ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲಾಬಿ ಕೊಡುವ ಹೃದಯಕ್ಕೆ ಪ್ರೀತಿಯ ಬರವಿದೆ..!

By ಬಿ.ಎಂ.ಲವಕುಮಾರ್
|
Google Oneindia Kannada News

ವರ್ಷದಿಂದ ವರ್ಷಕ್ಕೆ ಪ್ರೇಮಿಗಳ ದಿನಾಚರಣೆಯಲ್ಲಿಯೂ ಒಂದಷ್ಟು ಅದ್ಧೂರಿತನ, ವೈಭವ, ಜಾಲಿತನ ಎಲ್ಲವೂ ಕಂಡು ಬರುತ್ತಿದೆ. ಗುಲಾಬಿ ಹೂಗಳನ್ನು ನೀಡುವ ಕೈನಲ್ಲಿ ಅದ್ಧೂರಿತನವಿದೆಯಾದರೂ ಹೃದಯದಲ್ಲಿ ಪ್ರೀತಿಗೆ ಬರವಿರುವುದು ಎದ್ದು ಕಾಣುತ್ತಿದೆ.

ಗುಲಾಬಿ ಮೂಲಕ ಪ್ರೀತಿಯನ್ನು ನಿವೇದಿಸುತ್ತಿದ್ದ ಕಾಲವಿತ್ತು. ಐ ಲವ್ ಯೂ ಎನ್ನಲು ಧೈರ್ಯ ಸಾಲದೆ, ಮುಚ್ಚಿಟ್ಟುಕೊಂಡು ದಿನ ಕಳೆಯುತ್ತಿದ್ದ ಕಾಲವೂ ಇತ್ತು. ಈಗ ಎಲ್ಲ ಬದಲಾಗಿದೆ. ಮೊಬೈಲ್, ಸಾಮಾಜಿಕ ಜಾಲ ತಾಣಗಳು ಬಂದ ಬಳಿಕ ಎಲ್ಲವೂ ಸಲೀಸಾಗಿದೆ. ಆದರೆ ಅದರ ಜತೆಜತೆಯಲ್ಲಿ ಬಹಳಷ್ಟು ಜನ ಪ್ರೀತಿ, ಪ್ರೇಮವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದೆಲ್ಲ ಟೈಂಪಾಸ್ ಎಂಬಂತೆ ಮೊದಲೇ ಮಾನಸಿಕವಾಗಿ ಸಿದ್ಧರಾಗುತ್ತಿದ್ದಾರೆ.

ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!ಜರ್ಮನ್ ಅಜ್ಜ ಕತಲಾನ್ ಅಜ್ಜಿಯ ಅಮರ ಪ್ರೇಮ!

ಲೀವಿಂಗ್ ಟುಗೆದರ್ ಸಂಸ್ಕೃತಿ ಹೆಚ್ಚಾಗುತ್ತಿರುವುದರಿಂದ ವ್ಯಾಲೆಂಟೆನ್ಸ್ ಡೇ ಆಚರಣೆಗೆ ಸೀಮಿತವಾಗಿ ಪ್ರೇಮಿಗಳನ್ನು ಬೇರೆ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಪಾಶ್ಚಿಮಾತ್ಯರ ಪ್ರಭಾವ ಇಲ್ಲಿನ ಯುವ ಜನತೆಯ ಮೇಲೆ ಬೀರುತ್ತಿದೆ. ಯುವಕ, ಯುವತಿಯರು, ದುಡಿಯುತ್ತಿರುವುದರಿಂದ ಅವರ ಬದುಕನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಅವರಲ್ಲಿರುವ ಕಾರಣ ಯಾರ ಮುಲಾಜಿಗೂ ಒಳಗಾಗದೆ ನಮ್ಮ ಬದುಕು ನಮಗೆ ಎಂಬಂತೆ ಬದುಕುತ್ತಿದ್ದಾರೆ. ಹಾಗಾಗಿ ದುಡಿಮೆಯ ನಡುವಿನ ರಿಲ್ಯಾಕ್ಸ್ ಎಂಬಂತೆ ಗೋಚರಿಸತೊಡಗಿದ್ದು, ಅದು ಎಂಜಾಯ್ ಎಂಬಂತೆ ಭಾಸವಾಗುತ್ತಿದೆ. ತಿಂದುಂಡು ಓಡಾಡಿ, ಮೈಮನ ಉಲ್ಲಾಸಗೊಳಿಸುವುದಷ್ಟಕ್ಕೆ ಸೀಮಿತವಾಗುತ್ತಿದೆ.

Valentines day special article: Does love become a showiness?

