದ ಬಳಿಕ, ಕಮ್ಯುನಿಸ್ಟ್ ಪಕ್ಷವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಘೋಷಣೆಯಾಗಿದೆ. ಎರಡು ತಿಂಗಳ ನಂತರ, ಎರಡು ಮಿಲಿಯನ್ ಸೈನಿಕರು ಕುಮಿಂಟಾಂಗ್ (ಕೆಎಂಟಿ) ರಾಷ್ಟ್ರೀಯವಾದಿ ಪಕ್ಷದ ನಾಯಕ ಚಿಯಾಂಗ್ ಕೈ-ಶೇಕ್‌ನನ್ನು ತೈವಾನ್‌ಗೆ ಗಡಿಪಾರು ಮಾಡಿದರು. ಅಲ್ಲಿ ಚೀನಾದ ಕಾನೂನುಬದ್ಧ ಆಡಳಿತ ಮಂಡಳಿ ಎಂದು ಹೇಳಿ ತಾತ್ಕಾಲಿಕ ಸರ್ಕಾರ ಸ್ಥಾಪಿಸಿದರು. ಮಾವೋತ್ಸೆ ತುಂಗ್‌ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸ್ಥಾಪನೆ ಮಾಡಿ, ರಾಷ್ಟ್ರದ ಮುಖ್ಯಸ್ಥರಾದರು.

1958: ಚೀನಾದ ಕೃಷಿ ನೆಲೆಯನ್ನು ಕೈಗಾರಿಕಾ ನೆಲೆಯನ್ನಾಗಿ ಪರಿವರ್ತಿಸಲು ಅಧ್ಯಕ್ಷ ಮಾವೊ ಅಭಿಯಾನವೊಂದು ಪ್ರೇರಣೆ ನೀಡಿತು. ದಿ ಗ್ರೇಟ್ ಲೀಪ್ ಫಾರ್ವರ್ಡ್ ಯೋಜನೆಯಡಿ (ಪಂಚವಾರ್ಷಿಕ ಯೋಜನೆ) ರೈತರನ್ನು ಸಂಘಟಿಸಲಾಯಿತು. ಆದರೆ ಈ ಯೋಜನೆ ಸಂಪೂರ್ಣ ವಿಫಲವಾಯಿತು. ಬರಗಾಲ ಹಾಗೂ ಸುಮಾರು 56 ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ 30 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು.

100 years of the Chinese communist party: Milestone

1966: ದೇಶದಲ್ಲಿ 1966 ರಿಂದ 1976 ರವರೆಗೆ ನಡೆದ ಚಳುವಳಿಯೇ ಸಾಂಸ್ಕೃತಿಕ ಕ್ರಾಂತಿಯಾಗಿದೆ.

1979: 1976ರಲ್ಲಿ ಮಾವೋತ್ಸೆ ತುಂಗ್​ ನಿಧನರಾಗಿದ್ದು ಬಳಿಕ 1977 ರಲ್ಲಿ ಡೆಂಗ್ ಕ್ಸಿಯಾಪಿಂಗ್ ನಾಯಕನಾಗಿ ಆಯ್ಕೆ ಆದರು. 1979ರಲ್ಲಿ ಸುಧಾರಣಾ ನೀತಿ ಜಾರಿಗೆ ತರಲಾಯಿತು.

1989: ತಿಯಾನ್ಮೆನ್ ಚೌಕ್​ ( ಸ್ಕ್ವೇರ್) ಹತ್ಯಾಕಾಂಡ ಈ ವರ್ಷ ನಡೆಯಿತು. ನೂರಾರು ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ಮಿಲಿಟರಿ ಪಡೆ ಹತ್ಯೆ ಮಾಡಿತು. ಬಳಿಕ 1993 ಜಿಯಾಂಗ್ ಜೆಮಿನ್ ಅಧ್ಯಕ್ಷರಾದರು.

2001: ಚೀನಾ ವಿಶ್ವ ವ್ಯಾಪಾರ ಸಂಸ್ಥೆಗೆ ಸೇರಿತು. ವಿದೇಶಿ ವ್ಯಾಪಾರ ಆಗ 475 ಬಿಲಿಯನ್‌ಗೆ ಡಾಲರ್‌ಗೆ ಏರಿಕೆಯಾಯಿತು.

2008: ಹೂ ಜಿಂಟಾವೊ 2003 ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷರಾದರು. ಬಳಿಕ 2008 ರಲ್ಲಿ ಯಶಸ್ವಿ ಒಲಿಂಪಿಕ್ ಕ್ರೀಡಾಕೂಟವು ವಿಶ್ವ ಸೂಪರ್ ಪವರ್ ಆಗಿ ಚೀನಾದ ಸ್ಥಾನವನ್ನು ಎತ್ತರಕ್ಕೆ ಏರಿಸಿತು.

2012: ಪ್ರಸ್ತುತ ಚೀನಾದ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್ ಕಮ್ಯುನಿಸ್ಟ್ ಪಕ್ಷದ ನಾಯಕ ಮತ್ತು ಅಧ್ಯಕ್ಷರಾಗಿ 2012 ರಲ್ಲಿ ಅಧಿಕಾರ ಸ್ವೀಕರಿಸಿದರು.

2021: ಚೈನೀಸ್‌ ಕಮ್ಯೂನಿಸ್ಟ್‌ ಪಕ್ಷದ ಶತಮಾನೋತ್ಸವದ ಅಂಗವಾಗಿ ಚೀನಾದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಸಲಾಗುತ್ತಿದೆ.

(ಒನ್‌ಇಂಡಿಯಾ ಸುದ್ದಿ)

English summary
100 years of the Chinese communist party: Milestone, to know more read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X