keyboard_backspace

ಚೀನಾದಲ್ಲಿ ಕಾಲ್ಕಿತ್ತ ಆನ್‌ಲೈನ್ ಲೋನ್‌ ಆಪ್‌ ರಾಕೆಟ್‌ ಭಾರತಕ್ಕೆ ಬಂದಿದ್ದು ಹೇಗೆ ?

Google Oneindia Kannada News

ಬೆಂಗಳೂರು ಜನವರಿ 14: ಜನ ಸಾಮಾನ್ಯರಿಗೆ ಹಣದ ತುರ್ತು ಅಗತ್ಯ ಅರಿತ ಆನ್‌ಲೈನ್ ಲೋನ್ ಆಪ್‌ಗಳು ಸಿಕ್ಕ ಸಿಕ್ಕ ಗ್ರಾಹಕರ ಬ್ಯಾಂಕ್ ಖಾತೆಗೆ ಬಲವಂತವಾಗಿ ಹಣ ಹಾಕಿ ಬಡ್ಡಿ ವಸೂಲಿ ಮಾಡಿವೆ. ಒಮ್ಮೆ ಸಾಲದ ಸುಳಿಗೆ ಸಿಲುಕಿದರೆ ಅದನ್ನು ತೀರಿಸಲು ಹತ್ತು ಸಾಲ ಕೊಡುತ್ತವೆ. ಮೂರು ಸಾವಿರ ದಿಂದ ಆರಂಭವಾಗುವ ಸಾಲ ಲಕ್ಷ ದಾಟುತ್ತದೆ. ಎಷ್ಟು ಕಂತು ಕಟ್ಟಿದರೂ ಸಾಲ- ಬಡ್ಡಿ ತೀರುವುದೇ ಇಲ್ಲ ! ಇನ್ನು ಒಂದು ಆಪ್‌ ಸಾಲ ಕೊಟ್ಟರೆ, ಹತ್ತು ಆಪ್‌ಗಳು ನಿಮಗೆ ಗೊತ್ತಿಲ್ಲದೇ ಸಾಲ ನೀಡುತ್ತವೆ !

ಇದು ಆನ್‌ಲೈನ್ ಲೋನ್ ಆಪ್‌ಗಳ ಕಾರ್ಯಕಂತ್ರ. ಆರಂಭದಲ್ಲಿ ಚೀನಾದಲ್ಲಿ ತಲೆಯೆತ್ತಿದ್ದವು. ಅಲ್ಲಿನ ಜನರು ಸಾಲ ಪಡೆದು ಬಡ್ಡಿ ತೀರಿಸಲಾಗಲಿಲ್ಲ. ಇದರಿಂದ ಜನರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಹೀಗೆ ಬೀಳುತ್ತಿದ್ದಂತೆ ಚೀನಾ ಸರ್ಕಾರ ಎಚ್ಚೆತ್ತು ಆನ್‌ಲೈನ್ ಲೋನ್‌ ಆಪ್‌ಗಳ ಬಡ್ಡಿ ದಂಧೆಗೆ ಕಡಿವಾಣ ಹಾಕಿತ್ತು. ಎರಡು ವರ್ಷ ಕಾಲಾವಕಾಶ ನೀಡಿತ್ತು. ಇದಾದ ನಂತರ ತಂತ್ರಜ್ಞಾನ, ಆರ್ಟಿಫಿಷಯಲ್ ಇಂಟೆಲ್ ಜೆನ್ಸಿ ಆಧಾರಿತ ಆನ್‌ಲೈನ್ ಲೋನ್ ಆಪ್‌ಗಳು ಭಾರತಕ್ಕೆ ಕಾಲಿಟ್ಟವು. ಚೀನಾ ಸಾಫ್ಟ್ ವೇರ್‌, ಚೀನಾ ದುಡ್ಡಿಗೆ ಭಾರತದಲ್ಲಿ ನಕಲಿ ನಿರ್ದೇಶಕರು ಒಳಗೊಂಡ ಬ್ಯಾಂಕಕೇತರ ಹಣಕಾಸು ಸಂಸ್ಥೆಗಳ ಅಡಿಯಲ್ಲಿ ವ್ಯಾಪಾರ ಶುರುಮಾಡಿದವು. ಇದೇ ಅವಧಿಗೆ ಕರೋನಾದಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ದುಡ್ಡು ಕೊಟ್ಟರೆ ಸಾಕು ಎನ್ನುತ್ತಿದ್ದವರು ಯಾವ ಷರತ್ತುಗಳನ್ನು ನೋಡದೇ ಆಪ್‌ಗಳಿಂದ ಸಾಲ ಮಾಡಿದರು. ಅವತ್ತು ಮಾಡಿದ ಬಿಡಿಗಾಸು ಸಾಲ ಇವತ್ತಿಗೆ ಬದುಕನ್ನೇ ಬೀದಿಗೆ ತಂದು ನಿಲ್ಲಿಸಿದೆ. ಸಾಲ ಪಡೆದವರ ಸಮಗ್ರ ಮಾಹಿತಿ, ಅವರ ಸಂಪರ್ಕದಲ್ಲಿರುವರ ಎಲ್ಲಾ ಮಾಹಿತಿಯನ್ನು ಆನ್‌ಲೋನ್ ಲೋನ್‌ ಆಪ್‌ ಗಳು ಕದ್ದುಕೊಂಡಿವೆ ! ಭವಿಷ್ಯದಲ್ಲಿ ಭಾರತದ ಮೇಲೆ ಆಗುವ ಸೈಬರ್ ವಾರ್ ಗೆ ಈ ಡಾಟಾ ಬಳಕೆಯಾದರೂ ಅಚ್ಚರಿಯೇನಲ್ಲ !

ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?ಆನ್‌ಲೈನ್ ಲೋನ್ ಆಪ್‌ಗಳಿಂದ ಪಡೆದ ಸಾಲ ಮನ್ನಾ: ಪೊಲೀಸರು ಏನಂತಾರೆ?

ಬಳ್ಳಾರಿ ಹುಡುಗನ ಆನ್‌ಲೈನ್ ಸಾಲ ಕಥೆ:

ಬಳ್ಳಾರಿ ಹುಡುಗನ ಆನ್‌ಲೈನ್ ಸಾಲ ಕಥೆ:

ಆ ಹುಡುಗನ ಹೆಸರು ನವೀನ್. ಬಳ್ಳಾರಿ ನಿವಾಸಿ. ಖಾಸಗಿ ಕಂಪನಿಯಲ್ಲಿ ಉದ್ಯೋಗ. ಕೈತುಂಬಾ ಸಂಬಳ. ಕೊರೋನಾ ಬಂದು ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡಿದ್ದ. ತುರ್ತು ಸಾಲ ಅಗತ್ಯವಿತ್ತು. ಸ್ನೇಹಿತರ ಮೂಲಕ ಮಾಹಿತಿ ಪಡೆದು ಮನಿವೀವ್ ಆಪ್ ನಿಂದ 30 ಸಾವಿರ ಸಾಲ ಪಡೆದಿದ್ದು, ಸದ್ಯ ಸಾಲದ ಮೊತ್ತ 1.65 ಲಕ್ಷ ರೂ. ಆಗಿದೆ. ಹಳೇ ಸಾಲ ತೀರಿಸಲು ಹೊಸ ಸಾಲ ಮಾಡಿ ಕೊನೆಗೆ ಇದು ಈ ಪರಿ ಬೆಳೆದು ನಿಂತಿದೆ. ತಿಂಗಳಿಗೆ ಆರು ಸಾವಿರ ರೂಪಾಯಿ ಮಾಸಿಕ ಕಂತು ಪಾವತಿಸುತ್ತಿದ್ದೇನೆ. ಸದ್ಯ ಈ ತಿಂಗಳಿನಿಂದ ಕಟ್ಟಲಾಗುತ್ತಿಲ್ಲ ! ಬಡ್ಡಿ ಕಟ್ಟಲಾಗದೇ ಸೋತು ಹೋಗಿದ್ದೇನೆ. ಆನ್‌ಲೈನ್ ಲೋನ್ ಆಪ್‌ಗಳ ಮೋಸದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದು ನೋಡಿದ್ದು, ನಾನು ದೂರು ಕೊಡುತ್ತೇನೆ ಎನ್ನುತ್ತಾನೆ ಆನ್‌ಲೈನ್ ಆಪ್‌ ನಿಂದ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿರುವ ನವೀನ್ !

ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?

ಹೈದರಾಬಾದ್ ಹುಡುಗನ ಕಷ್ಟ ಕೇಳಿ :

ಹೈದರಾಬಾದ್ ಹುಡುಗನ ಕಷ್ಟ ಕೇಳಿ :

ಇನ್ನು ಹೈದರಾಬಾದ್ ಭುಮನಪ್ರಸಾದ್ ದು ಇನ್ನೂ ಭಿನ್ನ ಕಥೆ. ಮೈ ಬ್ಯಾಂಕ್ ಎಂಬ ಆನ್‌ಲೈನ್ ಆಪ್‌ ಮೂಲಕ 3500 ರೂ. ಸಾಲ ಪಡೆದಿದ್ದು. ಒಂದು ವಾರದಲ್ಲಿ ಬಡ್ಡಿ ಸಮೇತ ತೀರಿಸಿ ಇನ್ನೊಂದು ಲೋನ್ ಆಪ್‌ನಿಂದ 4400 ರೂ. ಸಾಲವನ್ನು ಪೆಡದಿದ್ದ. ಕೆಲವೇ ದಿನದಲ್ಲಿ ಭುಮನ್ ಪ್ರಸಾದ್‌ ಗೆ ಅಚ್ಚರಿ ಕಾದಿತ್ತು. ಲೋನ್ ಗೆ ಅರ್ಜಿ ಹಾಕದಿದ್ದರೂ ಆನ್‌ಲೈನ್ ಲೋನ್ ಆಪ್‌ಗಳಿಂದ ಈತನ ಎಸ್‌ಬಿಐ ಖಾತೆಗೆ 26 ಸಾವಿರ ಹಣ ಬಿದ್ದಿತ್ತು ! ಹದಿನಾಲ್ಕು ಆನ್‌ಲೈನ್ ಲೋನ್ ಆಪ್‌ಗಳಿಂದ ಹಣ ಬಿದ್ದಿತ್ತು. ಈ ಯಾವ ಆಪ್‌ಗಳನ್ನು ಭುಮನ್ ಪ್ರಸಾದ್ ಡೌನ್‌ಲೋಡ್ ಕೂಡ ಮಾಡಿಕೊಂಡಿರಲಿಲ್ಲ. ಕೊನೆಗೆ ಬಡ್ಡಿ ಸಮೇತ 44,000 ರೂಪಾಯಿ ಪಾವತಿಸುವಂತೆ ಚಿತ್ರಹಿಂಸೆ ಕೊಡಲು ಆರಂಭಿಸಿವೆ. ಆನ್‌ಲೈನ್ ಲೋನ್‌ ಆಪ್ ಗಳು ಭುಮನ್ ಪ್ರಸಾದ್ ಖಾತೆಗೆ ಹೇಗೆ ಹಣ ಹಾಕಿದವರು ? ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಪೊಲೀಸರ ತನಿಖೆಯಲ್ಲಿ ಮೈ ಬ್ಯಾಂಕ್ ಆಪ್ ಜಿಯಾ ಲಿಯಾಗ್ ಟೆಕ್ನಾಲಜಿ ಪುಣೆಗೆ ಸೇರಿದ್ದು, ಈ ಕಂಪನಿ ಅಡಿ ಸುಮಾರು ಆನ್‌ಲೈನ್ ಲೋನ್ ಆಪ್‌ಗಳು ಕೆಲಸ ನಿರ್ವಹಿಸುತ್ತಿವೆ. ಮೈ ಬ್ಯಾಂಕ್ ಆಪ್‌ ನ ಲ್ಲಿ ಸಿಕ್ಕಿದ ವಿವರಗಳನ್ನು ಕದ್ದು, ಅದರ ಆಧಾರದ ಮೇಲೆ ಎಲ್ಲಾ ಆಪ್‌ಗಳು ಸಾಲ ನೀಡಿವೆ. ಕೇವಲ ಹೈದರಾಬಾದ್ ಮಾತ್ರವಲ್ಲ, ಇಡೀ ಭಾರತದಲ್ಲಿ ಆನ್‌ಲೈನ್ ಲೋನ್ ಆಪ್‌ಗಳು ಇಂತಹ ವಂಚನೆ ಹಾದಿಯನ್ನು ಹಿಡಿದಿರುವುದು ಪೊಲೀಸರ ತನಿಖೆ ವೇಳೆ ಬಯಲಿಗೆ ಬಂದಿದೆ. ಈ ಮೂಲಕ ಗ್ರಾಹಕರ ಮಾಹಿತಿ ಕದಿಯುವುದು, ಸಂಪರ್ಕ ಸಂಖ್ಯೆಗಳನ್ನು ಪಡೆದು ಹಿಂಸೆ ನೀಡುವುದು. ಶೇ. 200 ರಿಂದ 500 ರಷ್ಟು ಬಡ್ಡಿ ವಸೂಲಿ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2020 ಮಾರ್ಚ್‌ ನಿಂದ ಈ ಆನ್‌ಲೈನ್‌ ಲೋನ್‌ ಆಪ್‌ಗಳಿಂದ ಸಾಲ ಪಡೆಯುವ ಪ್ರಮಾಣ ದುಪ್ಪಟ್ಟು ಆಗಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಕೆಲಸ ಕಳೆದುಕೊಂಡವರು ಅನಿವಾರ್ಯವಾಗಿ ಈ ಆನ್‌ಲೈನ್ ಲೋನ್ ಆಪ್‌ಗಳಿಂದ ಸಾಲ ಪಡೆದಿದ್ದಾರೆ. ಬಡ್ಡಿ ಸಾಲ ತೀರಿಸಲಾಗದೇ ಸಾಲದ ಮೇಲೆ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಕೆಲವರು ಸಾಲ ಕಟ್ಟಲಾಗದೇ ಮರ್ಯಾದೆಗೆ ಅಂಜಿ ಜೀವ ತೆತ್ತಿದ್ದಾರೆ.

