ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಟ್ಕಳನೇ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ರುವಾರಿ

By Mahesh
|
Google Oneindia Kannada News

ಬೆಂಗಳೂರು, ಸೆ.11: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 2010ರಲ್ಲಿ ನಡೆದ ಸ್ಫೋಟಗಳ ಹಿಂದಿನ ರುವಾರಿ ನಾನೇ ಎಂದು ಬಂಧಿತ ಉಗ್ರ ಯಾಸಿನ್ ಭಟ್ಕಳ ತಪ್ಪೊಪ್ಪಿಗೆ ನೀಡಿದ್ದಾನೆ. ಕಳೆದ 10 ದಿನಗಳಿಂದ ಯಾಸಿನ್ ಭಟ್ಕಳನ ವಿಚಾರಣೆ ತೀವ್ರಗೊಳಿಸಲಾಗಿದ್ದು, ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿದೆ.

ಏಪ್ರಿಲ್ 17, 2010ರಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಬಾಂಬ್ ಸ್ಫೋಟಗಳನ್ನು ಯಶಸ್ವಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದಾಗಿ ಯಾಸಿನ್ ಹೇಳಿಕೆ ನೀಡಿದ್ದಾನೆ. ಕಳೆದ ಆಗಸ್ಟ್ 28 ರಂದು ಬಂಧಿತನಾದ ಯಾಸೀನ್ ವಿಚಾರಣೆ ಸದ್ಯಕ್ಕೆ ಜಾರಿಯಲ್ಲಿದ್ದು, ದೇಶದ ಅನೇಕ ವಿಧ್ವಂಸಕ ಕೃತ್ಯಗಳ ಹಿಂದೆ ಇವನ ಕೈವಾಡ ಇರುವುದು ಸಾಬೀತಾಗಿದೆ.

ಜರ್ಮನ್ ಬೇಕರಿ ಸ್ಫೋಟ (ಫೆಬ್ರವರಿ 13, 2010) ಹಾಗೂ ಮುಂಬೈ ಸ್ಫೋಟ (ಜುಲೈ 13, 2011) ಸಂಚು ರೂಪಿಸಿದ್ದು ಕೂಡಾ ಯಾಸಿನ್ ಎಂದು ತಿಳಿದು ಬಂದಿದೆ.

2011ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾಜ್ ಭಟ್ಕಳ, ಇಕ್ಬಾಲ್ ಭಟ್ಕಳ ಹಾಗೂ ಮೋಹ್ಸಿನ್ ಚೌಧರಿ ಮುಂತಾದ ಇಂಡಿಯನ್ ಮುಜಾಹಿದ್ದೀನ್ ಮುಖಂಡರ ಮೇಲೆ ಶಂಕೆ ವ್ಯಕ್ತವಾಗಿತ್ತು. ಈಗ ಯಾಸೀನ್ ಹೇಳಿಕೆ ನಂತರ ಪ್ರಕರಣದ ತನಿಖೆ ಸರಿ ದಾರಿಯಲ್ಲಿ ಸಾಗಿದೆ ಎಂಬುದು ಸ್ಪಷ್ಟವಾಗಿದೆ.

Yasin Bhatkal played key role Chinnaswamy stadium blasts during IPL

ಸ್ಫೋಟಕಗಳ ಬಗ್ಗೆ ಮಾಹಿತಿ ಇಲ್ಲ. ಎಲ್ಲಿಂದ ಪೂರೈಕೆಯಾಗುತ್ತದೆ. ಯಾರು ಕಳಿಸುತ್ತಾರೆ ಎಂಬುದು ನಮಗೂ ತಿಳಿದಿರುವುದಿಲ್ಲ. ನಾವು ಆನ್ ಲೈನ್ ಚಾಟ್ ಮೂಲಕ ವಿಷಯ ವಿನಿಯಮ ಮಾಡಿಕೊಳ್ಳುತ್ತೇವೆ ಎಂದು ಯಾಸಿನ್ ಹೇಳಿದ್ದಾನೆ.

