keyboard_backspace

ಪ್ಲೇ ಸ್ಟೋರ್ ನಿಂದ ಆನ್‌ಲೈನ್ ಲೋನ್ ಆಪ್‌ಗಳು ಕಣ್ಮರೆ

Google Oneindia Kannada News

ಬೆಂಗಳೂರು, ಜನವರಿ 06: ಕರೋನಾ ಕಷ್ಟದಲ್ಲಿ ಆನ್‌ಲೈನ್ ಆಪ್ ಗಳಿಂದ ತುರ್ತು ಸಾಲ ಪಡೆದವರೆ ಅದೃಷ್ಟವಂತರು ! ಕೊಟ್ಟ ಸಾಲ ಕೇಳಲಾಗದಂತಹ ಸಂಕಷ್ಟ ಆನ್‌ಲೈನ್ ಸರಣಿಯೋಪಾದಿಯಲ್ಲಿ ಪ್ಲೇ ಸ್ಟೋರ್ ನಿಂದ ಕಣ್ಮರೆಯಾಗುತ್ತಿವೆ ! ಸಾಲ ಕೊಟ್ಟ ಆಪ್‌ಗಳೇ ಪೊಲೀಸರ ತನಿಖೆ ಎದುರಿಸಲಾಗದೇ ಸಂಕಷ್ಟಕ್ಕೀಡಾಗಿವೆ. ವರ್ಷಗಳಿಂದ ಜನರಿಗೆ ಕಾಟ ಕೊಟ್ಟಿದ್ದ ಆನ್‌ಲೈನ್ ಲೋನ್ ಆಪ್‌ಗಳು ಈಗ ಪೊಲೀಸರಿಂದ ಕಾಟ ಎದುರಿಸುವ ಸ್ಥಿತಿ ಒದಗಿ ಬಂದಿದೆ. ಮಾನ ಹರಾಜು ಹಾಕಿ ಸಾಲ ವಸೂಲಿ ಮಾಡುತ್ತಿದ್ದ ಆಪ್‌ಗಳು ಸದ್ಯಕ್ಕೆ ತನಿಖೆ ಎದುರಿಸಲಾಗದೇ ಸದ್ದಿಲ್ಲದೇ ಸ್ಥಗಿತಗೊಳ್ಳುತ್ತಿವೆ ! ಆನ್‌ಲೈನ್ ಲೋನ್ ಪಡೆದವರು ಅದೃಷ್ಟವಂತರು ಎಂಬಂತಾಗಿದೆ.

ಆನ್‌ಲೈನ್ ನಲ್ಲೇ ತುರ್ತು ಸಾಲ ನೀಡಿದ ಆಪ್‌ಗಳ ಪರವಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೂರು ಕಾಲ್ ಸೆಂಟರ್ ಗಳು ರದ್ದಾಗಿವೆ. ಮಾತ್ರವಲ್ಲ ಬರೋಬ್ಬರಿ 25 ಕ್ಕೂ ಹೆಚ್ಚು ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಿಂದ ಕಾಲ್ಕಿತ್ತಿವೆ. ಅಚ್ಚರಿ ಏನೆಂದರೆ ಸಾಲ ಕೊಟ್ಟ ಬ್ಯಾಂಕೇತರ ಆರ್ಥಿಕ ಸಂಸ್ಥೆಗಳು ಇದೀಗ ಮಕಾಡೆ ಮಲಗುವಂತಾಗಿದೆ.

ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?ಆನ್‌ ಲೈನ್ ಲೋನ್ ಆಪ್‌ ಗಳಿಂದ ಪಡೆದ ಸಾಲ ಮನ್ನಾ ಆದಂಗೆ ?

