keyboard_backspace

ನವಲ್ನಿ ವಿಚಾರಕ್ಕೆ ಜರ್ಮನಿ ಚಾನ್ಸೆಲರ್ ಮರ್ಕೆಲ್, ರಷ್ಯಾ ಅಧ್ಯಕ್ಷ ಪುಟಿನ್‌ ನಡುವೆ ಘರ್ಷಣೆ

Google Oneindia Kannada News

ಮಾಸ್ಕೋ, ಆಗಸ್ಟ್‌ 21: ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಮಾಸ್ಕೋದಲ್ಲಿ ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಲ್ನಿ ವಿಚಾರದಲ್ಲಿ ಘರ್ಷಣೆ ನಡೆದಿದೆ. ಕ್ರೆಮ್ಲಿನ್ ವಿಮರ್ಶಕರಾದ ಅಲೆಕ್ಸಿ ನವಲ್ನಿಯನ್ನು ರಾಜಕೀಯ ಚಟುವಟಿಕೆ ಹಿನ್ನೆಲೆ ಜೈಲಿಗೆ ಹಾಕಲಾಗಿದೆ ಎಂಬ ಆರೋಪವನ್ನು ರಷ್ಯಾದ ಅಧ್ಯಕ್ಷ ವಾದ್ಲಿಮರ್‌ ಪುಟಿನ್‌ ನಿರಾಕರಿಸಿದ್ದಾರೆ.

ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಸುಮಾರು 16 ವರ್ಷಗಳ ಅಧಿಕಾರಾವಧಿಯ ನಂತರ ಮುಂದಿನ ತಿಂಗಳು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ಏಂಜೆಲಾ ಮರ್ಕೆಲ್ ರಷ್ಯಾಕ್ಕೆ ತಾನು ಚಾನ್ಸೆಲರ್ ಆಗಿರುವ ಸಂದರ್ಭದ ಕೊನೆಯ ಪ್ರವಾಸಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಏಂಜೆಲಾ ಮರ್ಕೆಲ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ವಾಗ್ವಾದ ನಡೆದಿದೆ.

 ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ, ಯುಎಸ್‌ ನಡುವೆ ಘರ್ಷಣೆ ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ, ಯುಎಸ್‌ ನಡುವೆ ಘರ್ಷಣೆ

ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿಗೆ ವಿಷ ಪ್ರಾಶನವಾದ ಬಳಿಕ ಜರ್ಮನಿಯಲ್ಲಿ ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅಲ್ಲಿಂದ ವಾಪಾಸ್‌ ಆದ ಬಳಿ ನವಲ್ನಿಯನ್ನು ವಂಚನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಆದರೆ ಆ ಬಳಿಕ ಈವರೆಗೂ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆ, "ಮಾತುಕತೆಯ ಸಂದರ್ಭ ಅಲೆಕ್ಸಿ ನವಲ್ನಿಯನ್ನು ಬಿಡುಗಡೆ ಮಾಡುವಂತೆ ನಾನು ಪುಟಿನ್‌ ಬಳಿ ಮನವಿ ಮಾಡಿದೆ," ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಹೇಳಿದ್ದಾರೆ.

 ನವಲ್ನಿ ಬಿಡುಗಡೆಗೆ ಜರ್ಮನಿ ಚಾನ್ಸೆಲರ್‌ ಮರ್ಕೆಲ್ ಮನವಿ

ನವಲ್ನಿ ಬಿಡುಗಡೆಗೆ ಜರ್ಮನಿ ಚಾನ್ಸೆಲರ್‌ ಮರ್ಕೆಲ್ ಮನವಿ

ಸಂಘರ್ಷದ ಬಗ್ಗೆ ಮಾತನಾಡಿದ ಅಲೆಕ್ಸಿ ನವಲ್ನಿ, "ನಾವು ಅಲೆಕ್ಸಿ ನವಲ್ನಿಯ ಸ್ಥಿತಿಯ ಬಗ್ಗೆ ಮಾತನಾಡಿಕೊಂಡೆವು. ನಾನು ಮತ್ತೊಮ್ಮೆ ಅಲೆಕ್ಸಿ ನವಲ್ನಿಯನ್ನು ಬಿಡುಗಡೆ ಮಾಡುವಂತೆ ರಷ್ಯಾ ಅಧ್ಯಕ್ಷ ವಾದ್ಲಿಮರ್‍ ಪುಟಿನ್‌ ಬಳಿ ಬೇಡಿಕೆ ಇಟ್ಟೆ. ಹಾಗೆಯೇ ನಾವು ಈ ಪ್ರಕರಣವನ್ನು ಬಿಡಲಾರೆವು. ಮುಂದುವರಿಸುತ್ತೇವೆ ಎಂದ್ದಿದೇನೆ," ಎಂದು ತಿಳಿಸಿದ್ದಾರೆ. ಆದರೆ ಪುಟಿನ್‌ "ಅಲೆಕ್ಸಿ ನವಲ್ನಿ ಕಾನೂನು ಉಲ್ಲಂಘನೆ ಮಾಡಿದ ಹಿನ್ನೆಲೆ ಶಿಕ್ಷೆಗೆ ಒಳಗಾಗಿದ್ದಾನೆ. ಆತ ರಾಜಕೀಯ ಕಾರ್ಯ ಮಾಡಿರುವುದು ಅಲ್ಲ, ಆತ ಕ್ರಿಮಿನಲ್‌ ಅಪರಾಧ ಎಸಗಿದ್ದಾನೆ," ಎಂದು ಹೇಳಿದ್ದಾರೆ.

