ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳದಿನದಂದು ಮರೆಯಲ್ಲೇ ಬಿಕ್ಕುವ ಇವರ ಅಳಲು ಕಂಡವರ್ಯಾರು?

|
Google Oneindia Kannada News

ಗ್ರೀಟಿಂಗ್ ಕಾರ್ಡ್, ಪ್ರೇಮ ನಿವೇದನೆ, ಗಿಫ್ಟು, ಮೆಸೇಜು, ಹೊಟೇಲ್, ಪಾರ್ಕು, ಮೋಜುಗಳ ಹೊರತಾದ ಪ್ರೇಮಿಗಳ ದಿನ ಕಲ್ಪನೆಗೂ ನಿಲುಕದಿರಬಹುದು!

ಆದರೆ ಭೌತಿಕವಾಗಿ ಇನಿಯ ದೂರವಾದರೂ ಆತನ ನೆನಪ ಹಸಿರಿನಲ್ಲೇ ಉಸಿರಾಡುತ್ತಿರುವ, ಬದುಕಿನ ಪ್ರತಿಕ್ಷಣವನ್ನೂ ಅವನ ಇರುವಿಗಾಗಿ ಹಂಬಲಿಸುವ ಈ ಮಹಿಳೆಯರ ಅಳಲು ಕಂಡವರ್ಯಾರು? ಪ್ರೀತಿ ಎಂಬ ಪದಕ್ಕೆ ವಿಶಾಲ ಅರ್ಥ ನೀಡಿದ ಇಂಥವರೇ ಪ್ರೇಮಿಗಳ ದಿನದ ಜೀವಂತ ಕತೆ ಎನ್ನಿಸುತ್ತಾರೆ...

"ನಿಮ್ಮ ಪತಿ ಹುತಾತ್ಮರಾದರು ಎಂಬ ಸುದ್ದಿ ಕೇಳಿಯೂ ನನ್ನ ಕಣ್ಣು ಹನಿಗೂಡಲಿಲ್ಲ!"

ಭಾರತೀಯ ಸೇನೆಯಲ್ಲಿದ್ದ, ಹುತಾತ್ಮರಾದ ಮೇ.ಶಶಿಧರ್ ನಾಯರ್ ಮತ್ತು ಲಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರ ಪತ್ನಿಯರು ಈ ಅನಿಶ್ಚಿತ ಬದುಕಿನ ಆತಂಕವಿದ್ದೂ ಸೈನಿಕರೇ ಬೇಕೆಂದುಕೊಂಡು ಮದುವೆಯಾದವರು. ಎಷ್ಟೋ ತಿಂಗಳು ಮನೆಯಿಂದ ಆಚೆ ಇರಬೇಕಾದ, ಉಗ್ರರೊಂದಿಗೆ ಹಲಗಲಿರುಳು, ಚಳಿ-ಮಳೆ ಎನ್ನದೆ ಕಾದಾಡಬೇಕಾದ ಸಮಯದಲ್ಲೂ ಅವರಲ್ಲಿ ಹುರುಪು ಬಿತ್ತಿದ್ದ ಕಣ್ಣುಗಳೆಂದರೆ, ಅಲ್ಲಿ ಮನೆಯಲ್ಲಿ ತಮಗಾಗಿಯೇ ಕಾಯುತ್ತಿದ್ದ ಆ ಜೀವ!

ಮೋಜು, ಮಸ್ತಿಯಲ್ಲಿ ಕಳೆದುಹೋಗುವ ಪ್ರೇಮಿಗಳ ದಿನಕ್ಕೆ ನಿಜವಾದ ಅರ್ಥ ನೀಡುವ ಎರಡು ಕತೆಗಳು ಇಲ್ಲಿವೆ.

