• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನನ್ನ ನಿರ್ಲಿಪ್ತ ಪ್ರೇಮಿಗೆ, ನಮ್ಮ ನಿರಂತರ ಪ್ರೇಮಕ್ಕೊಂದು ಪತ್ರ!

By Mahesh
|
Google Oneindia Kannada News

'ನನ್ನ ಮನದ ಅಂಗಳದಿ ಎಂದೂ ಬತ್ತದ ಜೀವನದಿಯ ಹರಿಸಿ ಹೋದವನೆ ನಿನ್ನ ಹುಚ್ಚುತನಕ್ಕೆ ಬೆಚ್ಚಾಗಿ ನನ್ನೆದೆಯಲ್ಲಿ ಅಚ್ಚಾಗಿಸಿಕೊಂಡೆ' ನೆನಪಿಗಳ ಸರಮಾಲೆಯನ್ನು ಎಳೆಎಳೆಯಾಗಿ ಬಿಡಿಸುತ್ತಾ ನಿನ್ನತ್ತ ಈ ಪತ್ರವ ಕಳಿಸಿದ್ದೇನೆ ಸ್ವೀಕರಿಸು ಇಲ್ಲಾ ತಿರಸ್ಕರಿಸು ನನ್ನ ಪ್ರೀತಿಯ ಅನುಮಾನಿಸಿದರೂ ಓಕೆ ಅವಮಾನಿಸಬೇಡ ನಿನ್ನ ಮನಸ್ವಿನಿ, ನಾರಾವಿ

ನನ್ನ ನಿನ್ನ ಸ್ನೇಹ ಆಕಸ್ಮಿಕವಾಗಿ ಆದರೂ ಅನವರತ ನಮ್ಮ ಬಾಂಧವ್ಯ ಬೆಸುಗೆ ಬಲವಾಗುತ್ತಾ ಹೋಗಲು ನಮ್ಮಿಬ್ಬರ ನಡುವಿನ ಕಾವ್ಯಾಸಕ್ತಿಯೇ ಕಾರಣ ಎಂದರೆ ನೀನು ಕೂಡಾ ಒಪ್ಪುತ್ತೀಯ. ನಿನ್ನಂಥ ಮೂಡಿ ಫೆಲೋ ನಾನು ನೋಡೇ ಇಲ್ಲ. ಮನಸ್ಸಿಗೆ ತೋಚಿದಾಗಲೆಲ್ಲಾ ಕವನಗಳ ಸಾಲನ್ನು ನನ್ನಡೆಗೆ ಕಳಿಸುತ್ತಿದ್ದೆ. ನನ್ನಲ್ಲಿ ಕಾವ್ಯ ರಚನೆಯ ಶಕ್ತಿ ಅರಳಿಸಿದೆ. ನಾನು ಹೆಚ್ಚೆಚ್ಚು ಬರೆಯ ತೊಡಗಿದಾಗ ನೀ ಲೇಖನಿ ಪಕ್ಕಕ್ಕಿಟ್ಟೆ. [ಸ್ವಪ್ನದಲಿ ಬರೆದ ಪ್ರೇಮ ಪತ್ರ ಜೇಬಲ್ಲೇ ಉಳಿಯಿತು!]

ಬಣ್ಣಿಸಲಿ ಹೇಗೆ ನನ್ನ ಸಂತಸವನು
ಎಷ್ಟೋ ದಿನದಿಂದ ಕಾದಿದ್ದ ಈ ಕ್ಷಣವನು
ಮಾತೇ ಬಾರದಂತಾಗಿದೆ ನಿನ್ನೊಲವ ಮಾತ ಕೇಳಲು
ಮಧುರ ಕ್ಷಣವು ಅರಳಿಸಿದೆ ಎನ್ನ ಮನಸನು ಎಂದು ನಾನು ಬರೆದರೆ

'ಮರೆಯಲಿ ಹೇಗೆ ನಿನ್ನನ್ನು ಮರೆಯಲಾರೆ ನಮ್ಮಿಬ್ಬರ ಗೆಳೆತನವನ್ನು' ಎಂದು ಕಳಿಸಿದ್ದೆ. ಗೆಳೆತನ ಮೀರಿದ ಬಾಂಧವ್ಯ ನಮ್ಮಲ್ಲಿ ಯಾವಾಗ ಮೂಡಿಯೋ ಕಾಣೆ. ನೀನಂತೂ ಏನನ್ನೂ ಬಾಯಿ ಬಿಟ್ಟು ಎಂದೂ ಹೇಳಿದವನಲ್ಲ. ಪಕ್ಕದಲ್ಲಿ ಬಾಂಬ್ ಬಿದ್ದರೂ ಒಮ್ಮೆ ನೋಡಿ ಸುಮ್ಮನಾಗುವ ಜಾಯಮಾನ. ಜಡಭರತನಂತೆ ಇದ್ದು ಬಿಡುತ್ತೀಯ. ಆದರೆ, ನನ್ನಿಂದ್ದಂತೂ ಅದು ಸಾಧ್ಯವಿಲ್ಲ.

