• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಗಿರಿಜಾ ಮೀಸೆ ಬಿಟ್ಟವನೇ ಕಿಂಗ್

By Mahesh
|

ಬೆಂಗಳೂರು, ಸೆ.10 : ಚಾಪ್ಲಿನ್ ಮೀಸೆ, ಗಿರಿಜಾ ಮೀಸೆ, ಚಿಗುರು ಮೀಸೆ, ಕಡ್ದಿ ಮೀಸೆ, ಹುರಿಮೀಸೆ, ಕುರಿಮೀಸೆ, ಬೆಕ್ಕಿನ ಮೀಸೆ, ಜಿರಲೆ ಮೀಸೆ, ವಿರಜಾ ಮೀಸೆ, ಕಡ್ಡಿ ಮೀಸೆ, ಬಂಗಾರು ಮೀಸೆ, ಮೊಟ್ಟೆ ಮೀಸೆ, ಪೊದೆಮೀಸೆ, ಫಿಲ್ಟರ್ ಮೀಸೆ ಲೆಕ್ಕ ಹಾಕುತ್ತಾ ಹೋದಲ್ಲಿ ದೊಡ್ಡ ಪಟ್ಟಿಯೇ ಸಿಗುತ್ತದೆ. ಇತ್ತೀಚೆಗೆ ಅಮೆರಿಕ್ದ ನ್ಯೂ ಓರಿಯನ್ಸ್ ನಲ್ಲಿ ಈ ರೀತಿ ವಿಶಿಷ್ಟ ಮೀಸೆ ಇದ್ದವರಿಗೆ ರಾಜಾತಿಥ್ಯ ಸಿಕ್ಕಿತ್ತು.

ಜಸ್ಟ್ ಫಾರ್ ಮೆನ್ ರಾಷ್ಟ್ರೀಯ ಗಡ್ಡ ಹಾಗೂ ಮೀಸೆ ಸ್ಪರ್ಧೆಗೆ ಸುಮಾರು 18 ದೇಶಗಳಿಂದ ಸ್ಪರ್ಧಿಗಳು ಬಂದಿದ್ದರು. ವಿವಿಧ ವಿಭಾಗಗಳಲ್ಲಿ ನಡೆದ ಈ ಮೀಸೆ ಸ್ಪರ್ಧೆಯ ಒಂದು ಚಿತ್ರ ಇಲ್ಲಿದೆ ನೋಡಿ.. ಅಂದ ಹಾಗೆ ಮೀಸೆ ಪುರಾಣ ಓದುವ ಆಸೆಯಾದರೆ ಇಲ್ಲಿ ನಿಮ್ಮ ಓದು ಮುಂದುವರೆಸಿ..

ಉಳಿದಂತೆ ಚಿತ್ರಗಳಲ್ಲಿ ಇಂದಿನ ಸುದ್ದಿಯಲ್ಲಿ ನೇಪಾಳಿಗಳು ಋಷಿ ಪಂಚಮಿ ಆಚರಣೆಯ ಅಂಗವಾಗಿ ಭಾಗ್ಮತಿ ನದಿಯಲ್ಲಿ ಸಾಂಪ್ರಾದಾಯಿಕ ಪುಣ್ಯಸ್ನಾನ ಕೈಗೊಂಡ ಚಿತ್ರ ಇಲ್ಲಿದೆ.