ಕಣ್ಣೀರುಕ್ಕಿಸುವ ಪ್ರೇಮಕತೆ

ಕಣ್ಣೀರುಕ್ಕಿಸುವ ಪ್ರೇಮಕತೆ

ಪುಣೆಯ ಶಶಿಧರ ನಾಯರ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದವರು. ಕಂಪ್ಯೂಟರ್ ಅಪ್ಲಿಕೇಶನ್ ಪದವೀಧರೆಯಾಗಿದ್ದ ತೃಪ್ತಿ ಎಂಬುವವರನ್ನು ಪ್ರೀತಿಸಿದ್ದ ಶಶಿಧರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ದುರದೃಷ್ಟ ಎಂಬಂತೆ ತೃಪ್ತಿ ಪಾರ್ಶ್ವವಾಯುವಿಗೆ ತುತ್ತಾದರು. ಇಷ್ಟು ಸಿಕ್ಕ ವಯಸ್ಸಿನಲ್ಲಿ ಆದ ಆಘಾತ ಅವರನ್ನು ಹಣ್ಣಾಗಿಸಿತ್ತು. ಬದುಕೇ ಬೇಡ ಅನ್ನಿಸಿತ್ತು. ನಿಶ್ಚಿತಾರ್ಥ ಮುರಿದುಕೊಳ್ಳುವಂತೆ ಶಶಿಧರ ಅವರಿಗೆ ಹಲವರು ಸಲಹೆ ನೀಡಿದ್ದರು. ಆದರೆ ಪ್ರೀತಿಗೆ ಬದ್ಧವಾಗಿದ್ದ ಶಶಿಧರ್ ತೃಪ್ತಿ ಅವರ ಸ್ಥಿತಿಯನ್ನು ಅರಿತೂ ಮದುವೆಯಾದರು. ಎಷ್ಟೋ ಬಾರಿ ಆಕೆಯನ್ನು ಅವರೇ ಹೊತ್ತು ಸಾಗುತ್ತಿದ್ದರು. ಜನವರಿ 2 ರಂದು ಕರ್ತವ್ಯದ ಮೇಲೆ ಹೊರಟ ಶಶಿಧರ್, 'ಬೇಗ ವಾಪಸ್ ಬಂದುಬಿಡುತ್ತೇನೆ' ಎಂದು ಕೈಬೀಸುತ್ತ ಹೋಗಿದ್ದು, ತೃಪ್ತಿಗೆ ಕಣ್ಣಿಗೆ ಕತ್ತಿದಂತಿದೆ!

ವಾಪಸ್ ಬಂದರು, ಆದರೆ ಶವಪೆಟ್ಟಿಗೆಯೊಳಗೆ!

ವಾಪಸ್ ಬಂದರು, ಆದರೆ ಶವಪೆಟ್ಟಿಗೆಯೊಳಗೆ!

"ವಾಪಸ್ ಬಂದುಬಿಡುತ್ತೇನೆ... ಎಂದಿದ್ದ ಅವರ ಮಾತನ್ನೇ ನೆನಪಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಪ್ರತಿ ಬಾರಿಯಂತೆಯೇ ಅಂದೂ ಅವರ ಬರುವಿಕೆಗಾಗಿ ಶಬರಿಯಂತೆ ಕಾಯುತ್ತಿದ್ದರು ತೃಪ್ತಿ... ಕಾಯುವಿಕೆಗೆ ಪೂರ್ಣವಿರಾಮವೆಂಬಂತೆ ಅವರು ಕೊನೆಗೂ ಬಂದರು... ಓಡೋಡಿ ಬಂದು ಬಿಗಿದಪ್ಪಿಕೊಳ್ಳಲಿಲ್ಲ, ಮಿಸ್ಡ್ ಯ ಅ ಲಾಟ್ ಎಂದು ಮುತ್ತಿನ ಮಳೆಗರೆಯಲಿಲ್ಲ... ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ನಾಲ್ಕಾರು ಜನರ ಹೆಗಲ ಮೇಲೆ, ಪೆಟ್ಟಿಗೆಯೊಂದರಲ್ಲಿ ತ್ರಿವರ್ಣ ಧ್ವಜ ಸುತ್ತಿದ್ದ ಅವರ ನಿರ್ಜೀವ ಕಾಯ ತೃಪ್ತಿಯ ಕಣ್ಣೆದುರಲ್ಲಿ ಬಂದಿತ್ತು. ಎಂದಾದರೂ ಇದಾಗಲೇಬೇಕಿತ್ತೇನೋ, ಆದರೆ ಇಷ್ಟು ಬೇಗ?!

ಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದಉಗ್ರನಾಗಿ ಬೆಳೆದ ವಾನಿ, ಭಾರತದ ಯೋಧನಾಗಿ ಹುತಾತ್ಮನಾದ

ನೈಜ ಪ್ರೀತಿಯ ದ್ಯೋತಕ

ನೈಜ ಪ್ರೀತಿಯ ದ್ಯೋತಕ

ಮಾತು ಭಾರವಾಗಿತ್ತು... ಮೌನವೂ ಅಸಹನೀಯ ಅನ್ನಿಸಿತ್ತು, ಕಣ್ಣೀರು ಮುಷ್ಕರ ಹೂಡಿತ್ತು, ಯಾವ ಭಾವವೂ ಹುಟ್ಟದೆ ಮನಸ್ಸು ಕಲ್ಲಾಗಿತ್ತು. ಕುಳಿತಿದ್ದ ವ್ಹೀಲ್ ಚೇರ್ ಅಡಿಯ ಭೂಮಿ ಹಾಗೇ ಬಾಯ್ದೆರೆಯಬಾರದೆ ಅನ್ನಿಸಿತ್ತು. ಮರುಕ್ಷಣವೇ ಮನಸ್ಸು ಸ್ಥಿಮಿತಕ್ಕೆ ಬಂದಿತ್ತು. ಪ್ರೀತಿ ಅಮರ ಅನ್ನೋದಾದರೆ ಅವರ ಭೌತಿಕ ಕಾಯ ಇಲ್ಲದೆಯೂ ಅವರೊಂದಿಗೇ ಬದುಕಬಹುದಲ್ಲ, ಆ ಪ್ರೀತಿಯ ನೆನಪಲ್ಲೇ ಬದುಕ ಸವೆಸಬಹುದಲ್ಲ ಅನ್ನಿಸಿತ್ತು. ಹೌದು, ತೃಪ್ತಿ ಹಾಗೆಯೇ ಬದುಕುತ್ತಿದ್ದಾರೆ... ನೈಜ ಪ್ರೀತಿಯ ದ್ಯೋತಕವಾಗಿ!

ಮರಣೋತ್ತರ ಪರಮವೀರ ಚಕ್ರ

ಮರಣೋತ್ತರ ಪರಮವೀರ ಚಕ್ರ

ಭಯೋತ್ಪಾದಕನಾಗಿ, ನಂತರ ತಪ್ಪಿನ ಅರಿವಾಗಿ ಭಾರತೀಯ ಸೇನೆಗೆ ಸೇರಿದ ಲಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಅವರಿಗೆ ಜನವರಿ 26, ಗಣರಾಜ್ಯೋತ್ಸವ ದಿನದಂದು ಮರಣೋತ್ತರ 'ಪರಮವೀರ ಚಕ್ರ' ಪ್ರಶಸ್ತಿ ನೀಡಲಾಯ್ತು. ಕಳೆದ ನವೆಂಬರ್ ನಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಲಾನ್ಸ್ ನಾಯಕ್ ನಾಜಿರ್ ಅಹ್ಮದ್ ವಾನಿ ಮತ್ತು ಪತ್ನಿ ಮಹಾಜಬೀನ್ ಅವರು ಪ್ರೇಮ ವಿವಾಹವಾಗಿತ್ತು. ಮೊದಲು ಉಗ್ರರಾಗಿದ್ದ ವಾನಿ ತಪ್ಪಿನ ಅರಿವಾಗಿ ದೇಶಸೇವೆಗೆ ತಮ್ಮನ್ನು ತೊಡಗಿಸಿಕೊಂಡರು. ದೇಶಕ್ಕಾಗಿಯೇ ಪ್ರಾಣವನ್ನೂ ಅರ್ಪಿಸಿದರು. ಅವರು ತೋರಿಸಿಕೊಟ್ಟ ಆದರ್ಶವೇ ನನಗೆ ಮಾರ್ಗದರ್ಶಿ ಎನ್ನುವ ಮಹಾಜಬೀನ್ ಪತಿ ಹುತಾತ್ಮರಾದ ಸುದ್ದಿ ಕೇಳಿ ಕಣ್ಣೀರಿಟ್ಟಿರಲಿಲ್ಲವಂತೆ!

