• search
  • Live TV
keyboard_backspace

''5 ಗಂಟೆಯೊಳಗೆ ಮಸೀದಿ ಕೆಡವಲಾಗಿದೆ, ಪೂರ್ವ ನಿಯೋಜಿತವಲ್ಲವೇ?"

ನವದೆಹಲಿ, ಅ. 1: 1992ರ ಡಿಸೆಂಬರ್ 6ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ ಸೇರಿದಂತೆ 32 ಆರೋಪಿಗಳಿಗೆ ನಿರಾಳವಾದ ಸುದ್ದಿ ಇದಾಗಿದ್ದರೆ, ಅಂದಿನ ಕಾಲದಲ್ಲಿದ್ದ ಉನ್ನತ ಅಧಿಕಾರಿಯೊಬ್ಬರು ಕೋರ್ಟ್ ಆದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಕಾಲದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಪಿ. ವಿ ನರಸಿಂಹರಾವ್ ಪ್ರಧಾನಿಯಾಗಿದ್ದರು. ಪ್ರಧಾನಿ ನರಸಿಂಹರಾವ್ ಅವರಿಗೆ ಗೃಹ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡ್ಬೋಲೆ ಅವರು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಹಫಿಂಗ್ಟನ್ ಪೋಸ್ಟ್ ಜೊತೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?

''ಇದು ಪೂರ್ವಯೋಜಿತ ಕೃತ್ಯವಲ್ಲ ಎಂದು ನ್ಯಾಯಾಧೀಶರು ಈ ತೀರ್ಪಿನಲ್ಲಿ ಉಲ್ಲೇಖಿಸಿ ಎಲ್ಲರನ್ನೂ ಖುಲಾಸೆಗೊಳಿಸಿದ್ದಾರೆ. ಆದರೆ, ಅಷ್ಟು ದೊಡ್ಡ ಮಸೀದಿಯನ್ನು ಕೆಡುವುದು ಎಂದರೆ ಅದು ಪೂರ್ವನಿಯೋಜಿತ ಅಲ್ಲವೆನ್ನುವುದು ಸರಿಯೇ'' ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್ಅಯೋಧ್ಯಾ ನಗರದ ಬಾಬ್ರಿ ಮಸೀದಿ ಧ್ವಂಸ ವಿವಾದ, ಟೈಮ್ ಲೈನ್

ಬಾಬ್ರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟ ನ್ಯಾಯಾಲಯವು ಸುಮಾರು 500 ಸಾಕ್ಷಿಗಳ ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲವೆಂದರೆ, ನಿಜಕ್ಕೂ ಅಚ್ಚರಿ. ಘಟನೆ ನಡೆದ ದಿನ ಅಷ್ಟು ದೊಡ್ಡ ಗುಂಪು(ಕರ ಸೇವಕರು) ಮಸೀದಿ ಸ್ಥಳಕ್ಕೆ ಬಂದು ಸೇರಲು ನನ್ನ ಪ್ರಕಾರ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಐ ಕೋರ್ಟ್ ತೀರ್ಪಿನಿಂದಾಗಿ ನಾನು ತಲ್ಲಣಗೊಂಡಿದ್ದೇನೆ