ಸಂಗೀತಗಾರ ಜುಬೆನ್ ಮೆಹ್ತಾ ಹಾಗೂ ಜಪಾನ್-ಅಮೆರಿಕ ಪಿಟೀಲುವಾದಕರ ಆರ್ಕ್ರೆಸ್ಟ್ರಾದ ಚಿತ್ರ, ಬೆಂಗಳೂರಿನ ಗಣೇಶ ಹಬ್ಬ, ಉತ್ತರ ಪ್ರದೇಶದ ಸದ್ಯದ ಚಿತ್ರಣ, ಬಾಲಿವುಡ್ ನಟರ ಮನೆ ಹೊಕ್ಕ ಗಣೇಶ, ಓಣಂಗೆ ಸಜ್ಜಾದ ಕೊಯಮತ್ತೂರು, ರಾಮ್ ವಿಲಾಸ್ ಪಾಸ್ವಾನ್ ಹಾಗೂ ಅವರ ಪುತ್ರ ಕಂಡಿದ್ದೆಲ್ಲಿ? ಅಮೆರಿಕ ಓಪನ್ ಅಮೆರಿಕ ಓಪನ್ ಟೆನಿಸ್ ಟೂರ್ನಿ ಚಿತ್ರಗಳಲ್ಲಿ ಡಬಲ್ಸ್ ವಿಭಾಗದ ಫೈನಲ್ ಗೆದ್ದ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್, ಮತ್ತೊಮ್ಮೆ ವಿಜೃಂಭಿಸಿದ ಸೆರೆನಾ ವಿಲಿಯಮ್ಸ್ ಚಿತ್ರಗಳಿವೆ.

ಮೀಸೆ ಮಾಮನ ಜತೆ

ಮೀಸೆ ಮಾಮನ ಜತೆ

ಪ್ರವಾಸಿಗರಾದ ಎಲೈನ್ ಒಲಿವೆರಾ, ಜುಲೈಕಾ ರಿವೆರಾನ್ ಹಾಗೂ ಡ್ಯಾನಿಲೆ ಆಲ್ಫಾನೊ ಅವರು ಸ್ಪರ್ಧಿಗಳಾದ ದಕ್ಷಿಣ ಕರೋಲಿನಾದ ಪಾಲ್ ರೂಫ್, ನ್ಯೂ ಓರ್ಲಿಯಾನ್ಸ್ ನ ಡೆರಿಕ್ ನೆಹ್ರಾಬ್ರಾಸ್ ಜತೆಯಲ್ಲಿ

ಕಠ್ಮಂಡುವಿನಿಂದ

ಕಠ್ಮಂಡುವಿನಿಂದ

ಋಷಿ ಪಂಚಮಿ ಆಚರಿಸಿದ ನೇಪಾಳದ ಹಿಂದೂ ಭಕ್ತೆಯರು ಅಘಾದ ಗಿಡದ ಎಳೆಗಳನ್ನು ತೆಗೆದುಕೊಂಡು ಭಾಗ್ಮತಿ ನದಿಯಲ್ಲಿ ಮಂಗಳವಾರ(ಸೆ.10) ಪುಣ್ಯ ಸ್ನಾನ ಕೈಗೊಂಡಿದ್ದಾರೆ.

ಮುಂಬೈನಿಂದ

ಮುಂಬೈನಿಂದ

ಜಪಾನ್ ಹಾಗೂ ಅಮೆರಿಕದ ಪಿಟೀಲು ವಾದಕರಾದ ಮಿಡೊರಿ ಗೊಟೋ ಹಾಗೂ ತಂಡದ ಜತೆ ಜುಬಿನ್ ಮೆಹ್ತಾ ಅವರು ಮಂಗಳವಾರ ರಿಹರ್ಸಲ್ ನಡೆಸಿದ್ದು ಹೀಗೆ PTI Photo by Shirish Shete

ಬೆಂಗಳೂರು ಗಣೇಶ

ಬೆಂಗಳೂರು ಗಣೇಶ

ಬೆಂಗಳೂರಿನ ಹಲಸೂರು ಕೆರೆ ಬಳಿ ಮುಂಚಿತವಾಗಿ ಹೋದವರೆ ಜಾಣರು. ಕಳೆದ ರಾತ್ರಿ ಗಂಟೆಗಟ್ಟಲೆ ಕಾದ ಭಕ್ತರು ಗಣೇಶನನ್ನು ಬೀಳ್ಕೊಡಲು ಆಗದೆ ಕಷ್ಟಪಟ್ಟಿದ್ದಾರೆ. ಕೆಲವರು ರಸ್ತೆ ಬದಿ ಗಣೇಶ ಮೂರ್ತಿಗಳನ್ನು ಅನಾಥವಾಗಿ ಬಿಟ್ಟು ತೆರಳಿದ್ದಾರೆ. ಎಡಬಿಡದೆ ಸುರಿದ ಮಳೆ ಗಣೇಶ ಚತುರ್ಥಿ ಹಬ್ಬ ವಿಶೇಷವಾಗಿತ್ತು. PTI Photo by Shailendra Bhojak

