ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರು 'ಫೋಟೋ' ತೆಗಿಸಿಕೊಳ್ಳುವಂತಿಲ್ಲ!

By Mahesh
|
Google Oneindia Kannada News

ನವದೆಹಲಿ, ಸೆ.11: ಮುಸ್ಲಿಮರು ಛಾಯಾಚಿತ್ರ(ಫೋಟೋ) ತೆಗೆಸಿಕೊಳ್ಳುವಂತಿಲ್ಲ. ಫೋಟೊ ತೆಗೆಸಿಕೊಳ್ಳುವುದು ಕಾನೂನು ಬಾಹಿರ. ಇಸ್ಲಾಂ ಧರ್ಮದಲ್ಲಿ ಇದು ನಿಷಿದ್ಧ ಹಾಗೂ ಪಾಪ ಕಾರ್ಯ ಎಂದು ಫೋಟೋಗ್ರಾಫಿ ವಿರುದ್ಧ ಫತ್ವಾ ಹೊರಡಿಸಲಾಗಿದೆ.

ದೆಹಲಿಯ ದಾರುಲ್ ಉಲೂಮ್ ಇದೀಗ ಫತ್ವಾ ಹೊರಡಿಸಿದೆ. ಸೌದಿ ಅರೇಬಿಯಾದಲ್ಲಿ ಪವಿತ್ರ ಮೆಕ್ಕಾ ಕ್ಷೇತ್ರದಲ್ಲಿ ಛಾಯಾಚಿತ್ರ (ವಿಡಿಯೋ) ತೆಗೆಯಲು ಹಾಗೂ ಸಾಮೂಹಿಕ ಪ್ರಾರ್ಥನೆ (ನಮಾಜ್) ಮಾಡುವುದನ್ನು ಚಿತ್ರೀಕರಿಸಲು ಸಂಪೂರ್ಣ ಅವಕಾಶ ನೀಡಿದೆ.

ಅದರೆ. ದೆಹಲಿಯ ದಾರುಲ್ ಉಲೂಮ್, ಗುರುತಿನ ಚೀಟಿ, ಪಾಸ್ ಪೋರ್ಟ್ ಗಾಗಿ ತೆಗೆಸುವ ಕೆಲ ಸಂದರ್ಭಗಳ ಫೋಟೋ ಹೊರತುಪಡಿಸಿದರೆ, ಉಳಿದಂತೆ ಮುಸ್ಲಿಮರು ಫೋಟೋ ತೆಗೆಸಿಕೊಳ್ಳುವುದು ಅಪರಾಧ ಎಂಬ ಫತ್ವಾವನ್ನು ಹೊರಡಿಸಿದೆ.

ಮದುವೆ ಕಾರ್ಯಗಳ ವಿಡಿಯೋ ಚಿತ್ರೀಕರಣ, ಮುಂದಿನ ಪೀಳಿಗೆ ನೋಡಲಿ ಎಂಬ ಕಾರಣಕ್ಕಾಗಿ ಛಾಯಾಚಿತ್ರ ತೆಗೆಸಿಕೊಳ್ಳುವುದು ಧರ್ಮಬಾಹಿರ ಎಂದು ಹೇಳಿರುವ ದಾರುಲ್ ಉಲೂಮ್ ಸದಸ್ಯ ಮುಫ್ತಿ ಅಬ್ದುಲ್ ಇರ್ಫಾನ್ ಖಾದ್ರಿ ರಜಾಕಿ ಹಾಗೂ ಮುಫ್ತಿ ಅಬ್ದುಲ್ ಖಾಸಿಂ ನೊಮಾನಿ ಮೊಹತ್ ಮೀಮ್, ಸೌದಿ ಅರೇಬಿಯಾದಲ್ಲಿ ಅವರು ಮಾಡಿಕೊಳ್ಳಲಿ, ಆದರೆ ನಾನಂತೂ ಅದನ್ನು ನಿಷೇಧಿಸುತ್ತೇನೆ ಎಂದು ಹೇಳಿದ್ದಾರೆ.