ಸಿಬಿಐ ಕೋರ್ಟ್ ತೀರ್ಪಿನಿಂದಾಗಿ ನಾನು ತಲ್ಲಣಗೊಂಡಿದ್ದೇನೆ

ಸಿಬಿಐ ಕೋರ್ಟ್ ತೀರ್ಪಿನಿಂದಾಗಿ ನಾನು ತಲ್ಲಣಗೊಂಡಿದ್ದೇನೆ, ಬೃಹತ್ ಮಸೀದಿಯನ್ನು ಐದು ಗಂಟೆಗಳ ಒಳಗೆ ಯಾವುದೇ ಸಿದ್ಧತೆ ಇಲ್ಲದೇ ಉರುಳಿಸುವುದು ಅಸಾಧ್ಯ. ಇದು ನಮ್ಮ ನ್ಯಾಯಾಂಗ ವ್ಯವಸ್ಥೆ, ಅಪರಾಧ ಕಾನೂನು ವ್ಯವಸ್ಥೆಯ ವ್ಯಾಖ್ಯಾನ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬಾಬ್ರಿ ಮಸೀದಿ ಕೆಡವಲು ಯಾವುದೇ ಸಂಚು ನಡೆದಿಲ್ಲ ಎಂದು ಹೇಳಿದರೆ ನಂಬಲು ಬಹಳ ಕಷ್ಟ ನ್ಯಾಯಾಲಯವು ಸುಮಾರು 500 ಸಾಕ್ಷಿಗಳ ವಿಚಾರಣೆ ನಡೆಸಿದರೂ ಸಂಚು ನಡೆದಿದ್ದರ ಸುಳಿವು ಸಿಕ್ಕಿಲ್ಲವೆಂದರೆ, ನಿಜಕ್ಕೂ ಅಚ್ಚರಿ. ಘಟನೆ ನಡೆದ ದಿನ ಅಷ್ಟು ದೊಡ್ಡ ಗುಂಪು(ಕರ ಸೇವಕರು) ಮಸೀದಿ ಸ್ಥಳಕ್ಕೆ ಬಂದು ಸೇರಲು ನನ್ನ ಪ್ರಕಾರ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಪುಸ್ತಕ

ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಪುಸ್ತಕ

ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ನಿವೃತ್ತಿಯ ನಂತರ ಮಾಧವ ಅವರು ಪುಸ್ತಕ ಬರೆದಿದ್ದಾರೆ. ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಾಗೂ ಬಾಬ್ರಿ ಮಸೀದಿ ಕೆಡವಲು ಹಿಂದು ಸಂಘಟನೆಯ ಮುಖಂಡರು ಸಂಚು ರೂಪಿಸಿದ್ದು ಸರ್ಕಾರಕ್ಕೆ ಗೊತ್ತಾಗಿ, ಸರ್ಕಾರ ತೆಗೆದುಕೊಂಡ ಕ್ರಮವನ್ನು ವಿವರಿಸಿದ್ದಾರೆ.

ಕೊನೆ ಅಸ್ತ್ರವಾಗಿ ಸಂವಿಧಾನದ 356ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಕಟ್ಟಡವನ್ನು ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಎರಡು ದಿನಗಳ ಮುಂಚೆಯೇ ಗೃಹ ಸಚಿವಾಲಯವು ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಶಿಫಾರಸ್ಸು ಮಾಡಿತ್ತು. ಆದರೆ ನರಸಿಂಹ ರಾವ್​ ಅವರು, ಆ ಪ್ರಸ್ತಾವವನ್ನು ಒಪ್ಪಲಿಲ್ಲ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಮಸೀದಿಯನ್ನು ಕೆಡವಿದ್ದರೆ ಅದು ಕ್ರಿಮಿನಲ್ ಕೃತ್ಯ

ಮಸೀದಿಯನ್ನು ಕೆಡವಿದ್ದರೆ ಅದು ಕ್ರಿಮಿನಲ್ ಕೃತ್ಯ

ಸುಪ್ರೀಂಕೋರ್ಟ್ ಕೂಡಾ ಮಸೀದಿಯನ್ನು ಕೆಡವಿದ್ದರೆ ಅದು ಕ್ರಿಮಿನಲ್ ಕೃತ್ಯ ಎಂದು ಪರಿಗಣಿಸಿದೆ. ಕ್ರಿಮಿನಲ್ ಸಂಚು ಬಗ್ಗೆ ಸಿಬಿಐ ಒದಗಿಸಿದ್ ಸಾಕ್ಷ್ಯಗಳೇ ನಕಲಿ ಎನ್ನಲಾಗಿದೆ. ಅದು ಕೂಡಾ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಎಂಬುದು ಹುಬ್ಬೇರಿಸುವ ಸಂಗತಿ. ನಾನು ಪೂರ್ತಿ ತೀರ್ಪು ಓದಿಲ್ಲ. ಆದರೆ, ಲಭ್ಯ ಮಾಹಿತಿಯಂತೆ ಕೋರ್ಟಿಗೆ ಸರಿಯಾದ ಸಾಕ್ಷ್ಯವಿಲ್ಲದಿದ್ದರೆ ಈ ರೀತಿ ತೀರ್ಪು ನಿರೀಕ್ಷಿತ. ಆದರೆ, ಈ ಕೇಸಿನಲ್ಲಿ ಸಾಕ್ಷಿ ಆಧಾರಗಳೇ ಇಲ್ಲ ಎಂಬುದು ನನ್ನ ಅಚ್ಚರಿಗೆ ಕಾರಣ ಎಂದಿದ್ದಾರೆ.