ಭಾರತ-ನೇಪಾಳದ ಗಡಿಭಾಗದ ಗೋರಕ್ ಪುರದಲ್ಲಿ ಬಂಧಿತನಾದ ಯಾಸಿನ್ ಭಟ್ಕಳ ನಿಂದ ಇನ್ನಷ್ಟು ಮಾಹಿತಿಗಳು ಹೊರ ಬೀಳುವ ಸಾಧ್ಯತೆಗಳಿವೆ.

ಮಂಗಳೂರಿನಲ್ಲಿ ಉಗ್ರರ ಅಡಗುತಾಣ: ಹೈದರಾಬಾದ್ ಸ್ಫೋಟಕ್ಕೆ ಮುನ್ನ ಉಗ್ರರು ಮಂಗಳೂರಿನ ಅಡಗುತಾಣಗಳಲ್ಲಿ ಕಾಲ ಕಳೆದಿದ್ದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಗೆ ಮಾಹಿತಿ ಸಿಕ್ಕಿದೆ.

ಇಂಡಿಯನ್ ಮುಜಾಹಿದೀನ್ ಸಹಸ್ಥಾಪಕ ಯಾಸಿನ್ ಭಟ್ಕಳನ ಸಹಚರ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ. ತನಿಖೆಯ ವೇಳೆ ತಮ್ಮ ಅಡಗುದಾಣಗಳ ಬಗ್ಗೆ ವಿವರ ನೀಡಿರುವ ಅಸಾದುಲ್ಲಾ, ಆ ಪ್ರದೇಶಗಳನ್ನು ಎನ್ಐಎ ಅಧಿಕಾರಿಗಳಿಗೆ ತೋರಿಸಿದ್ದಾನೆ.

ಮಂಗಳೂರು ಹಾಗೂ ಹೈದರಾಬಾದ್ನಲ್ಲಿದ್ದ ಉಗ್ರರ ಅಡಗುತಾಣಗಳನ್ನು ತನಿಖಾ ಅಧಿಕಾರಿಗಳಿಗೆ ತೋರಿಸಿಕೊಟ್ಟಿದ್ದಾನೆ ಅಸಾದುಲ್ಲಾ. ಜತೆಗೆ ಮಂಗಳೂರಿನಲ್ಲಿನ ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್ಫರ್ ಶಾಖೆಯೊಂದನ್ನೂ ತೋರಿಸಿದ್ದಾನೆ. ಹೈದರಾಬಾದ್ ಸ್ಫೋಟಕ್ಕೂ ಮೊದಲು ಇದೇ ಶಾಖೆಗೆ ಪಾಕಿಸ್ತಾನದಿಂದ ಹಣ ಬರುತ್ತಿತ್ತು. ಅದನ್ನು ನಾವು ಪಡೆದುಕೊಳ್ಳುತ್ತಿದ್ದೆವು. ನಾನು, ಭಟ್ಕಳ್, ವಖಾಸ್ ಹಾಗೂ ತಹ್ಸೀನ್ ಅಖ್ತರ್ ಇಲ್ಲೇ ವಾಸಿಸುತ್ತಿದ್ದೆವು ಎಂದಿದ್ದಾನೆ.

ಭಟ್ಕಳನ ಲ್ಯಾಪ್ ಟಾಪ್ 3 ಸಾವಿರ ಇಮೇಲ್ ಗಳು ದೊರೆತಿದ್ದು, ಅವೆಲ್ಲವೂ ರಹಸ್ಯ ಭಾಷೆಯಲ್ಲಿವೆ.ಜತೆಗೆ ಚಾಟ್ ಹಿಸ್ಟರಿ ಕೂಡಾ ಶೋಧಿಸಬೇಕಿದೆ. ಇವುಗಳನ್ನು ವಿವಿಧ ಸ್ಫೋಟಗಳ ಬಗ್ಗೆ ಪಾಕಿನಲ್ಲಿದ್ದ ಉಗ್ರರಿಗೆ ಮಾಹಿತಿ ನೀಡಲು ಕಳುಹಿಸಿರಬಹುದು ಎಂದು ಅಂದಾಜಿಸಲಾಗಿದೆ.

English summary
During his interrogation by multiple agencies over the last 10 days, Indian Mujahideen (IM) operative Yasin Bhatkal, has admitted to have played a central role in the April 17, 2010, blasts at the Chinnaswamy Stadium in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X