Photography is unlawful and sin: Darul Uloom Deoband

ಇತ್ತೀಚೆಗೆ ಇಂಜಿನಿಯರಿಂಗ್ ಪದವೀಧರ ಮುಸ್ಲಿಂ ಯುವಕನೊಬ್ಬ ನನಗೆ ಫೋಟೋಗ್ರಾಫಿಯಲ್ಲಿ ಹೆಚ್ಚಿನ ಆಸಕ್ತಿಯಿದೆ ನಾನು ವೃತ್ತಿಯಾಗಿ ಅದನ್ನು ಸ್ವೀಕರಿಸಲು ಸಾಧ್ಯವೇ ಎಂದು ದರೂಲ್ ಉಲೂಮ್ ನ ಸದಸ್ಯರ ಮುಂದೆ ಪ್ರಶ್ನೆ ಇಟ್ಟಾಗ ನೊಮಾನಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇಸ್ಲಾಮ್ ನ ಹದಿತ್ ಇದನ್ನು ಎಂದಿಗೂ ಒಪ್ಪುವುದಿಲ್ಲ. ನೀನು ಈ ಕೋರ್ಸ್ ಮಾಡುವಂದಿಲ್ಲ. ಬೇರೆ ಉದ್ಯೋಗ, ಇಂಜಿನಿಯರಿಂಗ್ ವಿಷಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಫತ್ವಾದ ಜತೆಗೆ ಹೇಳಲಾಗಿದೆ.ಈ ಕುರಿತ ಪ್ರಕಟಣೆಯನ್ನು ಶಾಲೆಗಳಲ್ಲೂ ಪ್ರಕಟಿಸಲಾಗಿದೆ.

ನೊಮಾನಿ ಹೊರಡಿಸಿರುವ ಫತ್ವಾಗೆ ಅಖಿಲ ಭಾರತ ಮುಸ್ಲಿಮ್ ಕಾನೂನು ವೈಯಕ್ತಿಕ ಬೋರ್ಡ್ ಸದಸ್ಯ ಮುಫ್ತಿ ಅಬ್ದುಲ್ ಇರ್ಫಾನ್ ಖಾದ್ರಿ ರಜಾಕಿ ಕೂಡಾ ಒಮ್ಮತ ವ್ಯಕ್ತಪಡಿಸಿದ್ದಾರೆ.

ಇಸ್ಲಾಂ ಧರ್ಮದಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳ ಚಿತ್ರ ತೆಗೆಯಲು ಕೂಡಾ ಅವಕಾಶವಿಲ್ಲ. ನಿಯಮ ಮೀರಿ ನಡೆದುಕೊಂಡವರು ದೇವರಿಗೆ ಉತ್ತರ ಹೇಳಬೇಕಾಗುತ್ತದೆ ಎಂದು ರಜಾಕಿ ಹೇಳಿದ್ದಾರೆ.

ಈ ಸುದ್ದಿ ವರದಿ ಮಾಡಲು ಹೊರಟ ವಿಡಿಯೋ ಪತ್ರಕರ್ತರು ಈಗ ನೀವು ಕೆಮೆರಾ ಎದುರಿಸಿ ಮಾತನಾಡುತ್ತಿದ್ದೀರಲ್ಲ ಇದು ತಪ್ಪಾಗುವುದಿಲ್ಲವೇ ಎಂದು ಪ್ರಶ್ನಿಸಿದಾಗ, ಹೌದು ಇದು ಕೂಡಾ ತಪ್ಪು ನೀವು ಕೂಡಾ ಅಲ್ಲಾಹ್ ನಲ್ಲಿ ಕ್ಷಮೆ ಬೇಡಬೇಕು. ನಿರ್ಬಂಧಿತ ಕಾರ್ಯಕ್ಕೆ ಪ್ರೇರೇಪಿಸುವ ಕೆಲಸದಿಂದ ಮುಕ್ತಿ ನೀಡು ಎನ್ನಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇಸ್ಲಾಂ ಧರ್ಮ ಬೋಧನೆ ಮಾಡುವ ಪೀಸ್ ಟಿವಿ, ಕ್ಯೂ ಟಿವಿ, ಎಆರ್ ವೈ ಮುಂತಾದ ಚಾನೆಲ್ ಗಳು ಲೈವ್ ನಮಾಜ್, ಹಜ್ ಯಾತ್ರೆ ದೃಶ್ಯಗಳನ್ನು ಪ್ರಸಾರ ಮಾಡುತ್ತದೆ. ಇದೆಲ್ಲ ತಪ್ಪು ಎಂದರೆ ಹೇಗೆ ಎಂದು ಶಿಯಾ ಸಮಿತಿಯ ಮುಫ್ತಿ ಸೈಫ್ ಅಬ್ಬಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಸುನ್ನಿ ಪಂಗಡದವರಿಗೆ ಫೋಟೊಗ್ರಾಫಿ ತಪ್ಪಲ್ಲ ಎಂದು ತಿಳಿ ಹೇಳಬೇಕಿದೆ ಎಂದು ಹೇಳಿದ್ದಾರೆ.(ಪಿಟಿಐ)

English summary
India's leading Islamic seminary Darul Uloom has issued a fatwa, saying "photography is unlawful and a sin", even though Saudi Arabia allows photographers inside the holy city of Mecca and live telecast of 'namaz' is beamed on Islamic channels across the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X