32 ಮಂದಿ ಪ್ರಮುಖ ಆರೋಪಿಗಳಾಗಿದ್ದ 28 ವರ್ಷಗಳ ಕೇಸ್‌

32 ಮಂದಿ ಪ್ರಮುಖ ಆರೋಪಿಗಳಾಗಿದ್ದ 28 ವರ್ಷಗಳ ಕೇಸ್‌

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ.ಆಡ್ವಾಣಿ, ಡಾ.ಮುರಳಿ ಮನೋಹರ್‌ ಜೋಶಿ ಮತ್ತು ಉಮಾ ಭಾರತಿ ಸೇರಿದಂತೆ 32 ಮಂದಿ ಪ್ರಮುಖ ಆರೋಪಿಗಳಾಗಿದ್ದ 28 ವರ್ಷಗಳ ಕೇಸ್‌ಗೆ ಒಂದು ಮುಕ್ತಾಯ ಕಂಡಿದೆ. ಸುಮಾರು 2,300 ಪುಟಗಳ ತೀರ್ಪಿನ ಪ್ರಮುಖ ಅಂಶಗಳನ್ನು ಮಾತ್ರ ನ್ಯಾ. ಯಾದವ್ ಅವರು ಓದಿದ್ದಾರೆ. ಧ್ವಂಸಕ್ಕೆ ಯಾವುದೇ ಕ್ರಿಮಿನಲ್ ಸಂಚು ರೂಪಿಸಿಲ್ಲ, ಇದು ಉದ್ರಿಕ್ತರಿಂದ ಆದ ಆಕಸ್ಮಿಕ ಘಟನೆ ಎಂದು ಹೇಳಿದ್ದಾರೆ.

600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ

600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖೆ ನಡೆಸಿದ ಸಿಬಿಐ ಒಟ್ಟು 351 ಜನ ಸಾಕ್ಷಿಗಳು ಹಾಗೂ ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಇದುವರೆಗೆ ಹಾಜರುಪಡಿಸಿದೆ. ಇವೆಲ್ಲವೂ 1992ರ ಡಿಸೆಂಬರ್ 6ರಂದು ಕರಸೇವಕರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು ಎಂಬ ಬಗೆಗಿನ ಸಾಕ್ಷ್ಯಾಧಾರಗಳಾಗಿವೆ. 28 ವರ್ಷದಷ್ಟು ಹಳೆಯ ಪ್ರಕರಣವಾದ ಬಾಬ್ರಿ ಮಸೀದಿ ಧ್ವಂಸದ ವಾದ-ಪ್ರತಿವಾದ 2020 ಸೆಪ್ಟೆಂಬರ್ 1ರಂದು ಮುಕ್ತಾಯಗೊಂಡಿತ್ತು. ಏಪ್ರಿಲ್ ತಿಂಗಳಿನಲ್ಲಿ ತೀರ್ಪು ಪ್ರಕಟವಾಗಬೇಕಿತ್ತು. ಆದರೆ ಸೆಪ್ಟೆಂಬರ್ 30ಕ್ಕೆ ನಿಗದಿಯಾಯಿತು.