ಚೀನಾದಲ್ಲಿ ಲೋನ್ ಆಪ್‌ ಬಂದ್ :

ಚೀನಾದಲ್ಲಿ ಲೋನ್ ಆಪ್‌ ಬಂದ್ :

ಈ ಆನ್‌ಲೈನ್ ಲೋನ್ ಆಪ್‌ ಗಳಿಗೂ ಬೀದಿ ಬದಿ ಮೀಟರ್ ಬಡ್ಡಿ ವಸೂಲಿ ಮಾಡುವ ಫೈನಾನ್ಸಿಯರ್ ಗಳಿಗೆ ವ್ಯತ್ಯಾಸವೇ ಇಲ್ಲ. ಕಡಿಮೆ ಹಣವನ್ನು ಹೆಚ್ಚು ಜನರಿಗೆ ದುಬಾರಿ ಬಡ್ಡಿಗೆ ನೀಡುವುದು. ಒಬ್ಬ ಮೋಸ ಮಾಡಿದರೂ ಉಳಿದ ಒಂಭತ್ತು ಜನ ಪಾವತಿ ಮಾಡುತ್ತಾರೆ. ಹೀಗಾಗಿ ನಷ್ಟದ ಪ್ರಶ್ನೆಯೇ ಇಲ್ಲ. ಹೀಗಾಗಿ ಸಿಕ್ಕ ಸಿಕ್ಕವರಿಗೆ ಲೋನ್ ಆಪ್‌ಗಳು ಸಾಲ ಕೊಟ್ಟಿವೆ. ಸಾಲವನ್ನು ವಸೂಲಿ ಮಾಡುವ ತಂತ್ರವನ್ನು ಅಷ್ಟೇ ಭಿನ್ನವಾಗಿ ರೂಪಿಸಿವೆ. ಸಾಲ ಪಡೆದವರ ಸಂಪರ್ಕ ಸಂಖ್ಯೆಗಳಿಂದ ಹಿಡಿದು ಮೊಬೈಲ್ ನ ಅಷ್ಟು ಡಾಟಾ ಲೋನ್ ಆಪ್‌ಗಳು ಪಡೆದುಕೊಂಡು ಸಾಲ ಕೊಡದವರ ಮಾನ ಸಾಮಾಜಿಕ ಜಾಲ ತಾಣದಲ್ಲಿ ಹರಾಜು ಹಾಕುತ್ತಿದ್ದವು. ಇದೇ ರೀತಿಯ ದಂಧೆ 2012 ರಲ್ಲಿ ಚೀನಾದಲ್ಲಿ ಚಾಲ್ತಿಯಲ್ಲಿತ್ತು. 2016 ರ ವೇಳೆಗೆ ಆನ್‌ಲೈನ್ ಲೋನ್ ಆಪ್‌ಗಳ ರೀಕವರಿ ನಿಯಮಗಳ ವಿರುದ್ಧ ಚೀನಾ ಕಡಿವಾಣ ಹಾಕಿತ್ತು. ಈ ಕುರಿತು ಸಮಸ್ಯೆ ಎದುರಾದಾಗ ಚೀನಾ ಇಂಟರ್ ನೆಟ್‌ ಹಣ ವಹಿವಾಟು ಸಮಸ್ಯೆ ಇತ್ಯರ್ಥ ಪಡಿಸಲು ಪ್ರತ್ಯೇಕ ಕಾರ್ಯಪಡೆ ರಚಿಸಿ ಅಧ್ಯಯನ ನಡೆಸಿತ್ತು. ಎರಡು ವರ್ಷ ಕಾಲಾವಕಾಶ ಕೊಟ್ಟು, ಕೊಟ್ಟಿರುವ ಸಾಲ ಮಾತ್ರ ವಸೂಲಿ ಮಾಡಿಕೊಂಡು ಜಾಗ ಖಾಲಿ ಮಾಡುವಂತೆ ಆನ್‌ಲೈನ್ ಆಪ್‌ಗಳಿಗೆ ಸೂಚಿಸಲಾಗಿತ್ತು. ಹೀಗೆ ಚೀನಾದಲ್ಲಿ ಖಾಲಿಯಾದ ಆನ್‌ಲೈನ್ ಲೋನ್ ಆಪ್‌ಗಳು ಭಾರತಕ್ಕೆ ಎಂಟ್ರಿ ಕೊಟ್ಟವು.

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಭಾರತದಲ್ಲಿ ಕೇಸು :

ಭಾರತದಲ್ಲಿ ಕೇಸು :

ಭಾರತಕ್ಕೆ ಎಂಟ್ರಿ ಕೊಟ್ಟಿದ್ದೇ ಕರೋನಾ ವಕ್ಕರಿಸಿತ್ತು. ಜನರಿಗೆ ದುಡ್ಡಿನ ತುರ್ತು ಅಗತ್ಯತೆ ಬಿತ್ತು. ಇದನ್ನ ಕಾಯುತ್ತಿದ್ದ ಆನ್‌ಲೈನ್ ಲೋನ್ ಆಪ್‌ಗಳು ಸಾಲ ಕೊಟ್ಟಿದವು. ಸಾಲ ತೀರಿಸದವರಿಗೆ ಟಾಪಪ್ ಸಾಲ ಕೊಟ್ಟು ಸಾಲ ಬಡ್ಡಿ ಏರಿಸಿದವು. ಹೀಗಾಗಿ ಇವುಗಳ ದುಬಾರಿ ಬಡ್ಡಿಯ ಜಾಲಕ್ಕೆ ಬಿದ್ದ ಲಕ್ಷಾಂತರ ಜನ ಬಡ್ಡಿ ಕಟ್ಟಲಾಗದೇ ಸಾಲಗಾರರಾಗಿದ್ದಾರೆ. ಇದರಿಂದ ಕೆಲವರು ಜೀವ ಕಳೆದುಕೊಂಡಿದ್ದು, ಇದೀಗ ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯಗಳಲ್ಲಿ ಲೋನ್ ಆಪ್‌ಗಳ ವಿರುದ್ಧ ಏಕ ಕಾಲಕ್ಕೆ ತನಿಖೆ ಶುರುವಾಗಿದೆ. ಮಾತ್ರವಲ್ಲ ಹಣದ ಅಕ್ರಮ ವಹಿವಾಟಿನ ಬಗ್ಗೆಯೂ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಇವುಗಳಿಗೆ ಚೀನಾ ಮಾದರಿಯಲ್ಲಿ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಿದೆ.

