ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷರಿಗಿಂತ ಮಹಿಳೆಯರ ಮೇಲೆ ಕೋವಿಡ್ ಪರಿಣಾಮ ಹೆಚ್ಚು: ಅಧ್ಯಯನ

|
Google Oneindia Kannada News

ನ್ಯೂಯಾರ್ಕ್, ಜೂನ್ 21: ಪುರುಷರಿಗಿಂತ ಮಹಿಳೆಯರು ದೀರ್ಘ ಕೋವಿಡ್‌ನಿಂದ ಬಳಲುತ್ತಿದ್ದಾರೆ ಮತ್ತು ಗಣನೀಯವಾಗಿ ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಅಧ್ಯಯನ ಒಂದರಲ್ಲಿ ತಿಳಿದುಬಂದಿದೆ.

ಲಿಂಗ ಆಧಾರಿತ ಸಂಶೋಧನೆಯ ನಿರ್ಣಾಯಕ ಅಗತ್ಯವನ್ನು ಈ ಸಂಶೋಧನೆ ಒತ್ತಿಹೇಳುತ್ತದೆ. ದೀರ್ಘಕಾಲದ ಕೋವಿಡ್ ಒಂದು ರೋಗಲಕ್ಷಣ ಆಗಿದ್ದು, ಇದರಲ್ಲಿ ಕೋವಿಡ್ -19 ರ ಆರಂಭಿಕ ಸೋಂಕಿನ ನಂತರ ನಾಲ್ಕು ವಾರಗಳಿಗಿಂತ ಹೆಚ್ಚು ಕಾಲ ತೊಡಕುಗಳು ಇರುತ್ತವೆ, ಕೆಲವೊಮ್ಮೆ ಹಲವು ತಿಂಗಳುಗಳವರೆಗೆ ಕೂಡ ಇರುತ್ತದೆ ಎಂದು ಹೇಳಿದೆ.

ಭಾರತದಲ್ಲಿ ಜುಲೈನಲ್ಲಿ ಜಗತ್ತಿನ ಮೊದಲ ಕೋವಿಡ್-19 ಮೂಗಿನ ಲಸಿಕೆಭಾರತದಲ್ಲಿ ಜುಲೈನಲ್ಲಿ ಜಗತ್ತಿನ ಮೊದಲ ಕೋವಿಡ್-19 ಮೂಗಿನ ಲಸಿಕೆ

ಸುಮಾರು 13 ಲಕ್ಷ ರೋಗಿಗಳ ದತ್ತಾಂಶದ ವಿಶ್ಲೇಷಣೆಯನ್ನು ನಡೆಸಲಾಗಿದೆ. ಜಾನ್ಸನ್ ಮತ್ತು ಜಾನ್ಸನ್ ಸಂಸ್ಥೆಯ ಮಹಿಳಾ ತಂಡದ ಮುಖ್ಯ ವೈದ್ಯಕೀಯ ಸಂಶೋಧಕರು, ದೀರ್ಘ ಕೋವಿಡ್ ಹೊಂದಿರುವ ಮಹಿಳೆಯರು ಕಿವಿ, ಮೂಗು ಮತ್ತು ಗಂಟಲಿನ ಸಮಸ್ಯೆಗಳು ಸೇರಿದಂತೆ ವಿವಿಧ ರೋಗಲಕ್ಷಣಗಳೊಂದಿಗೆ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Women Sufferd from Covid Effects More Than Men: Study Says

ಮಾನಸಿಕ ಸಮಸ್ಯೆ, ನರ ಸಂಬಂಧಿತ ಸಮಸ್ಯೆ, ಚರ್ಮ, ಜಠರಗರುಳಿನ ಮತ್ತು ಸಂಧಿವಾತ ಸಮಸ್ಯೆ, ಜೊತೆಗೆ ಸುಸ್ತಿನಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಪುರುಷ ರೋಗಿಗಳು ಮಧುಮೇಹ ಮತ್ತು ಮೂತ್ರಪಿಂಡದ ಸಮಸ್ಯೆಗಳಿಂದ ಆಂತರಿಕಸ್ರಾವ ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.

