ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರವಿರೋಧದ ಲಾಭವಾದರೂ ಏನು? ನಡೆಯಲಿ ಪ್ರೇಮೋತ್ಸವ

By ವಿವೇಕ ಪಟಗಾರ, ಬೆಟ್ಕುಳಿ, ಕಾರವಾರ
|
Google Oneindia Kannada News

ಪ್ರೇಮಿಗಳ ದಿನಾಚರಣೆ 10 ವರ್ಷದ ಹಿಂದೆ ಈ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ. ಈ ದಿನಾಚರಣೆಗೆ ಈ ರೀತಿ ಪ್ರಚಾರ ಸಿಗಲು ಮುಖ್ಯ ಕಾರಣ ನಮ್ಮ ಸಂಸ್ಕೃತಿ ಉಳಿಸಲು ಬೀದಿಗಿಳಿಯುತ್ತಾ ಹೋರಾಟ ಮಾಡುತ್ತಿರುವ ಹಿಂದುತ್ವವಾದಿಗಳು. ನಮ್ಮ ಸಮಾಜದಲ್ಲಿ ಯಾವುದಕ್ಕೆ ವಿರೋಧ ಇದೆಯೋ ಅದೇ ಹೆಚ್ಚಾಗಿ ಜನಪ್ರಿಯವಾಗುವುದು.

ಮಾಜಿ ಸಚಿವ ಎಚ್ ವಿಶ್ವನಾಥ ಅವರ ಆತ್ಮಕಥೆ 'ಹಳ್ಳಿಹಕ್ಕಿಯ ಹಾಡು' ಕೆಲ ಕಾಂಗ್ರೆಸಿಗರ ವಿರೋಧದಿಂದ ಜನಪ್ರಿಯವಾಯಿತು. ಎಸ್ಎಲ್ ಭೈರಪ್ಪ ನವರ ಕೃತಿಗಳು ಪ್ರಗತಿಶೀಲರ ವಿರೋಧದಿಂದ. ಯುಆರ್ ಆನಂತಮೂರ್ತಿಯವರ ಕೃತಿಗಳು ಹಿಂದುತ್ವವಾದಿಗಳ ವಿರೋಧದಿಂದಾಗಿ ಎಲ್ಲರೂ ಕೊಂಡು ಓದುವಂತಾಗಿ ಅವರವರ ಅಭಿಮಾನ ಬಳಗ ಸೃಷ್ಟಿಯಾಯಿತು.

ಪುಸ್ತಕಗಳು, ಸಿನಿಮಾಗಳು ಈ ರೀತಿಯಾದ ನೂರಾರು ಉದಾಹರಣೆಗಳು ವಿರೋಧದಿಂದಾಗಿಯೇ ಪ್ರಚಾರಕ್ಕೆ ಬಂದಿರುವದನ್ನು ಕಾಣಬಹುದಾಗಿದೆ. ತೀರಾ ಇತ್ತಿಚೀನ ಬೆಳವಣಿಗೆ ಎಂದರೆ ಟಿಪ್ಪು ಜಯಂತಿಯ ಪರ ವಿರೋಧದಿಂದ ಬೇರೆ ರಾಜ್ಯದಲ್ಲಿಯೂ ಆಚರಣೆ ಪ್ರಾರಂಭವಾಗಿರುವುದು. [ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ]

What is the point in debating about Valentines Day?

ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಹಿಂದೂ ಸಂಸ್ಕೃತಿಗೆ ಮಾರಕ ಎಂಬ ಕಾರಣಕ್ಕಾಗಿ ಒಂದು ಗುಂಪು ವಿರೋಧಿಸುತ್ತಾ ಬಂದಿತು. ಈ ವಿರೋಧ ಹೆಚ್ಚಾಗುತ್ತಾ ನಿಜವಾಗಿ ಪ್ರೇಮಿಗಳ ದಿನಾಚರಣೆಗೆ ಹೆಚ್ಚೆಚ್ಚು ಮಹತ್ವ ಸಿಗಲು ಪ್ರಾರಂಭವಾಯಿತು. ಇದು ಒಂದು ರೀತಿ ಪುಕ್ಕಟೆ ಪ್ರಚಾರ. ಈ ದಿನಾಚರಣೆಯನ್ನು ಹೇಗೆ ಆಚರಿಸಬೇಕು? ಪ್ರೇಮಿಗಳು ಪರಸ್ಪರ ಯಾವ ಯಾವ ರೀತಿಯ ಉಡುಗೊರೆಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ ಹೆಚ್ಚಾಗಿ ಚಚೆ౯ ಆಯಿತು. ಇದರಿಂದ ಇಂದು ಹಳ್ಳಿಹಳ್ಳಿಗಳಲ್ಲಿ ಪ್ರೇಮಿಗಳ ದಿನಾಚರಣೆ ಜನಪ್ರಿಯವಾಗುತ್ತಿದೆ. ಅದರಲ್ಲಿಯೂ ಸೋಷಿಯಲ್ ಮಾಧ್ಯಮದಲ್ಲಿಯಂತು ಈ ದಿನಾಚರಣೆಯ ಪ್ರಚಾರ ತುಂಬಾ ಹೆಚ್ಚಾಗಿಯೇ ಆಗುತ್ತಿದೆ.

