keyboard_backspace

ಭಾರತದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ನೀಡುವ ಜೈಡಸ್ ಕ್ಯಾಡಿಲಾ ಕೊವಿಡ್-19 ಲಸಿಕೆಗೆ 265 ರೂ.!

Google Oneindia Kannada News

ನವದೆಹಲಿ, ನವೆಂಬರ್ 8: ಭಾರತದಲ್ಲಿ ಅಭಿವೃದ್ಧಿಪಡಿಸಿದ ಮೊದಲ ಡಿಎನ್ಎ ಆಧಾರಿತ ಕೊವಿಡ್-19 ಲಸಿಕೆ ಖರೀದಿಸಲು ಸರ್ಕಾರ ಮುಂದಾಗಿದೆ. ಜೈಡಸ್ ಕ್ಯಾಡಿಲಾ ಕಂಪನಿಯ ಸೂಜಿರಹಿತ ZyCov-D ಲಸಿಕೆಯ 1 ಕೋಟಿ ಡೋಸ್ ಅನ್ನು ಖರೀದಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತೀರ್ಮಾನಿಸಿರುವ ಬಗ್ಗೆ ವರದಿಯಾಗಿದೆ.

ಭಾರತೀಯ ಕೇಂದ್ರ ಸರ್ಕಾರದ ನಿರಂತರ ಮಾತುಕತೆಗಳ ನಂತರ Zydus Cadila ಕಂಪನಿಯು ತನ್ನ COVID-19 ಲಸಿಕೆ ದರವನ್ನು 265 ರೂಪಾಯಿಗೆ ತಗ್ಗಿಸಲು ಸಮ್ಮತಿಸಿದೆ. ದೇಶದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಜೈಡಸ್ ಕ್ಯಾಡಿಲಾದ ZyCov-D ಲಸಿಕೆ ವಿತರಿಸುವುದಕ್ಕೆ ಸಂಬಂಧಿಸಿದಂತೆ ಅನುಮೋದನೆ ನೀಡಲಾಗಿದೆ.

ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ

ಸೂಜಿ-ರಹಿತ ಲಸಿಕೆಯನ್ನು ಉತ್ಪಾದಿಸುವುದಕ್ಕೆ ಕಂಪನಿಯು ಕನಿಷ್ಠ 93 ರೂಪಾಯಿ ಅನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಅದೇ ಒಂದು ಡೋಸ್ ಲಸಿಕೆಯನ್ನು ಕಂಪನಿಯು 358 ರೂಪಾಯಿಗೆ ಮಾರಾಟ ಮಾಡುತ್ತಿದೆ. ಅಹ್ಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾ ಕಂಪನಿಯು ಮೊದಲ ಮೂರು ಡೋಸ್ ಲಸಿಕೆಗೆ 1,900 ರೂಪಾಯಿ ತೆಗೆದುಕೊಳ್ಳುವ ಬಗ್ಗೆ ಪ್ರಸ್ತಾಪಿಸಿತ್ತು. ಜೈಡಸ್ ಕ್ಯಾಡಿಲಾ ಕಂಪನಿಯು ನವೆಂಬರ್ ತಿಂಗಳಿನಲ್ಲೇ 2 ಕೋಟಿ ಡೋಸ್ ಲಸಿಕೆಯನ್ನು ಪೂರೈಸುವ ಸಾಧ್ಯತೆಯಿದೆ.

28 ದಿನದಲ್ಲೇ ಮೂರು ಡೋಸ್ ಲಸಿಕೆ

28 ದಿನದಲ್ಲೇ ಮೂರು ಡೋಸ್ ಲಸಿಕೆ

ಪ್ರತಿಬಾರಿ ಒಂದು ಡೋಸ್ ಲಸಿಕೆಯನ್ನು ಎರಡೂ ತೋಳುಗಳಿಗೆ ನೀಡಲಾಗುತ್ತದೆ. 28 ದಿನಗಳಲ್ಲಿ ಮೂರು ಡೋಸ್ ಲಸಿಕೆಯನ್ನು ನೀಡಬೇಕಾಗುತ್ತದೆ. ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಮೊದಲ ಡಿಎನ್ಎ ಆಧಾರಿತ ಕೊರೊನಾವೈರಸ್ ಲಸಿಕೆ ಜೈಡಸ್ ಕ್ಯಾಡಿಲಾದ ZyCov-D ಅನ್ನು ಆಗಸ್ಟ್ 20ರಂದು ಭಾರತದ ಔಷಧೀಯ ಪ್ರಾಧಿಕಾರ ಅನುಮೋದನೆ ನೀಡಿತ್ತು.