ಯುಎಸ್‌ ಅಫ್ಘಾನ್‌ ತೊರೆದಂತೆ ಮಧ್ಯ ಏಷ್ಯಾದಲ್ಲಿ ದೊಡ್ಡಣ್ಣನ ಸ್ಥಾನಕ್ಕೆ ಏರಲಿದೆಯೇ ರಷ್ಯಾ?ಯುಎಸ್‌ ಅಫ್ಘಾನ್‌ ತೊರೆದಂತೆ ಮಧ್ಯ ಏಷ್ಯಾದಲ್ಲಿ ದೊಡ್ಡಣ್ಣನ ಸ್ಥಾನಕ್ಕೆ ಏರಲಿದೆಯೇ ರಷ್ಯಾ?

 ನವಲ್ನಿ ಬಗ್ಗೆ ರಷ್ಯಾ ಇತ್ತೀಚೆಗೆ ಹೇಳಿದ್ದು ಹೀಗೆ..

ನವಲ್ನಿ ಬಗ್ಗೆ ರಷ್ಯಾ ಇತ್ತೀಚೆಗೆ ಹೇಳಿದ್ದು ಹೀಗೆ..

ಬುಧವಾರ ರಷ್ಯಾ ವಿದೇಶಾಂಗ ಸಚಿವಾಲಯವು ಅಲೆಕ್ಸಿ ನವಲ್ನಿ ವಿಚಾರದಲ್ಲಿ ಸುದೀರ್ಘವಾದ ಹೇಳಿಕೆಯನ್ನು ಬಿಡುಗಡೆ ಮಾಡಿದೆ. "ಜರ್ಮನಿ ಮತ್ತು ಅದರ ಮಿತ್ರರಾಷ್ಟ್ರಗಳ" ಕಳೆದ 12 ತಿಂಗಳುಗಳಲ್ಲಿ ಕೈ ಗೊಂಡ ಕ್ರಮಗಳು ಜಾಗತಿಕವಾಗಿ ರಷ್ಯಾವನ್ನು ಅಪಖ್ಯಾತಿಗೊಳಿಸುವ ಅಥವಾ ಅಪಮಾನ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಹಾಗೂ ಪ್ರಚೋದಿತವಾಗಿದೆ ಎಂಬುವುದು ಸ್ಪಷ್ಟವಾಗಿ ಕಂಡು ಬರುತ್ತದೆ," ಎಂದು ಹೇಳಿದೆ. "ನವಲ್ನಿ ಮೇಲೆ ವಿಷ ಪ್ರಯೋಗ ಮಾಡಲಾಗಿದೆ ಎಂಬ ಬಗ್ಗೆ ಈ ಆರೋಪಗಳನ್ನು ಮಾಡುವವರು ಪುರಾವೆಯನ್ನು ಒದಗಿಸುವಲ್ಲಿ ವಿಫಲವಾಗಿದ್ದಾರೆ," ಎಂದು ಸಚಿವಾಲಯ ಆರೋಪ ಮಾಡಿದೆ. ಜರ್ಮನಿಯು ಯಾವುದೇ ಆದಾರವಿಲ್ಲದೆ ವಿನಾಃ ಕಾರಣ ಆರೋಪ ಮಾಡುತ್ತಿದೆ ಎಂದು ದೂರಿದೆ.