ನಾನು ಸಣ್ಣಪುಟ್ಟ ನೋವಿಗೂ ಕಣ್ಣೀರಿಡುವ ಸ್ವಭಾವದವಳು, ನನ್ನನ್ನು ನೀ ಸಂತೈಸುವ ರೀತಿ, ಭಾವನೆಗಳು ನಮ್ಮನ್ನು ಆವರಿಸಿ ಆಳುವ ಮೊದಲು ನಾವು ಎಚ್ಚೆತ್ತುಕೊಳ್ಳಬೇಕು ಎಂದು ಏನೇನೋ ತತ್ವ ಪದ ನೀ ಹೇಳುವುದು ಅರ್ಥವಾಗದಿದ್ದರೂ ನೀನು ಹೇಳುವ ರೀತಿ ಇಷ್ಟವಾಗುತ್ತಿತ್ತು. [ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]

ಒಮ್ಮೆ ನಿನ್ನೊಟ್ಟಿಗೆ ಮಾತು ಬಿಟ್ಟಿದೆ. ದಿನಕ್ಕೊಂದರಂತೆ ನೀ ಪತ್ರ ಕಳಿಸಿದ್ದೆ. ಅಲ್ಲಿಂದ ಹೆಕ್ಕಿದ ಸಾಲುಗಳಿವು

ಭಾವನೆಗಳ ಕೂಡಿಕಳೆವ ಲೆಕ್ಕದಲ್ಲಿ
ಪ್ರೀತಿ ಒಂದೇ ಮೊತ್ತ ಇಲ್ಲಿ
ನನ್ನ ನಿನ್ನ ಒಲವ ಭಾಗಿಸೊ
ವಿರಹ ಎಂದು ಸುಳಿಯದಿಲ್ಲಿ
ಹರುಷವನ್ನು ದ್ವಿಗುಣಗೊಳಿಸೊ
ಪ್ರೇಮ ಸುಧೆಯ ನೀಡಲು
ಮತ್ತೆ ಬರುವೆಯಾ ಗೆಳತಿ
ಅಥವಾ ಮರೆತುಬಿಡುವೆಯಾ

ಎಂದು ಪ್ರಶ್ನಿಸಿದ್ದೆ. ನಿನ್ನನ್ನು ಕಾಡುವುದೆಂದರೆ ಅದೇನೋ ಖುಷಿ ಕೊಡುತ್ತಿತ್ತು. ಆದರೆ, ಅರೆ ಕ್ಷಣ ನಿನ್ನೊಟ್ಟಿಗೆ ಮಾತನಾಡದಿದ್ದರೆ ಏನೋ ಕಳೆದುಕೊಂಡ ಭಾವ ಆವರಿಸಿಬಿಡುತ್ತಿತ್ತು. [ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ]

ಮೌನಿಯಾಗಬೇಡ ನೀನು ಮಾತು ಮರೆವೆನು ನಾನು
ಕಾಣೆಯಾಗಬೇಡ ನೀನು ಎಲ್ಲೆಡೆ ನಿನ್ನೆ ಕಾಣುವೆನು

ಎಂದ ಸಾಲು ಸದಾ ನೆನಪಿನಲ್ಲಿರುತ್ತದೆ. ಮೌನದಲ್ಲೇ ಅನೇಕ ಸಂದೇಶಗಳ ವಿನಿಮಯ ಮಾಡಿಕೊಳ್ಳುವ ಕಲೆಯ ಹೇಳಿಕೊಟ್ಟ ನೀನು ಒಮ್ಮೆ ಕೂಡಾ ಮಾತಿನಲ್ಲಿ, ರೇಖೆಯಲ್ಲಿ ನಿನ್ನ ಭಾವನೆಯಲ್ಲಿ ವ್ಯಕ್ತಪಡಿಸಲಿಲ್ಲ. ಇರಲಿ, ನಿನ್ನ ಒಲವು ನಿನಗೆ, ನನ್ನ ಒಲವು ನನಗೆ, ಸ್ನೇಹ, ಪ್ರೀತಿ ಎಲ್ಲವೂ ಅವಿರತವಾಗಿ ಹರಿಯುವ ಹೊಳೆ, ಒಂದು ದಿನದ ಸಂಭ್ರಮ, ನಿವೇದನೆ ಗೊಡವೆ ನಮಗ್ಯಾಕೆ? [ಪ್ರೇಮಿಗಳ ದಿನ: ಒನ್ ಲೈನ್ ಕನವರಿಕೆಗಳು]

ನೂರಾರು ಮಾತೇಕೆ ಬೇಕು ಅರಿತ ಜೀವವಿದ್ದರೆ ಮೌನವೇ ಸಾಕು, ಅನಿಶ್ಚಿತತೆಯ ಬದುಕಲ್ಲಿ ನಿನ್ನ ಮೇಲಿನ ನಂಬಿಕೆಯೇ ನಿಶ್ಚಿತ-ಇವರಿಗೆ ಮಲೆನಾಡಿಗ

English summary
Valentine's Day Special: A love letter to my adorable, emotionless man by Manaswini, Naravi. This letter reflects her feelings towards the friend in a poetic way of exchanging the words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X