• search
  • Live TV
keyboard_backspace

ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಮಹತ್ವದ ಸಾಧನೆ: ಏನಿದು ಹೈಪರ್‌ಸಾನಿಕ್ ಕ್ಷಿಪಣಿ ವಾಹನ?

ನವದೆಹಲಿ, ಸೆಪ್ಟೆಂಬರ್ 7: ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ದೇಸೀ ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಸೋಮವಾರ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟ ನಡೆಸಿದೆ. ಈ ಮೂಲಕ ಅಮೆರಿಕ, ರಷ್ಯಾ ಹಾಗೂ ಚೀನಾ ಬಳಿಕ ಹೈಪರ್‌ಸಾನಿಕ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಿದ ನಾಲ್ಕನೆಯ ದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ.

ಶಬ್ದಾತೀತ ತಂತ್ರಜ್ಞಾನ ಪ್ರಾತ್ಯಕ್ಷಿಕೆ ವಾಹನವು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೈಪರ್‌ಸಾನಿಕ್ ಪ್ರೊಪಲ್ಷನ್ ತಂತ್ರಜ್ಞಾನದ ಆಧಾರದಲ್ಲಿ ಇದನ್ನು ಅಭಿವೃದ್ಧಿಗೊಳಿಸಿದೆ. ಈ ತಂತ್ರಜ್ಞಾನದ ಮೂಲಕ ಕ್ಷಿಪಣಿಗಳು ಶಬ್ಧದ ಆರುಪಟ್ಟು ವೇಗದಲ್ಲಿ ಚಲಿಸಲು ಸಾಧ್ಯವಾಗಲಿದೆ. ಇನ್ನು ಐದು ವರ್ಷಗಳಲ್ಲಿ ಡಿಆರ್‌ಡಿಒ ಸ್ಕ್ರಾಮ್ ಜೆಟ್ ಎಂಜಿನ್‌ಗಳೊಂದಿಗೆ (ಎಂಜಿನ್ ಚಲನೆಯಿಂದ ಗಾಳಿಯನ್ನು ಸೆಳೆಯಬಲ್ಲ ಒಂದು ಬಗೆಯ ಎಂಜಿನ್‌ನ ಸೂಪರ್ ಸಾನಿಕ್-ಕೊಂಬುಸ್ಟನ್ ಎಂಜಿನ್) ಜತೆಗೆ ಹೈಪರ್‌ಸೋನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ಎಚ್‌ಎಸ್‌ಟಿಡಿವಿ ಹೈಪರ್ ಸಾನಿಕ್ ಸ್ಪೀಡ್ ಹಾರಾಟಕ್ಕಾಗಿ ತಯಾರಿಸಲಾದ ಒಂದು ಮಾನವರಹಿತ ಸ್ಕ್ರಾಮ್‌ಜೆಟ್ ಪ್ರಾತ್ಯಕ್ಷಿಕೆ ವಾಹನ. ಹೈಪರ್‌ಸಾನಿಕ್ ಮತ್ತು ತುಮಬಾ ದೂರ ಹಾರಬಲ್ಲ ಕ್ರೂಸ್ ಕ್ಷಿಪಣಿಗಳ ಸಾಗಣೆಯ ವಾಹನವನ್ನಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಜತೆಗೆ ಸಣ್ಣ ಉಪಗ್ರಹಗಳನ್ನು ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುವಂತಹ ಇತರೆ ಅನೇಕ ನಾಗರಿಕ ಚಟುವಟಿಕೆಗಳಿಗೂ ನೆರವಾಗಲಿದೆ. ಇದನ್ನು ಡಿಆರ್‌ಡಿಒ ನಿರ್ವಹಣೆ ಮಾಡಲಿದೆ. ಮುಂದೆ ಓದಿ.

ಎಚ್‌ಎಸ್‌ಟಿಡಿವಿ ಕ್ರೂಸ್ ವಾಹನ

ಎಚ್‌ಎಸ್‌ಟಿಡಿವಿ ಕ್ರೂಸ್ ವಾಹನ

ಎಚ್‌ಎಸ್‌ಟಿಡಿವಿ ಕ್ರೂಸ್ ವಾಹನವು ಘನ ರಾಕೆಟ್ ಮೋಟಾರ್‌ಅನ್ನು ಹೊಂದಿದೆ. ಇದು 30 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಬಲ್ಲದು. ಅದು ವೇಗದ ನಿರ್ದಿಷ್ಟ ಮಟ್ಟಕ್ಕೆ ತಲುಪಿದಾಗ ವಾಹನವು ಉಡಾವಣಾ ವಾಹನದಿಂದ ಹೊರಬರುತ್ತದೆ. ಅದಕ್ಕೆ ಪೂರಕವಾಗಿ ಸ್ಕ್ರಾಮ್‌ಜೆಟ್ ಎಂಜಿನ್ ಸ್ವಯಂಚಾಲಿತವಾಗಿ ಹೊತ್ತಿಕೊಳ್ಳುತ್ತದೆ. ವಾಹನದ ಏರೋಡೈನಾಮಿಕ್ ಹೀಟ್ ಶೀಲ್ಡ್‌ಗಳು ಹೈಪರ್‌ಸಾನಿಕ್ ಮ್ಯಾಕ್ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕವಾಗುತ್ತವೆ.