2 ತಿಂಗಳಿನಲ್ಲಿ ಜೈಡಸ್ ಕ್ಯಾಡಿಲಾದ ಲಸಿಕೆ ಪೂರೈಕೆ

2 ತಿಂಗಳಿನಲ್ಲಿ ಜೈಡಸ್ ಕ್ಯಾಡಿಲಾದ ಲಸಿಕೆ ಪೂರೈಕೆ

ಜಗತ್ತಿನಲ್ಲೇ ಮೊದಲ ಹಾಗೂ ಮತ್ತು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಡಿಎನ್ಎ ಆಧಾರಿತ ಕೊವಿಡ್-19 ಲಸಿಕೆಗೆ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ ಅನುಮೋದನೆ ನೀಡಿದೆ.

"ಜೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಜೈವಿಕ ತಂತ್ರಜ್ಞಾನ ವಿಭಾಗ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಂಶೋಧಿಸಿರುವ ಜೈಡಸ್ ಕ್ಯಾಡಿಲಾ ಕಂಪನಿ ಉತ್ಪಾದಿಸುವ ಜೈಕೊವ್-ಡಿ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಎರಡು ತಿಂಗಳಿನಲ್ಲಿ ಲಸಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಕಂಪನಿ ಈಗಾಗಲೇ ಸ್ಪಷ್ಟಪಡಿಸಿದೆ. ಜೈಕೊವ್-ಡಿ ಲಸಿಕೆಯನ್ನು 2 ರಿಂದ -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಿ ಇಡಬೇಕು. 25 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 3 ತಿಂಗಳ ಅವಧಿವರೆಗೂ ಸಂಗ್ರಹಿಸಲು ಸಾಧ್ಯ ಎಂದು ಕಂಪನಿ ತಿಳಿಸಿದೆ.

ಕೊವಿಡ್-19 ಲಸಿಕೆ ಸುರಕ್ಷತೆ ಮತ್ತು ಪರಿಣಾಮ

ಕೊವಿಡ್-19 ಲಸಿಕೆ ಸುರಕ್ಷತೆ ಮತ್ತು ಪರಿಣಾಮ

ಭಾರತದಲ್ಲಿ ಜೈಡಸ್ ಕ್ಯಾಡಿಲಾ ಕಂಪನಿಯು ಸಂಶೋಧಿಸಿರುವ ಜೈಕೊವ್-ಡಿ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮವನ್ನು ಪರೀಕ್ಷಿಸುವ ನಿಟ್ಟಿನಲ್ಲಿ ವೈದ್ಯಕೀಯ ಪ್ರಯೋಗ ನಡೆಸಲಾಗಿತ್ತು. ದೇಶಾದ್ಯಂತ 28,000 ಜನರನ್ನು ಬಳಸಿಕೊಂಡು ಈಗಾಗಲೇ ವೈದ್ಯಕೀಯ ಪ್ರಯೋಗ ನಡೆಸಲಾಗಿದೆ. 12 ರಿಂದ 18 ವರ್ಷದ 1,000 ಮಕ್ಕಳನ್ನು ಲಸಿಕೆ ಪರೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಜೈಕೊವ್-ಡಿ ಲಸಿಕೆಯು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಎಂಬುದು ಗೊತ್ತಾಗಿದೆ.

ಕೊರೊನಾವೈರಸ್ ವಿರುದ್ಧ ಸರ್ಕಾರದ ಹೋರಾಟಕ್ಕೆ ಸಾಥ್

ಕೊರೊನಾವೈರಸ್ ವಿರುದ್ಧ ಸರ್ಕಾರದ ಹೋರಾಟಕ್ಕೆ ಸಾಥ್

"ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಲಸಿಕೆ ವಿತರಣೆ ಅಭಿಯಾನಕ್ಕೆ ZyCov-D ಮೂಲಕ ಬೆಂಬಲ ನೀಡಲು ನಮಗೆ ಸಂತೋಷವಾಗುತ್ತದೆ. ಸೂಜಿ-ಮುಕ್ತ ಲಸಿಕೆಯು ಹೆಚ್ಚು ಜನರಿಗೆ ಪ್ರೋತ್ಸಾಹದಾಯಕವಾಗಿದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜನರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಈ ಲಸಿಕೆಯು ಹೆಚ್ಚು ಉಪಯುಕ್ತವಾಗಿದೆ. ಅದರಲ್ಲೂ 12 ರಿಂದ 18 ವರ್ಷದೊಳಗಿನ ಯುವಕರಿಗೆ ಈ ಲಸಿಕೆಯು ಪ್ರಯೋಜನಕಾರಿಯಾಗಿದೆ," ಎಂದು ಜೈಡಸ್ ಕ್ಯಾಡಿಲಾದ ಮ್ಯಾನೇಜರಿಂಗ್ ಡೈರೆಕ್ಟರ್ ಡಾ. ಶಾರ್ವಿಲ್ ಪಟೇಲ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಶಿಫಾರಸ್ಸು ಎದುರು ನೋಡುತ್ತಿರುವುದೇಕೆ?

