keyboard_backspace

ಆ ಕಚೇರಿ ಸಿಸಿಬಿ ಪೊಲೀಸರ ಪಾಲಿಗೆ ಡ್ರಗ್ ಜಾಲ ಸುಳಿವು ನೀಡುವ ದೇಗುಲ !

Google Oneindia Kannada News

ಬೆಂಗಳೂರು, ಡಿಸೆಂಬರ್ 11; ಡ್ರಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆ ಇಡೀ ದೇಶವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದೆ. ಸ್ಯಾಂಡಲ್ ವುಡ್ ನಟಿಯರು ಜೈಲಿಗೆ ಹೋದರು. ರಾಜಕಾರಣಿಗಳ ಮಕ್ಕಳ ಕೈಗೆ ಕೋಳ ತೊಡಿಸಿದರು. ಅಂತಾರಾಷ್ಟ್ರೀಯ ಮಟ್ಟದ ಡ್ರಗ್ ಜಾಲ ಬೇಧಿಸಿದ ಸಿಸಿಬಿ ಪೊಲೀಸರ ಯಶಸ್ವಿನ ಹಿಂಧೆ ಒಂದು ಕಚೇರಿಯ ರೋಚಕ ಸಂಗತಿಯಿದೆ. ಆ ಕಚೇರಿ ಇಲ್ಲದೇ ಹೊಗಿದ್ದಲ್ಲಿ ಈ ಪರಿ ಡ್ರಗ್ ಜಾಲ ಬೇಧಿಸಲು ಆಗುತ್ತಿರಿಲ್ಲ !

ಹೌಧು ಸಿಸಿಬಿ ಪೊಲೀಸರು ಡ್ರಗ್ ಜಾಲದ ವಿರುದ್ಧ ಸಮರ ಸಾರಿ ಯಶಸ್ಸು ಕಾಣಲು ಕಾರಣವಾಗಿದ್ದು ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿ. ಇಲಿಗಳು ಬೋನ್ ಗೆ ಬಿದ್ದ ರೀತಿಯಲ್ಲಿ ಸಿಸಿಬಿ ಪೊಲೀಸರ ಬಲೆಗೆ ಡ್ರಗ್ ಪೆಡ್ಲರ್ ಗಳನ್ನು ಬೀಳಿಸಿದ್ದು ಇದೇ ವಿದೇಶಿ ಅಂಚೆ ಕಚೇರಿ. ಸಿಸಿಬಿ ಪೊಲೀಸರು ಅನೇಕ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಬೆನ್ನಲ್ಲೇ ಬೆಚ್ಚಿ ಬಿದ್ದಿರುವ ಡ್ರಗ್ ಪೆಡ್ಲರ್ ಗಳು ವಿದೇಶಿ ಅಂಚೆ ಕಚೇರಿಯತ್ತ ಮುಖ ಮಾಡಿ ಕೂಡ ಮಲಗಿಲ್ಲ. ಇದರಿಂದ ಸುಮಾರು ನೂರಕ್ಕೂ ಹೆಚ್ಚು ವಿದೇಶಿ ಪಾರ್ಸೆಲ್ ವಿಲೇವಾರಿಯಾಗದೇ ಅಂಚೆ ಕಚೇರಿಯಲ್ಲಿ ಬಿದ್ದಿವೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಚಾಮರಾಜಪೇಟೆಯಲ್ಲಿ ವಿದೇಶಿ ಅಂಚೆ ಕಚೇರಿಯಿದೆ. ವಿದೇಶದಿಂದ ಬರುವ ಯಾವುದೇ ಪಾರ್ಸೆಲ್ ಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿ ವಿಲೇವಾರಿ ಮಾಡಬೇಕು. ಅನುಮಾನ ಬಂದ ಪಾರ್ಸೆಲ್ ತಪಾಸಣೆ ನಡೆಸಿ ಡ್ರಗ್ ಕಂಡು ಬಂದಲ್ಲಿ ಎನ್ ಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ. ಪಾರ್ಸೆಲ್ ಪಡೆಯುಲು ಬರುವರನ್ನು ಬಂಧಿಸಿ ವಿಚಾರಣೆ ನಡೆಸುವ ಮೂಲಕ ಡ್ರಗ್ ಜಾಲ ಪತ್ತೆ ಮಾಡುತ್ತಿದ್ದರು. ಸಿಸಿಬಿ ಪೊಲೀಸರು ವಿದೇಶಿ ಅಂಚೆ ಕಚೇರಿಗೆ ಹೋಗಲಿಕ್ಕೂ ಆಗುತ್ತಿರಲಿಲ್ಲ. ಹೊರಗಿನಿಂದ ಡ್ರಗ್ ಜಾಲ ಜಾಡು ಹಿಡಿದು ತನಿಖೆ ಮಾಡಿದ ಪ್ರಕರಣಗಳಲ್ಲಿ ಅಷ್ಟೇ ಈ ವಿದೇಶಿ ಅಂಚೆ ಕಚೇರಿಯ ಸಿಬ್ಬಂದಿ ಸಹಾಯ ಮಾಡುತ್ತಿದ್ದರು.