ಜಂಪಿಂಗ್ ಸೆರೆನಾ

ಜಂಪಿಂಗ್ ಸೆರೆನಾ

ಬೆಲಾರಸ್ ನ ವಿಕ್ಟೋರಿಯಾ ಅಜರೆಂಕಾ ಅವರನ್ನು ಯುಎಸ್ ಓಪನ್ ಫೈನಲ್ಸ್ ನಲ್ಲಿ ಸೋಲಿಸಿದ ನಂತರ ಅಮೆರಿಕದ ಸೆರೆನಾ ವಿಲಿಯಮ್ಸ್ ಖುಷಿಯಿಂದ ಹಾರಿದ್ದು ಹೀಗೆ

 ಪೇಸ್ ಹಾಗೂ ಸ್ಟೆಪನೆಕ್

ಪೇಸ್ ಹಾಗೂ ಸ್ಟೆಪನೆಕ್

ಅಮೆರಿಕ ಓಪನ್ ಟೆನಿಸ್ ಟೂರ್ನಿ ಫೈನಲ್ ಗೆದ್ದ ಭಾರತದ ಲಿಯಾಂಡರ್ ಪೇಸ್ ಹಾಗೂ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್

ಚರಕ ಹಿಡಿದ ಅಪ್ಪ ಮಗ

ಚರಕ ಹಿಡಿದ ಅಪ್ಪ ಮಗ

ಅಹಮದಾಬಾದ್ : ಲೋಕಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಹಾಗೂ ಅವರ ಮಗ ಸಿರಾಗ್ ಪಾಸ್ವಾನ್ ಅವರು ಸಬರಮತಿ ಗಾಂಧಿ ಆಶ್ರಮದಲ್ಲಿ ಚರಕ ಹಿಡಿದು ನೂಲುತ್ತಿದ್ದ ದೃಶ್ಯ

ಕೊಯಮತ್ತೂರಿನಿಂದ

ಕೊಯಮತ್ತೂರಿನಿಂದ

ಅಲಂಕೃತಗೊಂಡ ಆನೆಗಳೊಂದಿಗೆ ಓಣಂ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದೆ.

ಗಣೇಶ ಹಬ್ಬ

ಗಣೇಶ ಹಬ್ಬ

ಬಾಲಿವುಡ್ ನಟ ನಾನಾ ಪಾಟೇಕರ್ ಅವರಿಂದ ಗಣೇಶ ಪೂಜೆ

ಯೋಧರ ಪಹರೆ

ಯೋಧರ ಪಹರೆ

ಮುಜಾಫರ್ ನಗರದ ಪರಿಸ್ಥಿತಿ ತಿಳಿಗೊಳಿಸಲು ಯೋಧರ ನೆರವು ಪಡೆಯಲಾಗಿದೆ.. ಇನ್ನಷ್ಟು ಮಾಹಿತಿ, ಚಿತ್ರಗಳು ಇಲ್ಲಿವೆ ನೋಡಿ

ಗಣೇಶ ಪೂಜೆ

ಗಣೇಶ ಪೂಜೆ

ದಕ್ಷಿಣ ಭಾರತ ಮೂಲದ ಬಾಲಿವುಡ್ ನಟ ಜಿತೇಂದ್ರ ಅವರು ಗಣೇಶ ಪೂಜೆ ಮಾಡಿದ್ದು ಹೀಗೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Todays news stories in pics : Tourists Elaine Oliveira, Zuleika Riveron and Daniele Alfonso pose with contestants Paul Roof of Charleston, South Carolina and Derek Nehrbass of New Orleans during a parade through the French Quarter kicking off the fourth annual Just For Men National Beard and Moustache Championships and many more pics
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more