ಪ್ರೇಮಿಗಳ ದಿನಾಚರಣೆಯನ್ನು ಮಾಡಲು ಬಿಡುವುದಿಲ್ಲ ಎಂದು ಕೆಲ ಗುಂಪು ಈಗಾಗಲೇ ಮಾಧ್ಯಮದ ಮೂಲಕ ವಿರೋಧ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಗುಂಪುಗಳು ಆಚರಣೆಯನ್ನು ಅರ್ಥಪೂರ್ಣಗೊಳಿಸಲು ತಮ್ಮದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಟ್ಟಾರೆ ಈ ದಿನಾಚರಣೆ ದಿನದಿಂದ ದಿನಕ್ಕೆ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. [ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]

ಈ ದೇಶದಲ್ಲಿ ಯಾವುದೇ ವಿಚಾರವಾಗಿ ಒಂದೇ ಅಭಿಪ್ರಾಯ ಬರಲು ಸಾಧ್ಯವಿಲ್ಲ. ಹೀಗಿರುವಾಗ ದಿನಾಚರಣೆಗಳ ಆಚರಣೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ಮುಂದೆಯೂ ಇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ವೈಭವಿಕರಿಸುವಂತಹ ಸ್ಥಿತಿಯಲ್ಲಿ ನಮ್ಮ ದೇಶ ಇರುವುದು. ಇಂತಹ ಸಂದರ್ಭದಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸುವುದನ್ನು ನಾವಿಂದು ಬಿಡಬೇಕಾಗಿದೆ. ಆರೋಗ್ಯಯುತವಾದ ಚರ್ಚೆಯನ್ನು ಮಾತ್ರ ನಾವು ಹುಟ್ಟುಹಾಕುವ ಅಗತ್ಯವಿದೆ. ಒಂದಂತು ಸತ್ಯ ಎಲ್ಲಿ ವಿರೋಧ ಇದೆಯೋ ಅಲ್ಲಿ ಪ್ರತಿರೋಧ ಎಂದಿಗೂ ಇದ್ದೇ ಇರುವುದು.

ಪ್ರೇಮಿಗಳ ದಿನಾಚರಣೆಯ ಪರ ವಿರೋಧ ಏನಿದ್ದರೂ ಅದು ಚಚೆ౯ಗೆ ಮಾತ್ರ ಇರಲಿ, ಬದಲಾಗಿ ಅದು ಹಿಂಸೆಗೆ ತಿರುಗಿದರೆ ಅದರಿಂದ ಯಾರಿಗೂ ಸುಖವಿಲ್ಲ. ಈ ಸಂದರ್ಭದಲ್ಲಿ ಈ ದಿನದ ಆಚರಣೆ ಹೇಗೆ ಇರಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದಾಗಿರುವುದು. ಆದರೇ ಈ ರೀತಿ ಪ್ರಚಾರಕ್ಕೆ ಕಾರಣರಾದ ವಿರೋಧಿ-ಪರ ಇಬ್ಬರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. [ಹೀಗೊಂದು ಪ್ರೇಮ ಪತ್ರ., ಮೊದಲ ಪುಟ]

English summary
What is the point in debating about Valentines Day? Let the lovers celebrate however they like. Now-a-days people, books, movies are getting famous because of controversies, rather than real stuff in it. Vivek Patagar from Betkuli, Uttara Kannada expresses his feeling about Valentine's Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X