ಮಹಿಳೆಯರಿಗೆ ಸಮಸ್ಯೆ ಹೆಚ್ಚು

ಮಹಿಳೆಯರಲ್ಲಿ ದೀರ್ಘಕಾಲದ ಕೋವಿಡ್ ರೋಗಲಕ್ಷಣ ಬೆಳವಣಿಗೆಯಾಗುವ ಸಾಧ್ಯತೆಗಳು ಪುರುಷರಿಗಿಂತ ಶೇಕಡಾ 22 ರಷ್ಟು ಹೆಚ್ಚು ಎಂದು ಸಂಶೋಧಕರು 'ಜರ್ನಲ್ ಕರೆಂಟ್ ಮೆಡಿಕಲ್ ರಿಸರ್ಚ್ ಅಂಡ್ ಒಪಿನಿಯನ್‌'ನಲ್ಲಿ ಪ್ರಕಟಿಸಿದ ಅಧ್ಯಯನದಲ್ಲಿ ತಿಳಿಸಿದ್ದಾರೆ.

Women Sufferd from Covid Effects More Than Men: Study Says

"ಮಹಿಳೆ ಮತ್ತು ಪುರುಷರ ನಡುವಿನ ರೋಗ ನಿರೋಧಕ ವ್ಯವಸ್ಥೆಯ ಕಾರ್ಯಚಟುವಟಿಕೆಯಲ್ಲಿನ ವ್ಯತ್ಯಾಸಗಳು ದೀರ್ಘ ಕೋವಿಡ್ ಲಕ್ಷಣಗಳು ಲಿಂಗ ಆಧಾರಿತವಾಗಿರುತ್ತದೆ. ಮಹಿಳೆಯರಲ್ಲಿ ಹೆಚ್ಚು ವೇಗವಾಗಿ ಮತ್ತು ದೃಢವಾದ ಸಹಜ ಮತ್ತು ಹೊಂದಾಣಿಕೆಯ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿರುತ್ತದೆ, ಇದು ಆರಂಭಿಕ ಸೋಂಕು ಮತ್ತು ತೀವ್ರತೆಯಿಂದ ಅವರನ್ನು ರಕ್ಷಿಸುತ್ತದೆ. ಆದಾಗ್ಯೂ, ಇದೇ ವ್ಯತ್ಯಾಸವು ದೀರ್ಘಕಾಲದ ಸ್ವಯಂ ನಿರೋಧಕ ಸಂಬಂಧಿತ ಕಾಯಿಲೆಗಳಿಂದ ಹೆಣ್ಣುಮಕ್ಕಳು ಹೆಚ್ಚು ಬಳಲುವಂತೆ ಮಾಡುತ್ತದೆ," ಎಂದು ಅವರು ಹೇಳಿದರು. ತಂಡವು 640,634 ಒಟ್ಟು ಲೇಖನಗಳನ್ನು 1,393,355 ವ್ಯಕ್ತಿಗಳನ್ನುಅಧ್ಯಯನ ಮಾಡಿ ಈ ವಿಚಾರವನ್ನು ಕಂಡುಕೊಂಡಿದೆ.

ಶುಶ್ರೂಷೆ ಮತ್ತು ಶಿಕ್ಷಣದಂತಹ ಕೆಲವು ವೃತ್ತಿಗಳಲ್ಲಿ ಮಹಿಳೆಯರು ವೈರಸ್‌ಗೆ ಒಡ್ಡಿಕೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಇದಲ್ಲದೆ, "ರೋಗದ ನೈಸರ್ಗಿಕ ಇತಿಹಾಸದ ಮೇಲೆ ಪರಿಣಾಮ ಬೀರುವ ಲಿಂಗದ ಆಧಾರದ ಮೇಲೆ ಆರೈಕೆಯಲ್ಲಿ ಅಸಮಾನತೆಗಳಿರಬಹುದು, ಇದು ಹೆಚ್ಚಿನ ತೊಡಕುಗಳು ಮತ್ತು ಪರಿಣಾಮಗಳಿಗೆ ಕಾರಣವಾಗುತ್ತದೆ."

English summary
In Health Survey, Females with long Covid are presenting with a variety of symptoms including ear, nose, and throat issues; mood disorders, neurological, skin, gastrointestinal and rheumatological disorders; as well as fatigue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X