Foreign Post Office, Chamarajpet Become Information Center for CCB Police to Detect Drug Racket

ಒಬ್ಬ ಅಧಿಕಾರಿ ವಿಚಿತ್ರ ನಡೆ : ಕೆಲ ತಿಂಗಳ ಹಿಂದೆ ಕೇಂದ್ರ ಸೇವೆಯಿಂದ ಈ ವಿದೇಶಿ ಅಂಚೆ ಕಚೇರಿಗೆ ನಿಯೋಜನೆಗೊಂಡಿದ್ದರು. ಡ್ರಗ್ ಪ್ರಕರಣವೊಂದು ಸಿಸಿಬಿ ಪೊಲೀಸರು ಬೆನ್ನಟ್ಟಿದ್ದಾಗ ಈ ಅಧಿಕಾರಿ ಸಂಪರ್ಕ ಸಿಗುತ್ತದೆ. ವಿದೇಶದಿಂದ ಬರುವ ಅಷ್ಟೂ ಪಾರ್ಸೆಲ್ ಗಳನ್ನು ತಪಾಸಣೆ ಮಾಡಿ, ಡ್ರಗ್ ಕಂಡು ಬಂದಲ್ಲಿ ಕೇಸು ದಾಖಲಿಸಲು ಸಿಸಿಬಿ ಪೊಲೀಸರಿಗೆ ಹೇಳಿದ್ದರು. ಇದರಿಂದ ಕಳೆದ ಹಲವು ತಿಂಗಳಿನಿಂದ ಸಾಕಷ್ಟು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬೇಟೆಯಾಡಿದ್ದರು. ಆ ಅಧಿಕಾರಿ ಬಂದ ==ಬಳಿಕ ಕಸ್ಟಮ್ಸ್ ಅಧಿಕಾರಿಗಳು ಕೂಡ ಶಿಸ್ತು ಬದ್ಧವಾಗಿ ಪಾರ್ಸೆಲ್ ತಪಾಸಣೆ ಮಾಡುತ್ತಿದ್ದರು.ಅನುಮಾನ ಬಂದ ಪಾರ್ಸೆಲ್ ಪರಿಶೀಲಿಸಿ ಡ್ರಗ್ ಇರುವುದು ಪತ್ತೆಯಾದ ಕೂಡಲೇ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು. ಅದರ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಡ್ರಗ್ ಪೆಡ್ಲರ್ ಗಳನ್ನು ಬೆಂಗಳೂರಿನಲ್ಲಿ ಅರೆಸ್ಟ್ ಮಾಡುತ್ತಿದ್ದರು. ಇತ್ತೀಚೆಗೆ ಅ ಅಧಿಕಾರಿ ಕೇಂದ್ರ ಸೇವೆಗೆ ವರ್ಗಾವಣೆಯಾಗಿದ್ದಾರೆ. ಆದರೆ ಸಿಸಿಬಿ ಪೊಲೀಸರ ಪಾಲಿಗಂತೂ ಡ್ರಗ್ ನೆಟ್‌ ವರ್ಕ ಕೊಡುವ ದೇಗುಲ.

