ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Valentine's Day Special: ಪ್ರೇಮ ನಿವೇದನೆಗೆ ಒಂದು ದಿನ ಸಾಕೇ?

|
Google Oneindia Kannada News

ಬೆಂಗಳೂರು, ಫೆಬ್ರವರಿ.08: ವ್ಯಾಲೆಂಟೇನ್ಸ್ ಡೇ.. ಫೆಬ್ರವರಿ ತಿಂಗಳಿನಲ್ಲಿ ಬರುವ ಇದೊಂದು ದಿನ ಯುವಕ ಯುವತಿಯರ ಪಾಲಿಗೆ ಹಬ್ಬ. ಎರಡನೇ ವಾರ ಆರಂಭವಾದರೆ ಸಾಕು, ಪ್ರೇಮಿಗಳಿಗೆ ಒಂದೊಂದು ದಿನವೂ ಒಂದೊಂದು ವಿಶೇಷ.

ಫೆಬ್ರವರಿ.07ರ ದಿನವನ್ನು ಗುಲಾಬಿ ದಿನ ಎಂದು ಆಚರಿಸಿದರೆ ಫೆಬ್ರವರಿ.08 ಪ್ರೇಮ ನಿವೇದನೆಯ ದಿನ ಎಂದು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನಕ್ಕಾಗಿ ಸಾವಿರಾರು ಪ್ರೇಮಿಗಳು ಕಾದು ಕಾದು ತಮ್ಮ ಪ್ರೇಯಸಿಯ ಬಳಿ ಮನಸಿನ ಆಸೆಯನ್ನು ಹೇಳಿಕೊಂಡಿರುತ್ತಾರೆ.

ಮಾಲು ವಿದೇಶಿ ಪಾಲು: ಪ್ರೇಮಿಗಳ ಕೈಗೆಟುಕದ ಕೆಂಗುಲಾಬಿಮಾಲು ವಿದೇಶಿ ಪಾಲು: ಪ್ರೇಮಿಗಳ ಕೈಗೆಟುಕದ ಕೆಂಗುಲಾಬಿ

ಇವತ್ತಿಗೂ ಯುವಕ ಯವತಿಯರು ಇದೊಂದು ದಿನಕ್ಕಾಗಿ ವಾರಗಟ್ಟಲೇ ಪ್ರಿಪೇರ್ ಆಗಿರಬಹುದು. ತಮ್ಮದೇ ಸ್ಟೈಲ್ ನಲ್ಲಿ ಪ್ರೇಮ ನಿವೇದನೆಗೆ ಡಿಫರೆಂಟ್ ಆಗಿ ಪ್ಲ್ಯಾನ್ ಕೂಡಾ ಮಾಡಿಕೊಂಡಿರಬಹುದು. ಅದೆಲ್ಲಕ್ಕೂ ಮುನ್ನ ಒಮ್ಮೆ ಯೋಚಿಸಿ ಪ್ರೀತಿ ಹೇಳೋದಕ್ಕೆ ಒಂದು ದಿನವಷ್ಟೇ ಸಾಕೇ.

ಪ್ರೀತಿ ಹೇಳುವುದಕ್ಕೂ ಪಂಚಾಂಗ ಬೇಕೇ?

ಪ್ರೀತಿ ಹೇಳುವುದಕ್ಕೂ ಪಂಚಾಂಗ ಬೇಕೇ?

ಓಡಾಡುವ ಸಿಟಿ ಬಸ್, ಕಾಲೇಜ್ ಕ್ಯಾಂಪಸ್, ಸಿಟಿ ಬಸ್ ಸ್ಟ್ಯಾಂಡ್, ಸಿನಿಮಾ ಥಿಯೇಟರ್, ಮಾಲ್ ಹಾಗೂ ನಿತ್ಯ ನಡೆದಾಡುವ ರಸ್ತೆ.. ಹೀಗೆ ಎಲ್ಲೋ ಒಂದು ಕಡೆಯಲ್ಲಿ ಕಣ್ಣೆದುರಿಗೆ ಹಾದು ಹೋದ ಹುಡಗಿಯ ಬೆನ್ನು ಹಿಂದೆಯೇ ಮನಸು ಜಾರುತ್ತದೆ. ಲವ್ ಎಟ್ ಫಸ್ಟ್ ಸೈಟ್ ಅಂತಾರಲ್ಲ. ಹಾಗೆ ಹುಟ್ಟಿಕೊಳ್ಳುವ ಪ್ರೀತಿಯನ್ನು ಹೇಳಲು ಇಂಥದ್ದೇ ದಿನ ಎಂಬ ಪಂಚಾಂಗವನ್ನು ಹಾಕಿಕೊಳ್ಳುವುದಾದರೂ ಏಕೆ.

ಪ್ರೀತಿಯ ಪ್ರಸ್ತಾಪಕ್ಕೆ ಒಂದು ವರ್ಷ ಕಾಯಬೇಕೇ?

ಪ್ರೀತಿಯ ಪ್ರಸ್ತಾಪಕ್ಕೆ ಒಂದು ವರ್ಷ ಕಾಯಬೇಕೇ?