 ವಿಚ ಪ್ರಶಾನದಲ್ಲಿ ರಷ್ಯಾ ಗುಪ್ತಚರ ಅಧಿಕಾರಿಗಳ ಕೈವಾಡ ಶಂಕೆ

ವಿಚ ಪ್ರಶಾನದಲ್ಲಿ ರಷ್ಯಾ ಗುಪ್ತಚರ ಅಧಿಕಾರಿಗಳ ಕೈವಾಡ ಶಂಕೆ

ಶುಕ್ರವಾರ ಅಲೆಕ್ಸಿ ನವಲ್ನಿಗೆ ವಿಷಪ್ರಾಶನ ಮಾಡಿರುವುದಕ್ಕೆ ರಷ್ಯನ್‌ ರಷ್ಯಾದ ಗುಪ್ತಚರ ಅಧಿಕಾರಿಗಳ ಜವಾಬ್ದಾರರೇ ಹೊರತು, ಕ್ರೆಮ್ಲಿನ್‌ ಆಗಲಿ ಅಥವಾ ಬೇರೆ ಯಾರೇ ಆಗಲಿ ಜವಾಬ್ದಾರರಲ್ಲ. ಶುಕ್ರವಾರದಂದು ಮೂರು ಯುರೋಪಿಯನ್ ಪತ್ರಿಕೆಗಳಲ್ಲಿ ಪ್ರಕಟವಾದ ಪತ್ರದಲ್ಲಿ ನವಲ್ನಿ ರಷ್ಯಾದಂತಹ ದೇಶಗಳಲ್ಲಿ ಭ್ರಷ್ಟಾಚಾರವನ್ನು ಎದುರಿಸಲು ಬೇಕಾದ ಅಧಿಕ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದರು. ಬ್ರಿಟನ್‌ನಲ್ಲಿ ಸರ್ಕಾರವು ಏಳು ವ್ಯಕ್ತಿಗಳ ವಿರುದ್ಧ ನಿರ್ಬಂಧಗಳ ವಿವರಗಳನ್ನು ಪ್ರಕಟ ಮಾಡಿತ್ತು. ಹಾಗೆಯೇ ರಷ್ಯಾದ ಗುಪ್ತಚರ ಅಧಿಕಾರಿಗಳು ಅಲೆಕ್ಸಿ ನವಲ್ನಿಗೆ ವಿಷ ಪ್ರಾಶನ ಮಾಡಿರುವುದರಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದಿದೆ. ಆದರೆ ಈ ಬಗ್ಗೆ ಮಾಸ್ಕೋ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

'ಇನ್ಮುಂದೆ ಶತ್ರುಗಳಲ್ಲ': ತಾಲಿಬಾನ್‌ಗೆ ರಷ್ಯಾ ಬೆಂಬಲಿಸುವುದಾದರೂ ಏಕೆ?'ಇನ್ಮುಂದೆ ಶತ್ರುಗಳಲ್ಲ': ತಾಲಿಬಾನ್‌ಗೆ ರಷ್ಯಾ ಬೆಂಬಲಿಸುವುದಾದರೂ ಏಕೆ?

 ಅಫ್ಘಾನಿಸ್ತಾನದ ಬಗ್ಗೆಯೂ ಪುಟಿನ್‌ ಮರ್ಕೆಲ್ ಚರ್ಚೆ

ಅಫ್ಘಾನಿಸ್ತಾನದ ಬಗ್ಗೆಯೂ ಪುಟಿನ್‌ ಮರ್ಕೆಲ್ ಚರ್ಚೆ

ಇನ್ನು ಸುದ್ದಿಗೋಷ್ಠಿಯಲ್ಲಿ ಪುಟಿನ್‌ ಹಾಗೂ ಮರ್ಕೆಲ್‌ ಅಫ್ಘಾನಿಸ್ತಾನದ ವಿಚಾರದಲ್ಲಿಯೂ ಇಬ್ಬರೂ ಚರ್ಚೆ ನಡೆಸಿದರುವುದಾಗಿ ತಿಳಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿ ಸುಮಾರು ಮೂರು ಗಂಟೆಗಳ ಕಾಲ ನಡೆದಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನ ಮಾತ್ರವಲ್ಲದೇ ಲಿಬಿಯಾ, ರಷ್ಯಾದಿಂದ ಜರ್ಮನಿಗೆ ನಾರ್‌ ಸ್ಟ್ರೀಮ್‌ 2 ಪೈಪ್‌ ಲೈನ್‌ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಕ್ಕೆ ಪಡೆದ ನಂತರ ಪುಟಿನ್‌ ಶುಕ್ರವಾರ ನಿರಾಶ್ರಿತರ ನೆಪದಲ್ಲಿ ನೆರೆ ರಾಷ್ಟ್ರಗಳಿಗೆ "ಭಯೋತ್ಪಾದಕರು" ಪ್ರವೇಶಿಸುವುದನ್ನು ತಡೆಯುವುದು ಮುಖ್ಯ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ನಡುವೆ ಈ ಅವಧಿಯಲ್ಲಿ ಹಿಂದಿನ ಪ್ರಜಾಪ್ರಭುತ್ವ ಸರ್ಕಾರಕ್ಕಿಂತ ತಾಲಿಬಾನಿಗಳ ಕೈಯಲ್ಲಿ ಕಾಬೂಲ್​ ನಗರ ಸುರಕ್ಷಿತವಾಗಿದೆ ಎಂದು ರಷ್ಯಾ ಹೇಳಿತ್ತು. ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದ್ದರೂ ಕೂಡಾ ಹಲವಾರು ಬಾರಿ ತಾಲಿಬಾನ್‌ ಜೊತೆ ಸಭೆ ನಡೆಸಿತ್ತು. ಶಾಂತಿ ಹಿನ್ನೆಲೆ ಈ ಮಾತುಕತೆ ನಡೆಸಿದ್ದಾರೆ ಎಂದು ರಷ್ಯಾ ಹೇಳಿಕೊಂಡಿದೆ.

(ಒನ್‌ ಇಂಡಿಯಾ)

English summary
German Chancellor Angela Merkel and Russia president Putin clash over Alex Navalny during talks in Moscow.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X