ಹೇಗೆ ಬರುತ್ತೆ ಡ್ರಗ್ : ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಸಿಂಥೆಟಿಕ್ ಡ್ರಗ್ ಸಾಗಣೆ ಮಾಡುವ ಮಾರ್ಗಗಳು ಬದಲಾಗಿವೆ. ವಿದೇಶಗಳಿಂದ ಡ್ರಗ್ ನ್ನು ಪ್ಲೈಟ್ ಮೂಲಕ ತರಿಸಿಕೊಳ್ಳುವ ಕಾಲ ಬದಲಾಗಿದೆ. ಇದೀಗ ಏನಿದ್ದರೂ ಡಾರ್ಕ್ ವೆಬ್ ತಾಣದ ಮೂಲಕ ಹ್ಯಾಕರ್ ಗಳು ಡ್ರಗ್ ನ್ನು ಬುಕ್ ಮಾಡ್ತಾರೆ. ಯಾರದ್ದೋ ಹೆಸರಿನ ವಿಳಾಸ ನೀಡುತ್ತಾರೆ. ಹೀಗಾಗಿ ವಿದೇಶಿ ಪಾರ್ಸೆಲ್ ಹೆಸರಿನಲ್ಲಿ ಸಂಬಂಧ ಪಟ್ಟ ರಾಜ್ಯ,, ದೇಶಗಳ ವಿದೇಶಿ ಅಂಚೆ ಕಚೇರಿಗಳಿಗೆ ತಲುಪುತ್ತವೆ. ಇನ್ನು ಅವರನ್ನು ಯಾರ ಹೆಸರಿನಲ್ಲಿ ಬಕ್ ಮಾಡಲಾಗಿರುತ್ತೋ ಅದೇ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಸಲಿ ಪೆಡ್ಲರ್ ಗಳು ವಿದೇಶಿ ಅಂಚೆ ಕಚೇರಿಗಳಲ್ಲಿ ತೆಗೆದುಕೊಂಡು ಹೋಗಲು ಬರುತ್ತಾರೆ. ಸೀಮಾಸುಂಕ ಅಧಿಕಾರಿಗಳು ಎಚ್ಚತ್ತದರೆ ಪಾರ್ಸೆಲ್ ನೆಪದಲ್ಲಿ ಡ್ರಗ್ ತರಿಸಿರುವುರು ಸಿಕ್ಕಿ ಬೀಳುತ್ತಾರ. ಇಲ್ಲದಿದ್ದರೆ ತಪ್ಪಿಸಿಕೊಳ್ಳುತ್ತಾರೆ. ಇನ್ನು ಭ್ರಷ್ಟಾಚಾರ, ಮಾಮೂಲಿ ಎಂಬ ವಿಚಾರ ಬಂದರೆ ಡ್ರಗ್ ಜಾಲ ಎಲ್ಲವನ್ನು ಖರೀಸುವ ಶಕ್ತಿ ಇದೆ. ಹೀಗಾಗಿ ಸರಾಗವಾಗಿ ಸಿಂಥೆಟಿಕ್ ಡ್ರಗ್ ಪಾರ್ಸೆಲ್ ಹೆಸರಿನಲ್ಲಿ ಪೂರೈಕೆಯಾಗುತ್ತದೆ. ಇದೇ ರೀತಿ ಡಾರ್ಕ್ ವೆಬ್ ತಾಣದಲ್ಲಿ ಬುಕ್ ಮಾಡಿದ ಡ್ರಗ್ ಯಾರದ್ದೋ ಹೆಸರಿನಲ್ಲಿ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ಬರುತ್ತದೆ. ಈ ಪಾರ್ಸೆಲ್ ಗಳ ಜಾಡು ಹಿಡಿದೇ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಡ್ರಗ್ ಪಡ್ಲರ್ ಗಳನ್ನು ಬಂಧಿಸುತ್ತಾರೆ. ಇತ್ತೀಚೆಗೆ ಸಿಸಿಬಿ ಪೊಲೀಸರು ದಾಖಲಿಸಿರುವ ಡ್ರಗ್ ಪ್ರಕರಣಗಳಲ್ಲಿ ಅತಿ ಹೆಚ್ಚು ಸಿಕ್ಕಿರಿವುದು ವಿದೇಶಿ ಅಂಚೆ ಕಚೇರಿ ನೀಡಿದ ಸುಳಿವುನಿಂದ ಎಂಬುದು ವಾಸ್ತವ.