ನಿಜ ಅಲ್ಲವೇ.. ಪ್ರೀತಿ ಹುಟ್ಟುವುದಕ್ಕೆ ಮನಸು ಜಾರುವುದಕ್ಕೆ ಯಾವುದೇ ದಿನ, ಘಳಿಗೆ, ಪಂಚಾಂಗ ಇಲ್ಲ. ಹಾಗೆಂದ ಮೇಲೆ ಹೃದಯದಲ್ಲಿ ಮೊಳಕೆಯೊಡೆದ ಮೊದಲ ಪ್ರೀತಿಯ ಹೇಳಲು ಹಿಂಜರಿಕೆ ಬೇಕೇ. ಮನಸಿನ ಮಾತು ತಿಳಿಸಲು ವರ್ಷಗಟ್ಟಲೇ ಕಾಯುವುದು ಏಕೆ. ಇಂಥದ್ದೇ ದಿನ ಪ್ರೀತಿ ಹೇಳಬೇಕು ಎಂಬ ಕಾನೂನು ಏನಾದರೂ ಇದೆಯೇ.

ಪ್ರೀತಿಯ ಎಂಬ ಸ್ಟಾಕ್ ಖಾಲಿ ಆಗುವ ಸರಕು ಅಲ್ಲ

ಪ್ರೀತಿಯ ಎಂಬ ಸ್ಟಾಕ್ ಖಾಲಿ ಆಗುವ ಸರಕು ಅಲ್ಲ

ಪ್ರೀತಿ.. ಪ್ರತಿಯೊಬ್ಬರ ಮನಸಿನಲ್ಲಿರುವ ಖಾಲಿಯಾಗದ ಸ್ಟಾಕ್. ಹಂಚಿದಷ್ಟು ಹೆಚ್ಚಾಗುವ ಪ್ರೀತಿಯನ್ನು ಧಾರಾಳವಾಗಿ ನೀಡಲು ಜುಗ್ಗುತನ ತೋರುವುದಾದರೂ ಏಕೆ ಹೇಳಿ. ಹಾಗೆಂದ ಮಾತ್ರಕ್ಕೆ ಕಂಡ ಕಂಡವರಲ್ಲಿ ಪ್ರೇಮ ನಿವೇದನೆ ಮಾಡುವ ಹುಚ್ಚುತನ ಪ್ರದರ್ಶಿಸುವುದೂ ತರವಲ್ಲ. ಮನಸಿಗೆ ಹಿಡಿಸಿದಾಕೆಯ ತೊರೆದು ಇರಲಾಗದು ಎಂಬ ಭಾವನೆ ಮನಸಿನಲ್ಲಿ ಹುಟ್ಟಿದೆ ಎಂದಾದರೆ ತಡ ಮಾಡುವುದೇ ಬೇಕಿಲ್ಲ. ತಕ್ಷಣ ಪ್ರೇಮ ನಿವೇದನೆ ಮಾಡಿದರೆ ಆಯಿತು.

ಮನಸು ಗೆದ್ದವರಿಗೆ ಅನ್ವಯವಾಗೋದಿಲ್ಲ ನಿಯಮ

ಮನಸು ಗೆದ್ದವರಿಗೆ ಅನ್ವಯವಾಗೋದಿಲ್ಲ ನಿಯಮ

ಪ್ರೇಮ ನಿವೇದನೆಗೆ ಇಂಥದ್ದೇ ದಿನ ಎಂದು ಬೇಕಿಲ್ಲ. ಮನದಲಿ ಚಿಗುರಿದ ಪ್ರೀತಿಗೆ ನೀರುಣಿಸುವ ಸಂಗಾತಿಯೊಡನೆ ಮನದ ಅಭಿರುಚಿ ಹಂಚಿಕೊಳ್ಳುವುಕ್ಕೆ ಹಿಂಜರಿಕೆ ತೋರಿದರೆ ಆಗದು. ಫೆಬ್ರವರಿವರೆಗೂ ಕಾದು ಕಾದು ಪ್ರೀತಿ ಹೇಳುವ ಪ್ರೈಮರಿ ಲವ್ವರ್ಸ್ ಗೆ ಮಾತ್ರ ಈ ನಿಯಮ. ಮೊದಲ ಬಾರಿಗೆ ಪ್ರೇಮ ನಿವೇದನೆ ಮಾಡಲು ಹೊರಟವರಿಗೆ ಈ ನಿಯಮ ಅನ್ವಯಿಸುತ್ತವೆ. ಏಕೆಂದರೆ, ಈಗಾಗಲೇ ಪ್ರೇಮ ನಿವೇದನೆಯಲ್ಲಿ ಗೆದ್ದಿರುವ ಪ್ರೇಮಿಗಳಿಗೆ ಪ್ರಪೋಸ್ ಡೇ ವಿಶೇಷ ಎನಿಸದು. ಪ್ರಪೋಸ್ ಡೇಯನ್ನು ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಿಸಲು ಈ ಪ್ರೇಮಿಗಳೇ ಪ್ಲಾನ್ ಅದಾಗಲೇ ರೆಡಿ ಆಗಿರುತ್ತದೆ.

English summary
Valentine's Day Special: One Day Is Enough For Propose About Love?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X