ಕೇಂದ್ರ ಸರ್ಕಾರದ ಶಿಫಾರಸ್ಸು ಎದುರು ನೋಡುತ್ತಿರುವುದೇಕೆ?

ಜೈಡಸ್ ಕ್ಯಾಡಿಲಾದ ZyCov-D ಲಸಿಕೆಯನ್ನು ಅಸ್ವಸ್ಥಗೊಂಡ ವಯಸ್ಕರು ಹಾಗೂ ಮಕ್ಕಳಿಗೆ ನೀಡುವುದು ಸೂಕ್ತವೇ ಎಂಬ ಬಗ್ಗೆ ಕೇಂದ್ರ ಪ್ರತಿಕಾಯ ತಾಂತ್ರಿಕ ಸಲಹಾ ತಂಡ ನೀಡುವ ಶಿಫಾರಸ್ಸಿಗಾಗಿ ಕೇಂದ್ರ ಸರ್ಕಾರವು ಎದುರು ನೋಡುತ್ತಿದೆ. ಕೊವಿಡ್-19 ಲಸಿಕೆ ವಿತರಣೆ ಅಭಿಯಾನದಲ್ಲಿ ಈ ಲಸಿಕೆಯನ್ನೂ ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿದಂತೆ ತಂಡವು ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಿದೆ.

ಜೆಟ್ ಇಂಜೆಕ್ಟರ್ ಬಳಸಿ 20,000 ಮಂದಿಗೆ ಲಸಿಕೆ

ಜೆಟ್ ಇಂಜೆಕ್ಟರ್ ಬಳಸಿ 20,000 ಮಂದಿಗೆ ಲಸಿಕೆ

ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿರುವ ಜೈಡಸ್ ಕ್ಯಾಡಿಲಾದ ZyCov-D ಲಸಿಕೆಯು ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳಿಗಿಂತ ವಿಭಿನ್ನವಾಗಿದೆ. ಈ ಸೂಜಿ-ಮುಕ್ತ ಲಸಿಕೆ ನೀಡಲು ಜೆಟ್ ಇಂಜೆಕ್ಟರ್ ಅನ್ನು ಅಳವಡಿಸಲಾಗಿರುತ್ತದೆ. ಒಂದು ಜೆಟ್ ಇಂಜೆಕ್ಟರ್ ಸಹಾಯದಿಂದ 20,000 ಮಂದಿಗೆ ಲಸಿಕೆಯನ್ನು ವಿತರಿಸಬಹುದಾಗಿದೆ. ಈ "ಜೆಟ್ ಇಂಜೆಕ್ಟರ್ ಎನ್ನುವುದು ಲಸಿಕೆ ದ್ರವವನ್ನು ಸ್ವೀಕರಿಸುವವರ ಜೀವಕೋಶಗಳಿಗೆ ಪ್ರವೇಶಿಸಲು ಚರ್ಮವನ್ನು ಭೇದಿಸಲು ಸಹಾಯ ಮಾಡುತ್ತದೆ" ಎಂದು ಮೂಲಗಳಿಂದ ತಿಳಿದು ಬಂದಿದೆ.

ಯಾವ ಕಂಪನಿ ಕೊವಿಡ್-19 ಲಸಿಕೆಗೆ ಎಷ್ಟು ಬೆಲೆ?

ಯಾವ ಕಂಪನಿ ಕೊವಿಡ್-19 ಲಸಿಕೆಗೆ ಎಷ್ಟು ಬೆಲೆ?

ಭಾರತದಲ್ಲಿ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಒಂದು ಡೋಸ್ ಲಸಿಕೆಗೆ 205 ರೂಪಾಯಿ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಒಂದು ಡೋಸ್ ಲಸಿಕೆಗೆ 215 ರೂಪಾಯಿ ನೀಡಲಾಗುತ್ತದೆ. ಎರಡೂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ಈ ಬೆಲೆಯಲ್ಲಿ ಕೊವಿಡ್-19 ಲಸಿಕೆಯನ್ನು ಪೂರೈಕೆ ಮಾಡುತ್ತಿವೆ. ದೇಶದಲ್ಲಿ ಈಗಾಗಲೇ ವಿತರಣೆ ಆಗುತ್ತಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ಸ್ಪುಟ್ನಿಕ್-ವಿ ಲಸಿಕೆಗಳನ್ನು ಕೇವಲ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತದೆ.

ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಿದೆ.

English summary
India: Central Govt To Buy 1 Crore Zydus Cadila Needleless Covid Vaccines At ₹ 265 A Dose.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X