ಈಗ ಗುಲಾಬಿ ಕೊಟ್ಟರೂ ಕೊಡುವಾತನ ಹೃದಯ ಖಾಲಿಯಾಗಿದೆ. ಎಲ್ಲವೂ ತೋರಿಕೆಯ ನಾಟಕವಾಗುತ್ತಿದೆ. ಇದರ ಪರಿಣಾಮವೇ ವಂಚನೆ, ಮೋಸ, ಕೊಲೆ, ಆತ್ಮಹತ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ. ಹೃದಯಗಳ ಮಿಲನಕ್ಕಿಂತ ದೇಹಗಳ ಮಿಲನ ಹೆಚ್ಚಾಗುತ್ತಿದೆ. ಅದು ಬ್ಲಾಕ್‍ಮೇಲ್‍ಗೊಳಗಾಗಿ ಬದುಕು ಮೂರಾಬಟ್ಟೆಯಾಗುತ್ತಿದೆ.

ಬದುಕನ್ನು ಹುಣ್ಣಿಮೆಯಾಗಿಸಿದ ಆ ಕೆಂಪು ಗುಲಾಬಿ ಮತ್ತು ಪ್ರೇಮಿಗಳ ದಿನ! ಬದುಕನ್ನು ಹುಣ್ಣಿಮೆಯಾಗಿಸಿದ ಆ ಕೆಂಪು ಗುಲಾಬಿ ಮತ್ತು ಪ್ರೇಮಿಗಳ ದಿನ!

ಹಿಂದೆಲ್ಲ ಪ್ರೇಮಿಗಳ ದಿನದಂದು ಎಲ್ಲವನ್ನೂ ಗುಲಾಬಿಯೇ ಹೇಳುತ್ತಿತ್ತು. ಪ್ರೇಮಿಗಳು ಗುಲಾಬಿ ಹೂವುಗಳಲ್ಲಿನ ಒಂದೊಂದು ಬಣ್ಣಕ್ಕೂ ಒಂದೊಂದು ರೀತಿಯ ಅರ್ಥವನ್ನು ಕಲ್ಪಿಸಿಕೊಳ್ಳುತ್ತಿದ್ದರು.

ಚೆಂಗುಲಾಬಿ ನೀಡಿದರೆ 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದರ್ಥ ನೀಡುತ್ತಿತ್ತು. ಅಲ್ಲದೆ ಅದು ಪ್ರೀತಿಯ ಸಂಕೇತವಾಗಿ ಎಲ್ಲರನ್ನು ಸೆಳೆಯುತ್ತಿತ್ತು. ಹಳದಿ ಬಣ್ಣದ ಹೂ ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ ಎಂದರ್ಥವನ್ನು ಸೂಚಿಸುತ್ತಿತ್ತು. ಬಿಳಿ ಗುಲಾಬಿ ನಿರಂತರ ಸ್ನೇಹವನ್ನೂ, ತಿಳಿಗುಲಾಬಿ ಈಗಷ್ಟೇ ಮನಸ್ಸು ಅರಳುತ್ತಿದೆ ಎಂಬ ಅರ್ಥವನ್ನು ಹೇಳುತ್ತಿತ್ತು. ಈ ಹೂಗಳ ಬಗ್ಗೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವುದು ಅವತ್ತು ತೆರೆಮರೆಯಲ್ಲಿ ಕಾಣುತ್ತಿತ್ತು.

Valentines day special article: Does love become a showiness?

ಬದಲಾದ ಕಾಲಘಟ್ಟದಲ್ಲಿ ಗುಲಾಬಿ ಹೂ ಹಾಗೆಯೇ ಇದೆ. ಆದರೆ ಅದನ್ನು ಕೊಡುವವರ ಮನಸ್ಥಿತಿ ಬದಲಾಗಿದೆ. ಕೊಟ್ಟ ಹೂವನ್ನು ಬಾಡದೆ ಜೋಪಾನವಾಗಿ ಕಾಪಿಡುವ ಮನಸ್ಸು ಇಲ್ಲದಾಗಿದೆ. ಹಾಗಾಗಿ ಎಲ್ಲೋ ಒಂದು ಕಡೆ ಪ್ರೀತಿ ಪ್ರೇಮ ಹಾದಿ ತಪ್ಪುತಿದೆಯೇನೋ ಎಂಬಂತೆ ಭಾಸವಾಗುತ್ತಿದೆ.

ಅದು ಏನೇ ಇರಲಿ ಪ್ರೀತಿ ನಿರಂತರ ಅದುವೇ ಶಾಶ್ವತ.. ಅದರಾಚೆಗೆ ಎಲ್ಲವೂ ನಶ್ವರ.

English summary
"Is real love existing in this world? We can see only showiness in expressing love by giving red rose, but does that expression really come from inner heart?" Here is an article on today's Valentines day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X