ಉಡಾವಣಾ ವಾಹನ ಮರುಬಳಕೆ

ಉಡಾವಣಾ ವಾಹನ ಮರುಬಳಕೆ

ಮಹತ್ವಾಕಾಂಕ್ಷಿ ಹೈಪರ್‌ಸಾನಿಕ್ ಕ್ರೂಸ್ ಮಿಸೈಲ್ ಯೋಜನೆಯ ಭಾಗವಾಗಿ ಭೂ ಹಾಗೂ ವೈಮಾನಿಕ ಪರೀಕ್ಷೆಯನ್ನು ಡಿಆರ್‌ಡಿಒ ನಡೆಸಿದೆ. ಈ ಸ್ಕ್ರಾಮ್‌ಜೆಟ್ 20 ಸೆಕೆಂಡುಗಳ ಹಾರಾಟ ನಡೆಸುತ್ತದೆ. ಉಡಾವಣಾ ವಾಹನಗಳನ್ನು ಮರುಬಳಕೆ ಮಾಡುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಎಚ್‌ಎಸ್‌ಟಿಡಿವಿಯ ಅಣಕು ಯೋಜನೆಯನ್ನು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾದಲ್ಲಿ ಪ್ರದರ್ಶಿಸಲಾಗಿತ್ತು.

ಡಿಆರ್‌ಡಿಒ ಯೋಜನೆಗೆ ನೆರವು

ಡಿಆರ್‌ಡಿಒ ಯೋಜನೆಗೆ ನೆರವು

ಎಂಜಿನ್‌ಗೆ ಸಂಬಂಧಿಸಿದ ವೈಮಾನಿಕ ಚೌಕಟ್ಟಿನ ವಿನ್ಯಾಸವನ್ನು 2004ರಲ್ಲಿಯೇ ಪೂರ್ಣಗೊಳಿಸಲಾಗಿತ್ತು. 15-20 ಕಿ.ಮೀ. ಎತ್ತರದಲ್ಲಿ ಸ್ಕ್ರಾಮ್‌ಜೆಟ್ ಎಂಜಿನ್ ಪ್ರಾತ್ಯಕ್ಷಿಕೆ ಪ್ರದರ್ಶಿಸಲು ಬಯಸಿರುವುದಾಗಿ ಡಿಆರ್‌ಡಿಒ 2008ರಲ್ಲಿ ತಿಳಿಸಿತ್ತು. ಸ್ಕ್ರಾಮ್‌ಜೆಟ್ ಎಂಜಿನ್ ಶಕ್ತಿಯೊಂದಿಗೆ ಹೈಪರ್‌ಸಾನಿಕ್ ವಾಹನ ಅಭಿವೃದ್ಧಿಪಡಿಸಲಾಗುತ್ತಿದೆ. ಈ ದ್ವಿ-ಬಳಕೆ ತಂತ್ರಜ್ಞಾನ ಬಹುಬಳಕೆಗೆ ಸಿಗಲಿದೆ ಎಂದು ಹೇಳಿತ್ತು.

ಎಸ್‌ಎಚ್‌ಟಿಡಿವಿ ಯೋಜನೆಗೆ ಟನೆಲ್ ಪರೀಕ್ಷೆ ಸೇರಿದಂತೆ ಇಸ್ರೇಲ್ ಕೆಲವು ನೆರವುಗಳನ್ನು ನೀಡಿದೆ. ಬ್ರಿಟನ್‌ನ ಕ್ರೇನ್‌ಫೀಲ್ಡ್ ವಿಶ್ವವಿದ್ಯಾಲಯ ಮತ್ತು ಹೆಸರಿಸದ ಮತ್ತೊಂದು ದೇಶ ಕೂಡ ಸಹಾಯ ಮಾಡಿವೆ. ವರದಿಗಳ ಪ್ರಕಾರ ಈ ಯೋಜನೆಗೆ ರಷ್ಯಾ ಮಹತ್ವದ ನೆರವು ನೀಡಿದೆ. ಹೈಪರ್‌ಸಾನಿಕ್ ಪ್ರೊಪಲ್ಷನ್ ಕುರಿತು ರಷ್ಯಾ ಬಹಳ ವಿಸ್ತೃತ ಸಂಶೋಧನೆ ನಡೆಸಿದೆ.

ವಾಹನ ಹೇಗಿದೆ?

ವಾಹನ ಹೇಗಿದೆ?

1 ಮೆಟ್ರಿಕ್ ಟನ್ ತೂಕ, 5.6 ಮೀಟರ್ (18 ಅಡಿ) ಉದ್ದದ ವೈಮಾನಿಕ ವಾಹನ ಮಟ್ಟವಾದ ಅಷ್ಟಭುಜಾಕೃತಿ ಹೊಂದಿದೆ. ಅದರ ಮಧ್ಯಭಾಗದಲ್ಲಿ ಚಿಕ್ಕದಾದ ರೆಕ್ಕೆಗಳು ಮತ್ತು ಚಾಚಿಕೊಂಡಿರುವ ಬಾಲದ ರೆಕ್ಕೆಗಳಿವೆ. ಜತೆಗೆ 3.7 ಮೀಟರ್ ಆಯತಾಕಾರದ ವಾಯು ಸೇವನಾ ವಿಭಾಗವಿದೆ. ಸ್ಕ್ರಾಮ್‌ಜೆಟ್‌ ಎಂಜಿನ್‌ಅನ್ನು ವಾಹನದ ಮಧ್ಯಭಾಗದಲ್ಲಿ ಅಳವಡಿಸಲಾಗಿದೆ.

1:16 ಪ್ರಮಾಣದ ವಾಹನದ ಮಾದರಿಯನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ನಿರ್ವಹಿಸುತ್ತಿರುವ ಹೈಪರ್‌ಸಾನಿಕ್ ವಿಂಡ್ ಟನೆಲ್‌ನಲ್ಲಿ ಪರೀಕ್ಷಿಸಲಾಗಿತ್ತು. ಬೆಂಗಳೂರಿನ ಎನ್‌ಎಎಲ್‌ನಲ್ಲಿ ಮತ್ತೊಂದು ಪರೀಕ್ಷೆ ನಡೆಸಲಾಗಿತ್ತು. ಲ್ಯಾಬ್ ಪರೀಕ್ಷೆ ವೇಳೆ ಸ್ಕ್ರಾಮ್‌ಜೆಟ್‌ ಎಂಜಿನ್‌ಅನ್ನು ಎರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಕೊನೆಯ ಪರೀಕ್ಷಾ ಹಾರಾಡಕ್ಕೂ ಮುನ್ನ ಆರು ಬಾರಿ ಪರೀಕ್ಷೆ ಮಾಡಲಾಗಿತ್ತು.

3,800 ಮೈಲು ವೇಗದಲ್ಲಿ ಚಲನೆ

3,800 ಮೈಲು ವೇಗದಲ್ಲಿ ಚಲನೆ

ಹೈಪರ್‌ಸಾನಿಕ್ ಕ್ಷಿಪಣಿಗಳು ಶಬ್ಧದ ಐದು ಪಟ್ಟು ವೇಗ ಅಥವಾ ಗಂಟೆಗೆ 3,800 ಮೈಲು ವೇಗದಲ್ಲಿ ಚಲಿಸಬಲ್ಲವು. ಇತರೆ ಖಂಡಾಂತರ ಮತ್ತು ಕ್ರೂಸ್ ಕ್ಷಿಪಣಿಗಳಿಗಿಂತ ಬಹಳ ವೇಗವಾಗಿ ಸಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಸಾಂಪ್ರದಾಯಿಕ ಅಥವಾ ನ್ಯೂಕ್ಲಿಯರ್ ಪೇಲೋಡ್‌ಗಳನ್ನು ಚಿಮ್ಮಿಸಬಲ್ಲವು. ಕಳೆದ ವರ್ಷದ ಜೂನ್‌ನಲ್ಲಿ ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಆದರೆ ಇದು ಸಂಪೂರ್ಣವಾಗಿ ಯಶಸ್ಸು ಕಂಡಿರಲಿಲ್ಲ. ಅಗ್ನಿ-1 ಖಂಡಾಂತರ ವಾಹಕ ವಾಹನವು ಯೋಜನೆಯಲ್ಲಿ ವಿಫಲವಾಗಿತ್ತು. ತೂಕದ ಕಾರಣದಿಂದ ಇದು ಸಾಧ್ಯವಾಗಿರಲಿಲ್ಲ ಎಂದು ಹೇಳಲಾಗಿತ್ತು. ಈಗ ಡಿಆರ್‌ಡಿಒ ತನ್ನ ಉದ್ದೇಶದಲ್ಲಿ ಸಫಲವಾಗಿದೆ.

English summary
India has joined US, Russia and China after successfully testing Hypersonic Technology Demonstrator Vehicle. What is HSTDV? Read here.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X