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಆನ್‌ಲೈನ್ ಲೋನ್ ಆಪ್‌ಗಳ ಸಾಲ ನೀಡುವ ಕಾನೂನು ಬಾಹಿರ ಕೃತ್ಯದ ಬಗ್ಗೆ ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ದಾಳಿ ನಡೆಸಿದ್ದರು. ಅಕ್ರಮದ ಬಗ್ಗೆ ತನಿಖೆ ಆರಂಭಿಸುತ್ತಿದ್ದಂತೆ ಇಪ್ಪತ್ತೈದಕ್ಕೂ ಹೆಚ್ಚು ಆನ್‌ಲೈನ್ ಆಪ್‌ ಗಳು ಕಾರ್ಯ ಸ್ಥಗಿತಗೊಳಿಸಿವೆ. ಮೂರು ಕಾಲ್ ಸೆಂಟರ್ ಬಂದ್ ಆಗಿವೆ. ಸಾಲ ಪಡೆದು ಸಂಕಷ್ಟಕ್ಕೆ ಒಳಗಾದವರು ಸಾಕಷ್ಟು ದೂರು ನೀಡಿದ್ದು, ಅವುಗಳ ಆಧಾರದ ಮೇಲೆ ಆಪ್ ಗಳಿಗೆ ಸಾಲ ನೀಡಿದ್ದ ಬ್ಯಾಂಕೇತರ ಸಂಸ್ಥೆಗಳು ವಹಿವಾಟು ಸ್ಥಗಿತಗೊಳಿಸಿವೆ. ಬ್ಯಾಂಕ್ ವಹಿವಾಟಿನ ಖಾತೆಗಳನ್ನು ರದ್ದು ಪಡಿಸಿದ್ದು ಆನ್‌ಲೈನ್ ಆಪ್‌ಗಳ ಅಕ್ರಮ ಜಾಲದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಇನ್ನೊಂದಡೆ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲೂ ಸಹ ಹಲವು ಕೇಸು ದಾಖಲಿಸಿಕೊಂಡಿದ್ದು ರಾಜ್ಯದಲ್ಲಿ ಎರಡು ಪ್ರತ್ಯೇಕ ಸಂಸ್ಥೆಗಳು ಆನ್‌ಲೈನ್ ಆಪ್ ಗಳ ವಿರುದ್ಧ ತನಿಖೆ ಚುರುಕುಗೊಳಿಸಿವೆ.

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಇನ್ನೊಂದಡೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ 158 ಕ್ಕೂ ಹೆಚ್ಚು ಆಪ್‌ಗಳನ್ನು ಸ್ಥಗಿತಗೊಳಿಸುವಂತೆ ಸೈಬರಾಬಾದ್ ಪೊಲೀಸರು ಗೂಗಲ್ ಕಂಪನಿಗೆ ಪತ್ರ ಬರೆದಿದ್ದಾರೆ. ಗ್ರಾಹಕರಿಂದ ಹೆಚ್ಚು ಬಡ್ಡಿ ವಸೂಲಿ, ಖಾಸಗಿ ಮಾಹಿತಿ ದುರ್ಬಳಕೆ ಮತ್ತು ಕಿರುಕುಳ ನೀಡಿದ ಆರೋಪದ ಮೇಲೆ ಅವುಗಳನ್ನು ಸ್ಥಗಿತಗೊಳಿಸಲು ಪೊಲೀಸರು ಸೂಚಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಆಪ್‌ ಗಳು ಕಾರ್ಯ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಯಾವುದೇ ಸಂಸ್ಥೆ ಸಾಲ ನೀಡಬೇಕಾದರೆ ಆರ್‌ಬಿಐ ನಲ್ಲಿ ನೋಂದಣಿ ಮಾಡಿಸಿರಬೇಕು. ಇಲ್ಲವೇ ಸಂಬಂಧಪಟ್ಟ ರಾಜ್ಯದ ಸಹಕಾರ ಇಲಾಖೆಯಲ್ಲಿ ಪರವಾನಗಿ ಪಡೆದು ಬಡ್ಡಿ ವಹಿವಾಟು ನಡೆಸಬೇಕು. ಆನ್‌ಲೈನ್ ನ ಆಪ್‌ಗಳು ಯಾವುವೂ ಈ ರೀತಿಯ ಪರವಾನಗಿ ಪಡೆದಿಲ್ಲ. ಕೆಲವು ಬ್ಯಾಂಕೇತರ ಆರ್ಥಿಕ ಸಂಸ್ಥೆಗಳಿಂದ ಸಾಲ ಪಡದು ಅದನ್ನು ಆನ್‌ಲೈನ್ ಮೂಲಕ ಬಡ್ಡಿ ವ್ಯಾಪಾರ ನಡೆಸುತ್ತಿದ್ದವು. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂಬುದನ್ನು ಆರ್‌ಬಿಐ ಸ್ಪಷ್ಟಪಡಿಸಿತ್ತು. ಈ ನಿಯಮ ಬಾಹಿರ ಸಂಸ್ಥೆಗಳು ನೀಡಿದ್ದ ಸಾಲವನ್ನು ಸದ್ಯದ ಸ್ಥಿತಿಯಲ್ಲಿ ವಸೂಲಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ವಹಿವಾಟು ನಡೆಸಿ ತನಿಖೆ ಎದುರಿಸುತ್ತಿರುವ ಆಪ್‌ ಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾಲ್ ಸೆಂಟರ್ ಗಳು ಸಹ ಒಂದೊಂದಾಗಿ ಕಾರ್ಯ ಸ್ಥಗಿತಗೊಳಿಸುತ್ತಿವೆ. ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಆನ್‌ಲೈನ್ ನಿಂದ ಸಾಲ ಪಡೆದವನೇ ಜಾಣ ಎಂಬಂತಾಗಿದೆ.