ಇಂದು ಸೇನಾ ದಿನ: ಕಾಡುತ್ತಿದೆ ಈ ಸೈನಿಕನ ಕಣ್ಣೀರ ವಿದಾಯದ ಪ್ರೇಮ ಕಥೆಇಂದು ಸೇನಾ ದಿನ: ಕಾಡುತ್ತಿದೆ ಈ ಸೈನಿಕನ ಕಣ್ಣೀರ ವಿದಾಯದ ಪ್ರೇಮ ಕಥೆ

ಪತಿಯ ಮರಣದ ಸುದ್ದಿ ಕಣ್ಣೀರುಕ್ಕಿಸಲಿಲ್ಲ!

ಪತಿಯ ಮರಣದ ಸುದ್ದಿ ಕಣ್ಣೀರುಕ್ಕಿಸಲಿಲ್ಲ!

"ನಿಮ್ಮ ಪತಿ ಭಯೋತ್ಪಾದಕರೊಂದಿಗಿನ ಎನ್ ಕೌಂಟರ್ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ" ಸುದ್ದಿ ಕಿವಿಗೆ ಬಡಿಯುತ್ತಿದ್ದಂತೆಯೇ ಮಹಾಜಬೀನ್ ಬಿಕ್ಕಿ ಬಿಕ್ಕಿ ಅಳುತ್ತಾಳೆ ಎಂದುಕೊಂಡಿದ್ದವರಿಗೆಲ್ಲ ಅಚ್ಚರಿ.. ಆಕೆಯ ಕಣ್ಣಲ್ಲಿ ಹನಿಮೂಡಲಿಲ್ಲ, ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಸಂಗಾತಿಯನ್ನು ಕಳೆದುಕೊಂಡ ನೋವಿಗಿಂತ, ತನ್ನ ಪತಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದನಲ್ಲ ಎಂಬ ಹೆಮ್ಮೆ ಆಕೆಯ ಕಣ್ಣಲ್ಲಿ ಢಾಳಾಗಿ ಕಾಣುತ್ತಿತ್ತು! ಆದರೆ ಈ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ತಮಗೂ, ನಾವಿಯವರಿಗೂ ನಡುವೆ ಇದ್ದ ಒಡನಾಟಗಳನ್ನು ಮಹಾಜಬೀನ್ ಹಂಚಿಕೊಳ್ಳುತ್ತಿದ್ದರು.

ವಾನಿ ಹುತಾತ್ಮರಾದ ಸುದ್ದಿ ಕೇಳಿ ಹನಿಗೂಡದ ಕಣ್ಣು, ಅವರೊಂದಿಗೆ ಒಡನಾಡಿದ ಕ್ಷಣಗಳನ್ನು ಮೆಲುಕು ಹಾಕುವಾಗ ಅರಿವಿಲ್ಲದೆ ಒದ್ದೆಯಾಗಿತ್ತು. ಆದರೆ ಎಲ್ಲ ನೋವನ್ನೂ ಮೀರಿ, ತಾನು ಅವರ ಆದರ್ಶದಲ್ಲೇ ಬದುಕುತ್ತೇನೆ, ಅವರು ನನ್ನೊಂದಿಗೇ ಇದ್ದಾರೆ. ಅವರು ಈ ಜಗತ್ತಿನ ಪಾಲಿಗೆ ಮೃತರಾಗಿರಬಹುದು. ಆದರೆ ನನ್ನ ಮನದಲ್ಲಿ ಅವರಿದ್ದಾರೆ, ನನ್ನ ಪ್ರತಿ ಹೆಜ್ಜೆಗೂ ಅವರು ಜೊತೆಯಾಗುತ್ತಾರೆ... ಎಂದು ಮಹಾಜಬೀನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ!

ವಿಮಾನ ಪತನದಲ್ಲಿ ಮೃತಪಟ್ಟ ಸಮೀರ್ ಸಹೋದರನ ಮನಮಿಡಿಯುವ ಕವನವಿಮಾನ ಪತನದಲ್ಲಿ ಮೃತಪಟ್ಟ ಸಮೀರ್ ಸಹೋದರನ ಮನಮಿಡಿಯುವ ಕವನ

English summary
Valentine's day special stories. Here are two stories of wives of martyred soldiers of India, who is living with their memories.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X