ಘಟನೆ ಹಿನ್ನೆಲೆ

ಘಟನೆ ಹಿನ್ನೆಲೆ

ಘಟನೆ ಹಿನ್ನೆಲೆ: 1885ರಿಂದ ಮೊದಲುಗೊಂಡು ಆರಂಭವಾದ ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. 1992ರ ಡಿಸೆಂಬರ್ 6ರಂದು ವಿಎಚ್ ಪಿ, ಶಿವ ಸೇನೆ, ಬಿಜೆಪಿ ಕರಸೇವಕರಿಂದ ಮಸೀದಿ ಧ್ವಂಸ. ಕರಸೇವಕರ ಪಾಲಿಗೆ ಶೌರ್ಯ ದಿವಸವಾಗಿದ್ದರೆ, ಮುಸ್ಲಿಂ ಸಂಘಟನೆಗಳಿಗೆ ಕಪ್ಪು ದಿನವಾಗಿದೆ. ಈ ಘಟನೆಯು ರಾಷ್ಟ್ರವ್ಯಾಪಿ ಹಿಂದೂ -ಮುಸ್ಲಿಂ ಕೋಮು ಗಲಭೆಗೆ ನಾಂದಿ ಹಾಡಿತ್ತು. 2,000ಕ್ಕೂ ಅಧಿಕ ಮಂದಿ ಮರಣ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಲ್ಲೂ ಹಿಂಸಾಚಾರ ಹಬ್ಬಿತು. ಪಕ್ಕದ ದೇಶಗಳಲ್ಲಿ ಹಿಂದೂ ದೇಗುಲಗಳು ಧ್ವಂಸ. ಅಲ್ಲಿಂದ ಮುಂದಕ್ಕೆ ಆ ದೇಶಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಯದಿಂದ, ಅನಾದಾರ ಧೋರಣೆಗೆ ಒಳಪಡಬೇಕಾಯಿತು.

16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣ

16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣ

1992ರಲ್ಲಿ ಅಯೋಧ್ಯೆಯಲ್ಲಿದ್ದ 16ನೇ ಶತಮಾನದ ಬಾಬ್ರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಅಡ್ವಾಣಿ, ಮುರಳಿ ಮನೋಹರ ಜೋಶಿ ಇತರ ಹನ್ನೆರಡು ಮಂದಿ ವಿರುದ್ಧದ ಸಂಚು ರೂಪಿಸಿದ ಆರೋಪವನ್ನು ರಾಯ್ ಬರೇಲಿ ಕೋರ್ಟ್ ಕೈಬಿಟ್ಟು, ಖುಲಾಸೆ ಮಾಡಿತ್ತು. 2010ರಲ್ಲಿ ಅಲಹಾಬಾದ್ ಹೈ ಕೋರ್ಟ್ ಕೆಳಹಂತದ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿತ್ತು. ಇದೀಗ ಸಿಬಿಐ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿತ್ತು. ಮಸೀದಿ ಧ್ವಂಸ ಪ್ರಕರಣಕ್ಕೂ ಮೊದಲು ಗೌಪ್ಯ ಸಭೆಯೊಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಮನೆಯಲ್ಲಿ ನಡೆದಿತ್ತು. ಈ ಕುರಿತಂತೆ ಸಾಕ್ಷಿ ಸಲ್ಲಿಸಲಾಗಿತ್ತು.

ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ

ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ

ಈ ಸಭೆಯಲ್ಲಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಹೀಗೆ ಮಸೀದಿ ಕೆಡವಲು 1990ರಲ್ಲಿ ಅಡ್ವಾಣಿ ಮತ್ತು ಇತರರು ಸಂಚು ರೂಪಿಸಿದ್ದರು ಎಂದು ಸಿಬಿಐ ತನ್ನ ಜಾರ್ಜ್ ಶೀಟ್ ನಲ್ಲಿ ಹೇಳಿದೆ.ಘಟನೆ ನಡೆದು ಸುಮಾರು 17 ವರ್ಷಗಳ ನಂತರ ಲೆಬ್ರಹಾನ್ ಸಮಿತಿಯಿಂದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತನಿಖಾ ವರದಿ ಸಲ್ಲಿಕೆಯಾಗಿತ್ತು. ನವೆಂಬರ್ 2009ರಲ್ಲಿ ಮಸೀದಿ ಧ್ವಂಸ ಪ್ರಕರಣದಲ್ಲಿ ಹಿಂದೂ ಧರ್ಮ ಪಾಲಕ ಬಿಜೆಪಿ ನಾಯಕರ ಕೈವಾಡವಿದೆ ಎಂದ ಲೆಬ್ರಹಾನ್ ಸಮಿತಿ ವರದಿ ಬಗ್ಗೆ ಸಂಸತ್ತಿನಲ್ಲಿ ಭಾರಿ ಗದ್ದಲ ಉಂಟಾಗಿತ್ತು.

English summary
Babri Masjid Verdict: Huge Mosque Coming Down Within 5 Hours Without Planning is Impossible, Said PM Narasimha Rao's Home Secretary Madhav Godbole.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X