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆದವನೇ ಜಾಣ !

ನೆರೆ ರಾಜ್ಯಗಳಾದ ತೆಲಂಗಾಣ ಮತ್ತು ತಮಿಳುನಾಡು ಪೊಲೀಸರು ಸಹ ಏಕ ಕಾಲದಲ್ಲಿಯೇ ತನಿಖೆ ನಡೆಸುತ್ತಿದ್ದಾರೆ. ಹೀಗಾಗಿ ಇಡೀ ದಕ್ಷಿಣ ಭಾರತದಲ್ಲಿ ಏಕ ಕಾಲದಲ್ಲಿ ತನಿಖೆ ನಡೆಸುತ್ತಿರುವುದರಿಂದ ಚೀನಾ ಮೂಲದ ಆಪ್‌ಗಳ ಬಾಗಿಲು ಒಂದೊಂದಾಗಿ ಬಂದ್ ಆಗುತ್ತಿವೆ. ಬಂದ್ ಆಗಿರುವ ಆಪ್‌ ಗಳಿಂದ ಸಾಲ ಕೊಟ್ಟವರು ಸದ್ಯದ ಮಟ್ಟಿಗೆ ವಸೂಲಿ ಮಾತೇ ಆಡದ ಸ್ಥಿತಿ ನಿರ್ಮಾಣವಾಗಿದೆ. ಸಾಲ ನೀಡುವಾಗ ಆನ್‌ಲೈನ್ ಆಪ್‌ಗಳು ಸಾಲ ಮರುಪಾವತಿ ಬಗ್ಗೆ ಕೆಲವು ಷರತ್ತುಗಳನ್ನು ವಿಧಿಸಿ ಅದಕ್ಕೆ ಗ್ರಾಹಕ ಕೂಡ ಒಪ್ಪಿಗೆ ನೀಡಿರುತ್ತಾನೆ. ಬ್ಯಾಂಕಿಂಗ್ ವ್ಯಾಪ್ತಿಗೆ ಬರುವ ಕಾರಣ ಆಪ್‌ ಗಳು ತಮಗಿಷ್ಟ ಬಂದ ನಿಯಮಗಳನ್ನು ವಿಧಿಸಿ ಮಾಡಿಕೊಳ್ಳುವ ಕರಾರುಗಳಿಗೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ಹೀಗಾಗಿ ಸಾಲ ವಸೂಲಿ ಸಂಬಂಧ ನೋಟಿಸ್ ನೀಡಿದರೂ ಅದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹಿರಿಯ ವಕೀಲ ಶಂಕರಪ್ಪ ತಿಳಿಸಿದ್ದಾರೆ. ಆನ್‌ಲೈನ್ ನಲ್ಲಿ ಸಾಲ ಪಡೆದು ಮರ್ಯಾದೆಗೆ ಹೆದರುತ್ತಿದ್ದವರು ಸದ್ಯದ ಮಟ್ಟಿಗೆ ನಿಟ್ಟಿಸಿರು ಬಿಡುವಂತಾಗಿದೆ.

English summary
Google to Remove Unauthorised Instant Lending Apps from the Google Play Store Soon. Already 25 apps removed.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X