ವಿಳಾಸವೇ ಇಲ್ಲ:

ವಿಳಾಸವೇ ಇಲ್ಲ:

ಭಾರತದಲ್ಲಿ ಬಿಡಿಗಾಸು ಸಾಲ ಕೊಟ್ಟು ಬಡವರ ರಕ್ತ ಹೀರುತ್ತಿವ ಈ ಆನ್‌ಲೈನ್ ಲೋನ್ ಆಪ್‌ಗಳ 1050 ಕ್ಕೂ ಹೆಚ್ಚು ಇವೆ. ಚೀನಾ ಮೂಲದ ಉದ್ಯಮಿಗಳು ಭಾರತದ ಕೆಲವು ವ್ಯಾಪಾರಸ್ತರ ಕೈ ಜೋಡಿಸಿ ನಾನಾ ಹೆಸರಿನಲ್ಲಿ ಆಪ್‌ಗಳ ಕಾರ್ಯಾಚರಣೆ ನಡೆಸುತ್ತಿವೆ. ಇವುಗಳಲ್ಲಿ ಸುಮಾರು 750 ಆಪ್‌ಗಳಲ್ಲಿ ಲೋಪಗಳು ಕಂಡು ಬಂದಿವೆ. ಇಷ್ಟು ಆಪ್‌ಗಳ ಪೈಕಿ ಕೇವಲ 90 ಆಪ್‌ಗಳು ಮಾತ್ರ ತನ್ನ ವಿಳಾಸ ಹೊಂದಿವೆ. ಉಳಿದ ಆಪ್‌ಗಳು ಎಲ್ಲಿ ಇವೆ ಎಂಬ ವಿಳಾಸವೂ ಇಲ್ಲ. ಒಂದು ವಾರದ ಅವಧಿಗೆ ಸಾಲ ಕೊಟ್ಟು ರಕ್ತ ಹೀರುತ್ತಿರುವ ಈ ಆನ್‌ಲೈನ್ ಲೋನ್‌ ಆಪಗಳ ನಿಯಂತ್ರಣದ ಬಗ್ಗೆ ಇನ್ನೂ ಸರ್ಕಾರ ತೆಲೆ ಕೆಡಿಸಿಕೊಂಡಿಲ್ಲ. ಚೀನಾ ಮಾದರಲ್ಲಿಯಲ್ಲಿ ಭಾರತದಲ್ಲಿ ಕೂಡ ಆನ್‌ಲೈನ್ ಲೋನ್‌ ಆಪ್‌ಗಳ ಮೇಲೆ ನಿಯಂತ್ರಣ ಹಾಕಬೇಕು. ಇಲ್ಲದಿದ್ದರೆ ಇಡೀ ಆರ್ಥಿಕ ಅರ್ಥ ವ್ಯವಸ್ಥೆಗೆ ತೊಂದರೆಯಾಗಲಿದೆ ಎಂದು ಆರ್ಥಿಕ ತಜ್ಞರ ಅಭಿಪ್ರಾಯ ಉಲ್ಲೇಖಿಸಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಅನ್ ಲೈನ್ ಲೋನ್ ಆಪ್ ಗಳ ವಿರುದ್ಧ ಸಮರಕ್ಕೆ ಸಿಸಿಬಿ ಸಜ್ಜುಅನ್ ಲೈನ್ ಲೋನ್ ಆಪ್ ಗಳ ವಿರುದ್ಧ ಸಮರಕ್ಕೆ ಸಿಸಿಬಿ ಸಜ್ಜು

English summary
made in china, how the instant loan app racket boomed in inda, A large percentage of instant loan apps have the same software backed,
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X