Foreign Post Office, Chamarajpet Become Information Center for CCB Police to Detect Drug Racket

ಹೈಡ್ರೋ ಗಾಂಜಾ ಗೊತ್ತೇ ಇರಲಿಲ್ಲ: ವಿದೇಶದಿಂದ ಬರುವ ಎಲ್‌ಎಸ್ ಡಿ, ಎಂಡಿಎಂಎ, ಕೊಕೈನ್ ಮತ್ತಿತರ ಡ್ರಗ್ ಗಳ ಬಗ್ಗೆ ಅರಿವು ಇತ್ತು. ಆದರೆ ಇಡೀ ಭಾರತದಲ್ಲೇ ಮೊಟ್ಟ ಮೊದಲ ಭಾರಿಗೆ ಹೈಡ್ರೋ ಗಾಂಜಾ ಎಂಬ ಮಾದಕ ವಸ್ತು ಇದೆ ಎಂಬುದನ್ನು ಪತ್ತೆ ಮಾಡಿದ್ದು ಬೆಂಗಳೂರಿನ ಸಿಸಿಬಿ ಪೊಲೀಸರು. ಸಿಸಿಬಿ ಪೊಲೀಸ್ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಹೈಡ್ರೋ ಗಾಂಜಾ ಎಂಬ ಡ್ರಗ್ ಇದೆ ಎಂಬುದರ ಬಗ್ಗೆ ಮೊದಲ ಪ್ರಕರಣ ದಾಖಲಿಸಿದ್ದರು. ಅದಕ್ಕಿಂತೂ ಮೊದಲು ಹೈಡ್ರೋ ಗಾಂಜಾ ಸರಾಗವಾಗಿ ರವಾನೆಯಾಗುತ್ತಿತ್ತು. ಬೆಂಗಳೂರು ಸಿಸಿಬಿ ಪೊಲೀಸರು ಹೈಡ್ರೋ ಗಾಂಜಾ ಪತ್ತೆ ಮಾಡಿದ್ದೇ ಇದಗ ಅತಿ ಹೆಚ್ಚು ಸಿಕ್ಕಿಬಿದ್ದಿರುವ ಮಾದಕ ವಸ್ತು.

ಇತ್ತೀಚೆಗೆ ಹೆಬ್ಬಗೋಡಿ ಪೊಲೀಸರು ದೇವರ ಚಿತ್ರ ಇರುವ ಎಲ್ ಎಸ್ ಡಿ ಡ್ರಗ್ ಪತ್ತೆ ಮಾಡಿದ್ದರು. ಈ ಪ್ರಕರಣದ ಮೂಲ ಕೂಡ ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯ ಸುಳಿವು. ಇದಕ್ಕಿಂತೂ ಮೊದಲು ಕೆ.ಜಿ.ನಗರ ಠಾಣೆಯಲ್ಲಿ ಕಾಂಗ್ರೆಸ್ ನಾಯಕರ ಪುತ್ರ ದರ್ಶನ್ ಲಮಾಣಿ ಮತ್ತು ತಂಡ ಸಿಕ್ಕಿಬಿದ್ದಿದ್ದು ಇದೇ ಮೂಲ. ಡ್ರಗ್ ಗೆ ಸಂಬಂಧಿಸಿದ ಸಿಸಿಬಿ ಪೊಲೀಸರು ಬಾಣಸವಾಡಿ ಠಾಣೆ ಪೊಲೀಸ್ ಠಾಣೆಯಲ್ಲಿ ಎರಡು ವರ್ಷದ ಹಿಂದೆ ದಾಖಲಾಗಿದ್ದ ಪ್ರರಕಣ, ಸದ್ಯ ಅದೇ ಪ್ರಕರಣದ ಮರು ತನಿಖೆಯಲ್ಲಿ ನಟಿ ರಾಗಿಣಿ, ಸಂಜನಾ ಸಿಕ್ಕಿಬಿದ್ದಿದ್ದಾರೆ. ಯಾವುದೇ ಡ್ರಗ್ ಪ್ರಕರಣದ ಜಾಡು ಹುಡುಕಿದರೂ ಅದು ಚಾಮರಾಜಪೇಟೆ ಅಂಚೆ ಕಚೇರಿಯ ಸುಳಿವು ಮೂಲ ಎಂಬುದು ಅಷ್ಟೇ ವಾಸ್ತವ.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
Foreign Post Office, Chamarajpet now becomes the information center for CCB Police to detect drug racket. Know more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X